ಮಂಗಳೂರು: KUIDFC ಯಿಂದ 147 ಒಳಗಡೆ ಕಾಮಗಾರಿಗಳು ವಿಳಂಬಗೊಂಡು ಒಳಚರಂಡಿ ನೀರು ಸಾರ್ವಜನಿಕ ತೋಡುಗಳಲ್ಲಿ ಹರಿಯುತ್ತಿದ್ದು, ನೀರಿನ ಜೊತೆಯಲ್ಲಿ ಒಳಚರಂಡಿಯ ನೀರು ಹರಿಯುತ್ತಿದ್ದು ನಗರದಲ್ಲಿ ಉಂಟಾದ ಅತೀ ಮಳೆಯಿಂದ ಆರೋಗ್ಯದ ಮೇಲೆ ಪರಿಣಾಮ ಮತ್ತು ನಗರದ ಎಲ್ಲಾ ಬಾವಿಗಳ ನೀರು ಕಲುಷಿತಗೊಂಡು ಅನೇಕ ರೋಗರುಜಿನಗಳು ಉಂಟಾಗುತ್ತಿರುವುದರ ಬಗ್ಗೆ ಸಾರ್ವಜನಿಕ ದೂರಿನನ್ವಯ ಇಂದು ನಗರ ಪಾಲಿಕೆಯಲ್ಲಿ ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರ ಕಛೇರಿಯಲ್ಲಿ ಐವನ್ ಡಿʼಸೋಜಾರವರ ನೇತೃತ್ವದಲ್ಲಿ ನಗರ ಪಾಲಿಕೆಯ ATPO ಮತ್ತು KBR ಕಾಂಟ್ರೆಕ್ಟರ್‌ಗಳು ಸಾರ್ವಜನಿಕ ಉದ್ದಿಮೆದಾರರಾದ ಅಶೋಕ್ ಮೆಂಡೋನ್ಸಾ, ಲುಯಿ ಜೆ. ಪಿಂಟೋ ಇವರುಗಳೊಂದಿಗೆ ವಿಸ್ತ್ರತವಾಗಿ ಚರ್ಚೆ ನಡೆಸಿ KUIDFC ಕೈಗೊಳ್ಳುವ ಕಾಮಗಾರಿಗಳು ಪೂರ್ಣಗೋಳ್ಳದಿರುವ ತೊಂದರೆಗಳ ಬಗ್ಗೆ ಚರ್ಚಿಸಲಾಯ್ತು ನಗರ ಪಾಲಿಕೆಯಿಂದ ಒಳಚರಂಡಿಯನ್ನು ಅಳವಡಿಸದೇ ಇರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಸರಕಾರ ಭೂಮಿ ಒತ್ತುವರಿ ಮಾಡಿರುವ ಬಗ್ಗೆ ಇದನ್ನು ಕೂಡಲೇ ಪರಿಶೀಲಸಿ ಕಾಮಗಾರಿಯನ್ನು ನಡೆಸಲು ಒತ್ತುವರಿ ಜಾಗ ಅನೇಕ ಕಡೆ ಗಳಲ್ಲಿ ಒಳಚರಂಡಿ ಸ್ಥಳವು ಅತೀ ಅಕ್ರಮಣ ಮಾಡಿರುವುದರಿಂದ ಅದನ್ನು ಸರ್ವೆ ಮಾಡಿ ಒಳಚರಂಡಿ ಅಳವಡಿಕೆ ಕೂಡಲೇ ವ್ಯವಸ್ಥೆ ಮಾಡಬೇಕೆಂದು ತೀರ್ಮಾನಿಸಲಾಯ್ತು.
ಒಳಚರಂಡಿ ವ್ಯವಸ್ತೆ ಸರಿಪಡಿಸಲು ಸರಕಾರದ ಗಮನ ಸೆಳೆದು ಸೇಕಡಾ 40% ಮನೆಗಳಿಗೆ ಒಳಚರಂಡಿ ವ್ಯವಸ್ಥೆ ನಡೆಸಲಾಗುವುದು. 1250 ಕೋಟಿ ರೂ,ಗಳ ವಿಶೇಷ ಅನುದಾನವನ್ನು ವಿಧಾನ ಪರಿಷತ್ತಿನಲ್ಲಿ ಸಚಿವರ ಗಮನಕ್ಕೆ ತಂದು ಸರಕಾರದಿಂದ ಈ ಸಂಪನ್ಮೂಲ ಕ್ರೋಡಿಕರಣ ಸಾಧ್ಯವಾಗದೇ ಇದ್ದರೆ ನಗರ ಪಾಲಿಕೆಗೆ ಸರಕಾರದಿಂದ ಸಾಲಸೌಲಭ್ಯ ಒದಗಿಸಲು ಮನವಿ ಮಾಡುವುದಾಗಿ ಐವನ್ ಡಿʼಸೋಜಾರವರು ತಿಳಿಸಿದರು. ಈ ಸಂದರ್ಭದಲ್ಲಿ ಟ್ರಾಫಿಕ್ ಎಸಿಪಿ ನಜ್ಮಾ ಫಾರೂಕ್, ಮ.ನ.ಪಾ ಸಹಾಯಕ ಕಾರ್ಯನಿರ್ವಹಣಾ ಇಂಜಿನಿಯರ್ ಶಿವಲಿಂಗಪ್ಪ, ರಾಜೇಶ್, ನಾಗರಾಜ್, ಎ.ಟಿ.ಪಿ ಶರತ್ ಗೌಡ, ಮ.ನ.ಪಾ ಇಂಜಿನಿಯರ್ ನಿತ್ಯಾನಂದ, ಕೆ.ಯು.ಐ.ಡಿ.ಎಫ್.ಸಿ ಇಂಜಿನಿಯರ್ ಸುರೇಶ್ ಹಾಗೂ ಜಯಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.