image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರು ಏರ್‌ಪೋರ್ಟ್‌ ಭೂಸ್ವಾಧೀನ ವಿಚಾರ ಇತ್ಯರ್ಥವಾಗಿದೆ : ಬ್ರಿಜೇಶ್ ಚೌಟ

ಮಂಗಳೂರು ಏರ್‌ಪೋರ್ಟ್‌ ಭೂಸ್ವಾಧೀನ ವಿಚಾರ ಇತ್ಯರ್ಥವಾಗಿದೆ : ಬ್ರಿಜೇಶ್ ಚೌಟ

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣಕ್ಕೆ 45 ಎಕ್ರೆ ಭೂಸ್ವಾಧೀನ ಶೀಘ್ರವೇ ಆರಂಭವಾಗಲಿದ್ದು, ವಿಮಾನ ನಿಲ್ದಾಣದ ಸುರಕ್ಷತೆಗೆ ವಿಸ್ತರಣೆ ಕಾರ್ಯ ನಡೆಯಲಿದೆ ಎಂದು ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಹೇಳಿದ್ದಾರೆ. ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಮ್ಮಿಕೊಂಡ ಎಲಿವೇಟ್‌ ಬ್ರ್ಯಾಂಡ್‌ ಮಂಗಳೂರು ಯೋಜನೆಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು. ವಿಮಾನ ನಿಲ್ದಾಣಕ್ಕೆ ಪಾಯಿಂಟ್‌ ಆಫ್‌ ಕಾಲ್‌ ಮಾನ್ಯತೆ ಒದಗಿಸಲು ನಾಗರಿಕ ವಿಮಾನಯಾನ ಸಚಿವಾಲಯದೊಂದಿಗೆ ಸಂಪರ್ಕ ದಲ್ಲಿರುವೆ. ಬೇಡಿಕೆ ಹೆಚ್ಚಿದ್ದರೆ ಹೊಸ ತಾಣಗಳಿಗೆ ವಿಮಾನ ಯಾನವೂ ಸಾಧ್ಯ. ಆದರೆ ವೈಡ್‌ಬಾಡಿ ಏರ್‌ಕ್ರಾಫ್ಟ್‌ ಕಾರ್ಯಾಚರಣೆಗೆ ಇನ್ನಷ್ಟು ಕಾಲ ಬೇಕು ಎಂದರು. ಹೊರಗಿನಿಂದ ಇಲ್ಲಿಗೆ ಹೊಸ ಹೂಡಿಕೆಗಳನ್ನು ಆಕರ್ಷಿಸುವುದಕ್ಕಿಂತ ಮಂಗಳೂರಿನವರೇ ಇಲ್ಲಿಗೆ ಮರಳಿ ಅಭಿವೃದ್ಧಿ ಕೈಗೊಳ್ಳುವುದು ಸುಲಭ. ಇದಕ್ಕಾಗಿ ಬೊಲ್ಪು ಹಾಗೂ ಬ್ಯಾಕ್‌ ಟು ಊರು ಎನ್ನುವ ಯೋಜನೆ ರೂಪಿಸಲಾಗಿದೆ ಎಂದರು. ಬಂದರು ನಮ್ಮ ಅಭಿವೃದ್ಧಿಗೆ ದೊಡ್ಡ ಶಕ್ತಿ. ಚತುಷ್ಪಥ ರಸ್ತೆ ಇನ್ನೂ ರಾಷ್ಟ್ರೀಯ ಹೆದ್ದಾರಿ ಲಾಜಿಸ್ಟಿಕ್ಸ್‌ ವಿಭಾಗದ ಅಧೀನದಲ್ಲಿರುವುದು ಬಂದರು ಮುಖೀ ಯೋಜನೆಗಳನ್ನು ರೂಪಿಸಲು ಅಡ್ಡಿಯಾಗಿದೆ. ಇದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸುವಂತೆ ಸಚಿವ ನಿತಿನ್‌ ಗಡ್ಕರಿಯವರಲ್ಲಿ ಕೋರಿದ್ದು, ಫಲಪ್ರದವಾಗುವ ನಿರೀಕ್ಷೆ ಇದೆ ಎಂದು ಸಂಸದರು ಹೇಳಿದರು. ವಿಧಾನಸಭಾ ಸ್ಪೀಕರ್‌ ಯು.ಟಿ. ಖಾದರ್‌ ಅವರು ಶುಭಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಕೆಸಿಸಿಐ ಅಧ್ಯಕ್ಷ ಆನಂದ್‌ ಜಿ. ಪೈ ಮಾತನಾಡಿ, ದೇಶದ ಪ್ರಗತಿಗೆ ಕುಡ್ಲ ದೊಡ್ಡ ಕೊಡುಗೆ ನೀಡೀತು. ಸುಸ್ಥಿರ ಅಭಿವೃದ್ಧಿಯ ದೃಷ್ಟಿಕೋನದೊಂದಿಗೆ ನಮ್ಮ ಸಂಸ್ಕೃತಿ-ಪರಂಪರೆಯ ಒಟ್ಟು ಯೋಚನೆ ಯೊಂದಿಗೆ ಸಾಗಬೇಕು ಎಂದರು. ಕೆಸಿಸಿಐ ಮಾಜಿ ಅಧ್ಯಕ್ಷ ಗಣೇಶ್‌ ಕಾಮತ್‌ ಸಂವಾದ ನಿರೂಪಿಸಿ ದರು. ನಿರ್ದೇಶಕಿ ಆತ್ಮಿಕಾ ಅಮೀನ್‌ "ಎಲೆವೇಟ್‌ ಬ್ರ್ಯಾಂಡ್‌ ಮಂಗಳೂರು' ಬಗ್ಗೆ ವಿವರಿಸಿದರು. ಸಂವಾದದಲ್ಲಿ ರೋಬೋಸಾಫ್ಟ್ ಸ್ಥಾಪಕ ರೋಹಿತ್‌ ಭಟ್‌, ಕರಾವಳಿ ಭಾಗದಿಂದಲೇ 500 ಮಿಲಿಯನ್‌ ಡಾಲರ್‌ ಪ್ರಮಾಣದ ರಫ್ತು ನಡೆಯುತ್ತಿದ್ದು, ಐಟಿ ಕೇಂದ್ರಿತ ಅಭಿವೃದ್ಧಿಯ ಆಶಾಭಾವ ಸೃಷ್ಟಿಸಿದೆ ಎಂದರೆ,ನಮ್ಮಲ್ಲಿನ ತಾಂತ್ರಿಕ ಶಿಕ್ಷಣದ ಗುಣಮಟ್ಟ ಚೆನ್ನಾಗಿದೆ. ಪ್ರತಿಭೆಗಳನ್ನು ಇನ್ನಷ್ಟು ಪ್ರದರ್ಶಿಸುವ ಕೆಲಸ ಆಗಬೇಕು ಎಂದವರು ಲ್ಯಾಮಿನಾ ಫೌಂಡ್ರೀಸ್‌ನ ಎನ್‌. ವಿಶಾಲ್‌ ಹೆಗ್ಡೆ. ಮಂಗಳೂರಿನಲ್ಲಿರುವ ಅವಕಾಶ ಗಳನ್ನು ಪೂರ್ಣವಾಗಿ ಬಳಸಿಲ್ಲ ಎಂದು ಸಮರ್ಷ್‌ ಕ್ಯಾಪಿಟಲ್‌ ನ ಸ್ಥಾಪಕ ಸಂದೀಪ್‌ ಶೆಣೈ ಹೇಳಿದ್ದಾರೆ.

Category
ಕರಾವಳಿ ತರಂಗಿಣಿ