image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸೌಹಾರ್ಧತೆಯನ್ನು ಸಾರುವ ಗಣೇಶೋತ್ಸವ :ಜಪ್ಪಿನಮೊಗರು ಗಣೇಶೋತ್ಸವದಲ್ಲಿ ಯು.ಟಿ.ಖಾದರ್‌

ಸೌಹಾರ್ಧತೆಯನ್ನು ಸಾರುವ ಗಣೇಶೋತ್ಸವ :ಜಪ್ಪಿನಮೊಗರು ಗಣೇಶೋತ್ಸವದಲ್ಲಿ ಯು.ಟಿ.ಖಾದರ್‌

ಮಂಗಳೂರು :ಎಲ್ಲಾ ಧರ್ಮದ ಎಲ್ಲಾ ಜಾತಿಯ ಗಣ್ಯರು ಭಾಗವಹಿಸಿರುವುದು ಸರ್ವಧರ್ಮದ ಸೌಹಾರ್ಧತೆಯನ್ನು ಸಾರುವ ಗಣೇಶೋತ್ಸವ ಇದಾಗಿದೆ. ಇಂತಹ ಗಣೇಶೋತ್ಸವಗಳು ರಾಜ್ಯದ ಎಲ್ಲಾ ಕಡೆಯು ನಡೆಯಬೇಕು ಇದರಿಂದ ಸಮಾಜದಲ್ಲಿ ಐಕ್ಯತೆ ಮೂಡುತ್ತದೆ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಶ್ರೀ ಯು.ಟಿ. ಖಾದರ್‌ ಹೇಳಿದರು. ಸಾರ್ವಜನಿಕ ಗಣೇಶೋತ್ಸವ ಸಮಿತಿ ಜಪ್ಪಿನಮೊಗರು 17ನೇ ವರ್ಷದ ಜಪ್ಪಿನಮೊಗರು ಶ್ರೀ ಗಣೇಶೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ವಿಧಾನ ಪರಿಷತ್‌ ಶಾಸಕರಾದ ಶ್ರೀ ಐವನ್‌ ಡಿʼಸೋಜಾರವರು ವಹಿಸಿದ್ದು, ಶ್ರೀಮತಿ ಅಕ್ಷತಾ ಹಾಗೂ ಸಂತೋಷ್‌ ಶೆಟ್ಟಿ ತೋಚಿಲಗುತ್ತು ದಂಪತಿಗಳು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟ ಹಾಗೂ ಧರ್ಮದರ್ಶಿ ಶ್ರೀ ಸತೀಶ್‌ ಬಂದಲೆ, ಶ್ರೀ ಜೀತೇಂದ್ರ ಕೊಟ್ಟಾರಿ, ಎ.ಸಿ. ವಿನಯರಾಜ್‌, ಶ್ರೀ ಸಿರಾಜ್‌ ಬಜ್ಪೆ, ಶ್ರೀ ಸದಾಶಿವ ಎಳ್ಳಾಲ್‌ ವಿಶ್ವಹಿಂದೂ ಪರಿಷತ್‌ ಮುಖಂಡ ಹಾಗೂ ಉದ್ಯಮಿ ಅಡ್ಯಾರ್‌ ಅನಂದ ಶೆಟ್ಟಿ, ಉದ್ಯಮಿ ಚಂದ್ರಹಾಸ ಅಡ್ಯಂತಾಯ ಕುತ್ತಾರ್‌ಗುತ್ತು, ಸೀತಾರಾಮ ಜಪ್ಪು, ಉದ್ಯಮಿ ಸಂತೋಷ್‌ ಶೆಟ್ಟಿ, ಲ| ಹರೀಶ್‌ ಆಳ್ವ, ರಾಮಚಂದ್ರ ಅಳ್ವ, ಶ್ರೀಮತಿ ಶ್ವೇತಾ ದೀಪಕ್‌ ಹಾಗೂ ದೀಪಕ್‌ ಎಚ್‌ ಕೆ. ಮೊದಲಾದ ಗಣ್ಯರು ಭಾಗವಹಿಸಿದ್ದು, ಸಭೆಯಲ್ಲಿ ನೇತ್ರ ತಜ್ಞ ಪ್ರಸಾದ್‌ ನೇತ್ರಾಲಯ ಸ್ಪೆಷಾಲಿಟಿ ಅಸ್ಪತ್ರೆಯ ಮುಖ್ಯಸ್ಥ, ಡಾ| ಕೃಷ್ಣ ಪ್ರಸಾದ್‌ ಕೂಡ್ಲುರವರನ್ನು ಸನ್ಮಾನಿಸಲಾಯಿತು. ಸಮಿತಿಯ ಅಧ್ಯಕ್ಷರಾದ ಜೆ.ನಾಗೇಂದ್ರ ಕುಮಾರ್‌ ಸ್ವಾಗತಿಸಿದರು. ಕಾರ್ಯಧ್ಯಕ್ಷರಾದ ಸುಧಾಕರ್‌ ಜೆ. ವಂದಿಸಿದರು. ಶ್ರೀಮತಿ ಕವಿತಾ ಗಂಗಾಧರ್‌ ಸನ್ಮಾನ ಪತ್ರ ಚರ್ಚಿಸಿದರು. ಶ್ರೀ ರೋಹಿತ್‌ ಉಳ್ಳಾಲ್‌ ಹಾಗೂ ಶ್ರೀ ಹರೀಶ್‌ ಶೆಟ್ಟಿ ತಾರ್ದೋಲ್ಯ ಕಾರ್ಯಕ್ರಮ ನಿರೂಪಿಸಿದರು.

Category
ಕರಾವಳಿ ತರಂಗಿಣಿ