image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕರಾವಳಿ ಜನತೆಗೆ ಉನ್ನತ ಶಿಕ್ಷಣದ ಬಾಗಿಲು ತೆರೆದ ಮಂಗಳೂರು ವಿವಿ- ಪ್ರೊ. ಚಿನ್ನಪ್ಪ ಗೌಡ

ಕರಾವಳಿ ಜನತೆಗೆ ಉನ್ನತ ಶಿಕ್ಷಣದ ಬಾಗಿಲು ತೆರೆದ ಮಂಗಳೂರು ವಿವಿ- ಪ್ರೊ. ಚಿನ್ನಪ್ಪ ಗೌಡ

ಮಂಗಳೂರು:   ಕರಾವಳಿ ಕರ್ನಾಟಕದ ಶೈಕ್ಷಣಿಕ ಪ್ರಗತಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಗಣನೀಯ ಕೊಡುಗೆ ನೀಡಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ವಿಶ್ರಾಂತ ಉಪಕುಲಪತಿ ಪೆÇ್ರ. ಕೆ. ಚಿನ್ನಪ್ಪಗೌಡ ಹೇಳಿದ್ದಾರೆ.
 ಅವರು ಮಂಗಳಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ  ನಡೆದ ಮಂಗಳೂರು ವಿಶ್ವವಿದ್ಯಾನಿಲಯದ 46 ನೇ ಸಂಸ್ಥಾಪನಾ ದಿನಾಚರಣೆ ಮತ್ತು ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣದಿಂದ ವಂಚಿತರಾಗಿದ್ದ ಜಿಲ್ಲೆಯ ಹಲವಾರು ಸಮುದಾಯಗಳು ವಿಶೇಷವಾಗಿ  ಕೆಳಸ್ತರದ  ವರ್ಗಗಳಿಗೆ ಮಂಗಳೂರು   ವಿಶ್ವವಿದ್ಯಾನಿಲಯ ಸ್ಥಾಪನೆಯಿಂದ ಉನ್ನತ ಶಿಕ್ಷಣವು   ಕೈಗೆಟುಕುವಂತಾಯಿತು. ಅದರಲ್ಲೂ ಮಹಿಳೆಯರು ಉನ್ನತ ಶಿಕ್ಷಣಕ್ಕೆ ದೂರದ ಪ್ರದೇಶಗಳಿಗೆ  ತೆರಳುವುದು ಅಪರೂಪವಾಗಿದ್ದ ಜಿಲ್ಲೆಯಲ್ಲಿ 46 ವರ್ಷದ ಹಿಂದೆ ವಿ.ವಿ ಸ್ಥಾಪನೆಯಿಂದ ಅವರಿಗೆ ಉನ್ನತ ಮಟ್ಟದ ಶಿಕ್ಷಣ ದೊರಕಿ ಸಮಾಜದ ಮುಖ್ಯವಾಹಿನಿಗೆ ಬರುವಂತಾಯಿತು ಎಂದು ಅವರು ಹೇಳಿದರು.
ಯಾವುದೇ ವಿಶ್ವವಿದ್ಯಾನಿಲಯಕ್ಕೆ ಗೌರವ ಬರುವುದು ಅಲ್ಲಿನ ಶೈಕ್ಷಣಿಕ ಮತ್ತು ಸಂಶೋಧನಾ ಪ್ರಗತಿಯಿಂದ ಆಗಿರುತ್ತದೆ. ಈ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಕಳೆದ 5 ದಶಕಗಳಲ್ಲಿ ಶೈಕ್ಷಣಿಕ ಗುಣಮಟ್ಟದಿಂದ ಖ್ಯಾತಿ ಪಡೆದಿದೆ. ಮಂಗಳೂರು ವಿಶ್ವವಿದ್ಯಾನಿಲಯ ಸ್ಥಾಪಿಸುವಾಗ ಇಲ್ಲಿನ ಸ್ಥಳೀಯ  ಭಾμÉ, ಸಂಸ್ಕøತಿಯನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿತ್ತು. ಇದನ್ನು ತಲುಪುವಲ್ಲಿ ವಿಶ್ವವಿದ್ಯಾನಿಲಯ ಯಶಸ್ವಿಯಾಗಿರುವುದು ಶ್ಲಾಘನೀಯ . ಶೈಕ್ಷಣಿಕ ಅಭಿವೃದ್ಧಿಗೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಜವಾಬ್ದಾರಿಯೂ ವಿಶ್ವವಿದ್ಯಾಲಯಕ್ಕಿದೆ   ಎಂದು ಅವರು ಹೇಳಿದರು.
