ಮಂಗಳೂರು: ನಗರದ ಕದ್ರಿ ಪಾರ್ಕ್ ನಲ್ಲಿ ನೂತನವಾಗಿ ನಿರ್ಮಾಣಗೊಂಡ 75 ಮೀಟರ್ ಎತ್ತರದ, ರಾಜ್ಯದ ಎರಡನೇ ಅತಿ ಎತ್ತರದ ದ್ವಜಸ್ಥಂಭವನ್ನು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಬಾವುಟವನ್ನು ಮೇಲೆ ಏರಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯೋಧನಾದ ನನಗೆ ಭಾರತದ ಧ್ವಜವನ್ನು ಏರಿಸುವುದೇ ಒಂದು ಹೆಮ್ಮೆಯ ಕ್ಷಣ, ಪ್ರಧಾನಿ ನರೇಂದ್ರ ಮೋದಿ ಅವರ ಪರಿಕಲ್ಪನೆಯು ಮೇಯರ್ ರವರಿಗೆ ಪ್ರೇರಣೆಯಾಗಿ ಈ ದ್ವಜಸ್ತಂಭ ಇಲ್ಲಿ ಸ್ಥಾಪಿತಗೊಂಡಿದೆ, ಇದನ್ನು ಮೇಯರ್ ಅವರ ಅಧಿಕಾರ ಅವಧಿಯ ಕೊನೆಯ ದಿನದಲ್ಲಿ ಅನಾವರಣ ಗೊಳ್ಳುತ್ತಿರುವುದು ಮಂಗಳೂರಿಗರಿಗೆ ಸಂತಸ.
ಮೋದಿಜಿ ಅವರ ಪ್ರೇರಣೆ ಯಂತೆ ಇದೇ ರೀತಿ ರಾಷ್ಟ್ರಧ್ವಜ ಅಥವಾ ರಾಷ್ಟ್ರದ ಸಂಕೇತಗಳನ್ನು ಗೌರವಿಸುವಂತೆ ಆಗಲಿ ಎಂದರು.
ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪಮೇಯರ್ ಸುನೀತ, ಕದ್ರಿ ಅಸೋಸಿಯೇಷನ್ ನ ಸದಸ್ಯ ಜಗನ್ನಾಥ ಗಾಂಭೀರ್, ಸ್ಥಳೀಯ ಕಾರ್ಪೊರೇಟರ್ ಶಕೀಲಾ ಕಾವಾ, ಮಾಜಿ ಮೇಯರ್ ಜಯಾನಂದ ಅಂಚನ್, ಕಾರ್ಪೊರೇಟರ್ ಪೂರ್ಣಿಮಾ ಮೊದಲಾದವರು ಉಪಸ್ಥಿತರಿದ್ದರು.