image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಭಾರೀ ಮಳೆ ಮತ್ತು ಅಲೆಗಳ ಅಬ್ಬರಕ್ಕೆ ತತ್ತರಿಸಿ ಕಡಲತೀರಕ್ಕೆ ಬಂದಿದ್ದ ಡಾಲ್ಫಿನ್ ರಕ್ಷಣೆ

ಭಾರೀ ಮಳೆ ಮತ್ತು ಅಲೆಗಳ ಅಬ್ಬರಕ್ಕೆ ತತ್ತರಿಸಿ ಕಡಲತೀರಕ್ಕೆ ಬಂದಿದ್ದ ಡಾಲ್ಫಿನ್ ರಕ್ಷಣೆ

ಕಾರವಾರ: ಅಲೆಗಳ ಅಬ್ಬರದಿಂದಾಗಿ ತಾಲ್ಲೂಕಿನ ದೇವಬಾಗ ಕಡಲತೀರಕ್ಕೆ ಬಂದಿದ್ದ ಡಾಲ್ಫಿನ್ ಮರಿಯನ್ನು ಇಲ್ಲಿನ ಜಂಗಲ್ ಲಾಡ್ಜಸ್ ಆಯಂಡ್ ರೆಸಾರ್ಟ್ ಸಿಬ್ಬಂದಿ ಸೋಮವಾರ ಪುನಃ ಸಮುದ್ರಕ್ಕ ಬಿಟ್ಟು, ರಕ್ಷಿಸಿದರು. ಚಂಡಮಾರುತದ ಕಾರಣದಿಂದ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಅಬ್ಬರದ ಅಲೆಗಳಿಗೆ ಸಿಲುಕಿದ ಇಂಡೋ ಫೆಸಿಫಿಕ್ ಹಂಪ್ ಬ್ಯಾಕ್ ತಳಿಯ ಡಾಲ್ಫಿನ್ ಮರಿ ರೆಸಾರ್ಟ್ ಸಮೀಪದ ಕಡಲತೀರಕ್ಕೆ ಬಂದು ಬಿದ್ದಿತ್ತು. ನೀರಿಗೆ ಸಾಗಲು ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ರೆಸಾರ್ಟ್ ನಲ್ಲಿ ತಂಗಿದ್ದ ಪ್ರವಾಸಿಗರು ಸಿಬ್ಬಂದಿ ಗಮನಕ್ಕೆ ತಂದಿದ್ದರು. ಸಿಬ್ಬಂದಿ ನೀಲೇಶ್, ಸುನೀಲ್ ಮತ್ತು ಸಂತೋಷ್ ಡಾಲ್ಫಿನ್ ಮರಿಯನ್ನು ಪುನಃ ಸಮುದ್ರಕ್ಕೆ ಸೇರಿಸಿದರು.

Category
ಕರಾವಳಿ ತರಂಗಿಣಿ