  ಪ್ರಸ್ತುತ ರಾಜ್ಯದಲ್ಲಿ ಹಲವಾರು ವಿಶ್ವವಿದ್ಯಾನಿಯಗಳು ಆರ್ಥಿಕ ಮತ್ತು ಮಾನವ ಸಂಪನ್ಮೂಲ ಸಮಸ್ಯೆ ಎದುರಿಸುತ್ತಿದೆ. ಹಿಂದೆ ಯಾವುದೇ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಬೇಕಾದರೆ ಅಲ್ಲಿ ಮೊದಲು ಅಗತ್ಯ ಶೈಕ್ಷಣಿಕ ಚಟುವಟಿಕೆಗಳು, ಸ್ನಾತಕೋತ್ತರ ಕೇಂದ್ರಗಳು ಪ್ರಾರಂಭವಾದ ಮೇಲೆ ವಿಶ್ವವಿದ್ಯಾನಿಲಯ ಸ್ಥಾಪನೆಯಾಗುತ್ತಿತ್ತು.  ಇದರಿಂದ ವಿಶ್ವವಿದ್ಯಾನಿಲಯಗಳಿಗೆ ಯಾವುದೇ ಸಮಸ್ಯೆಗಳು ಎದುರಾಗುತ್ತಿರಲಿಲ್ಲ ಎಂದು  ಅವರು ಹೇಳಿದರು.    ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ  ಕುಲಪತಿ ಪ್ರೊ.ಪಿ.ಎಲ್ ಧರ್ಮ  ಮಾತನಾಡಿ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಸ್ತುತ  1,191 ಸಂಶೋಧನಾ ಪ್ರಬಂಧಗಳು ಹಾಗೂ 15 ಪೇಟೆಂಟ್‍ಗಳಿವೆ.  24 ವಿವಿಧ ಪೀಠಗಳು ಕಾರ್ಯಾಚರಿಸುತ್ತಿದೆ.  154 ಕಾಲೇಜುಗಳು ಹಾಗೂ 42 ಸ್ನಾತಕೋತ್ತರ ವಿಭಾಗಗಳಿವೆ ಎಂದು ಅವರು ಹೇಳಿದರು.
    ಮಂಗಳೂರು ವಿಶ್ವವಿದ್ಯಾನಿಲಯದ ಆರ್ಥಿಕ ಸಮಸ್ಯೆ ಹೋಗಲಾಡಿಸಲು ಕರ್ನಾಟಕ ಸರ್ಕಾರ ಪೂರಕವಾಗಿ ಸ್ಪಂದಿಸಿದೆ. ಸಿಬ್ಬಂದಿ ವೇತನವನ್ನು ನಿಗದಿತ ಸಮಯಕ್ಕೆ ಪಾವತಿಸಲಾಗುತ್ತಿದೆ. ಪಿಂಚಣಿ ಸಮಸ್ಯೆಗೆ ಪರಿಹಾರ ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.
  ಇದೇ ಸಂದರ್ಭದಲ್ಲಿ ಸಂಸ್ಥಾಪನಾ ದಿನ ಪ್ರಯುಕ್ತ  ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಕಳುಹಿಸಿದ ಸಂದೇಶವನ್ನು ಸಮಾರಂಭದಲ್ಲಿ ಕುಲಪತಿಗಳು ವಾಚಿಸಿದರು.
  ಸಮಾರಂಭದಲ್ಲಿ ಕುಲಸಚಿವ (ಮೌಲ್ಯಮಾಪನ)  ಪ್ರೊ.ದೇವೇಂದ್ರಪ್ಪ, ಹಣಕಾಸು ಅಧಿಕಾರಿ ಪಂಚಲಿಂಗಸ್ವಾಮಿ ಉಪಸ್ಥಿತರಿದ್ದರು. ವಿಶ್ವವಿದ್ಯಾನಿಲಯದ ಕುಲಸಚಿವ  ರಾಜು ಮೊಗವೀರ ಸ್ವಾಗತಿಸಿ,  ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಗಣೇಶ್ ಸಂಜೀವ್ ವಂದಿಸಿದರು. ಧನಂಜಯ ಕುಂಬ್ಳೆ ನಿರೂಪಿಸಿದರು.

Category
ಕರಾವಳಿ ತರಂಗಿಣಿ