ಮಂಗಳೂರು : ರಾಮಕೃಷ್ಣ ಮಿಷನ್ ಗೆ 75ರ ಸಂವತ್ಸರದ "ಅಮೃತ ವರ್ಷ" ಕಾರ್ಯಕ್ರಮ ಸೆ. 11ರಿಂದ 13 ರ ವರೆಗೆ ಮಂಗಳೂರಿನ ರಾಮೃಕೃಷ್ಣ ಮಠದಲ್ಲಿ ಶ್ರದ್ದಾ, ಮೇಧಾ, ಮತ್ತು ಪ್ರಜ್ಞಾ ಎಂಬ ಶೀರ್ಷಿಕೆಯಡಿ ಶೈಕ್ಷಣಿಕ ವಿಚಾರ ಸಂಕಿರಣ ನಡೆಯಲಿದೆ ಎಂದು ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದ ಜೀ ಮಹಾರಾಜ್ ತಿಳಿಸಿದರು. ಅವರು ಮಂಗಳೂರಿನ ರಾಮಕೃಷ್ಣ ಮಿಷನ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿ, ಸೆ. 11 ರ ಶ್ರದ್ದಾ ವಿಚಾರ ಸಂಕಿರಣವನ್ನು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ಫಾ. ಡಾ. ಪ್ರವೀಣ್ ಮಾರ್ಟಿಸ್ ಉದ್ಘಾಟಿಸಲಿದ್ದು, ಕಾರ್ಯಕ್ರಮದಲ್ಲಿ ಮನಪಾ ಆಯುಕ್ತರಾದ ರವಿಚಂದ್ರ ನಾಯಕ್, ಎಸ್ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈ.ಲಿ. ಸ್ಥಾಪಕ ವ್ಯವಸ್ಥಾಪಕ ನಿರ್ದೇಶಕ ಡಾ. ಜಿ ರಾಮಕೃಷ್ಣ ಆಚಾರ್ಯ, ಮೈಸೂರಿನ ರಾಮಕೃಷ್ಣ ನೈತಿಕ ನತ್ತು ಆದ್ಯಾತ್ಮಿಕ ಶಿಕ್ಷಣ ಸಂಸ್ಥೆ ಸಂಚಾಲಕರಾದ ಸ್ವಾಮಿ ಮಹಾಮೇಧನಂದಜೀ, ಬೆಂಗಳೂರಿನ ಮನಸ್ ತರಬೇತಿ ಕೇಂದ್ರದ ನಿರ್ದೇಶಕ ಪ್ರೊ. ಕೆ ರಘೋತ್ತಮ ರಾವ್ ಭಾಗಿಯಾಗಲಿದ್ದಾರೆ. ಮೇಧಾ ವಿಚಾರ ಸಂಕೀರಣವನ್ನು ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ ಬೇಲೂರು ಮಠದ ವಿಶ್ವಸ್ಥ ಹಾಗೂ ಮೈಸೂರಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದಜಿ ಮಹರಾಜ್ ಉದ್ಘಾಟಿಸಲಿದ್ದಾರೆ. ಪ್ರಜ್ಞಾ ವಿಚಾರ ಸಂಕಿರಣವನ್ನು ರಾಮಕೃಷ್ಣ ಮಠ, ರಾಮಕೃಷ್ಣ ಮಿಷನ್ ಬೇಲೂರು ಮಠ ಹೌರಾ ಪಶ್ಚಿಮ ಬಂಗಾಳ ಇದರ ಉಪಾಧ್ಯಕ್ಷರಾದ ಸ್ವಾಮಿ ಸುಹಿತಾನಂದಜಿ ಮಹರಾಜ್ ಉದ್ಘಾಟಿಸಲಿದ್ದಾರೆ. ಸೆ. 14 ರಂದು ಅಮೃತ ಮಹೋತ್ಸವದ ಅಮೃತ ಭವನ ಹಾಗೂ ವಿವೇಕನಂದ ಅಧ್ಯಯನ ಕೇಂದ್ರದ ಹೊಸ ತರಗತಿ ಕೊಠಡಿ ಉದ್ಘಾಟನೆ ನಡೆಯಲಿದೆ ಎಂದವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಎಂಎಲ್ಸಿ ಕ್ಯಾ. ಗಣೇಶ್ ಕಾರ್ಣಿಕ್ ಮತ್ತಿತರರು ಉಪಸ್ಥಿತರಿದ್ದರು.