image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸುರತ್ಕಲ್‌ ಟೋಲ್‌ಗೆಟ್‌ ತೆರವುಗೊಳಿಸಿರುವುದೇ ಗುಂಡಿಗಳ ಮುಚ್ಚದಿರಲು ಕಾರಣ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ!!

ಸುರತ್ಕಲ್‌ ಟೋಲ್‌ಗೆಟ್‌ ತೆರವುಗೊಳಿಸಿರುವುದೇ ಗುಂಡಿಗಳ ಮುಚ್ಚದಿರಲು ಕಾರಣ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ!!

ಮಂಗಳೂರು: ತೀವ್ರ ಹದಗೆಟ್ಟ ರಾಷ್ಟ್ರೀಯ ಹೆದ್ದಾರಿಯ ಸುರತ್ಕಲ್‌-ನಂತೂರು ಭಾಗದ ದುರಸ್ತಿ ಮಾಡದಿರುವುದಕ್ಕೆ ಸುರತ್ಕಲ್‌ ಟೋಲ್‌ಗೆಟ್‌ ತೆರವುಗೊಳಿಸಿರುವುದೇ ಕಾರಣ ಎಂಬ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಉತ್ತರವು ನಾಗರಿಕರಲ್ಲಿ ಆಕ್ರೋಶ ಉಂಟು ಮಾಡಿದೆ. ನಾಗರಿಕರೊಬ್ಬರು ಹೆದ್ದಾರಿ ದುರವಸ್ತೆ ಕುರಿತಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ಯೋಜನಾ ನಿರ್ದೇಶಕರ ಕಚೇರಿಗೆ ಇಮೇಲ್‌ ಮೂಲಕ ಪತ್ರ ಬರೆದು ಸರಿಪಡಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಅಧಿಕಾರಿಗಳ ಉತ್ತರ, ರಸ್ತೆ ದುರಸ್ತಿಯಾಗದಿರಲು ನಾವು ಕಾರಣರಲ್ಲ, ನೀವೇ ಕಾರಣ ಎಂಬ ಧಾಟಿಯಲ್ಲಿ ಇರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ಹೆದ್ದಾರಿಯ ಸರಿಯಾದ ನಿರ್ವಹಣೆಗೆ ಹಣ ಅಗತ್ಯ. ಸುರತ್ಕಲ್‌-ನಂತೂರು ಭಾಗದ ನಿರ್ವಹಣೆಗಾಗಿಯೇ ಸುರತ್ಕಲ್‌ನಲ್ಲಿ ಟೋಲ್‌ಗೇಟ್‌ ಹಾಕಲಾಗಿತ್ತು. ಆದರೆ ಸಾರ್ವಜನಿಕರ ಒತ್ತಡದಿಂದ ಅದನ್ನು ಮುಚ್ಚಲಾಗಿದೆ. ಹಾಗಾಗಿ ಹೆದ್ದಾರಿ ನಿರ್ವಹಣೆಗೆ ಹಣದ ಕೊರತೆ ಉಂಟಾಗಿದೆ. ಆದರೂ ಶಾಶ್ವತ ನಿರ್ವಹಣೆಗಾಗಿ ಮೊತ್ತವನ್ನು ಹೊಂದಿಸಲಾಗಿದ್ದು, ಮಳೆ ಕಡಿಮೆಯಾಗುತ್ತಿದ್ದಂತೆ ರಸ್ತೆಯನ್ನು ದುರಸ್ತಿಗೊಳಿಸಲಾಗುವುದು ಎಂದು ಅಧಿಕಾರಿಗಳು ಉತ್ತರಿಸಿದ್ದಾರೆ ಎಂದು ವರದಿಯಾಗಿದೆ.  ಎನ್‌ಎಂಪಿಎ ಪ್ರದೇಶ, ಕೆಐಒಸಿಎಲ್‌, ಕೂಳೂರು ಮುಂತಾದೆಡೆ ದುರಸ್ತಿ ಕೆಲಸ ನಡೆಯುತ್ತಿದೆ ಎಂದು ಎನ್‌ಎಚ್‌ಎಐ ಅಧಿಕಾರಿಗಳು ಉತ್ತರಿಸಿದ್ದಾರೆ. 

Category
ಕರಾವಳಿ ತರಂಗಿಣಿ