ಮಂಗಳೂರು: ಮಂಗಳೂರಿನ ಬೈಕಂಪಾಡಿ ಇಂಡಸ್ಟ್ರಿಯಲ್ ಪ್ರದೇಶದಲ್ಲಿರುವ AROMAZEN ಪ್ರೈವೇಟ್ ಲಿ. ಸಂಸ್ಥೆಯಲ್ಲಿ ಇಂದು ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, ಸಕಾಲದಲ್ಲಿ ಎಂ.ಸಿ.ಎಫ್ ಸಂಸ್ಥೆಯ ಸಿಬ್ಬಂದಿ ಗಳು ಅಗ್ನಿಶಾಮಕ ದಳದವರಿಗೆ ಕರೆ ಮಾಡಿದ್ದು. ಅಲ್ಲಿಗೆ ಕದ್ರಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗು ಅಧಿಕಾರಿಗಳ ಸಹಾಯದಿಂದ ಬೆಂಕಿಯನ್ನು ನಂದಿಸಲಾಗಿದೆ. ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅನಾಹುತ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು. ಇನ್ನು ಇದರ ಸಂಪೂರ್ಣ ತನಿಖೆ ನಡೆಯಬೇಕಾಗಿದೆ. ಸೋಪ್ ಹಾಗೂ ಪರ್ಫ್ಯೂಮ್ ಗೆ ಉಪಯೋಗಿಸುವ ಲಿಕ್ವೀಡ್ ಆಗಿರುತ್ತದೆ . ಬೆಂಕಿ ಆಹುತಿಯಿಂದ ಸರಿ ಸುಮಾರು 4 ಕೋಟಿ ನಷ್ಟ ಆಗಿರಬಹುದೆಂದಹ ಅಂದಾಜಿಸಲಾಗಿದೆ ಎಂದು ತಿಳಿದುಬಂದಿದೆ.