ಮಂಗಳೂರು: ಇವತ್ತು ಒಂದು ವೋಟು ಈ ದೇಶದ ಕೋಟ್ಯಾಧೀಶರಿಗೆ ಒಂದು ವೋಟಿಗೆ ಎಷ್ಟು ಮೌಲ್ಯ ಇದಿಯೋ ಅಷ್ಟೇ ಮೌಲ್ಯ ಒಬ್ಬ ಬಡವನ ಮತಕ್ಕೂ ಇದೆ. ಈ ರೀತಿಯ ಸಮಾನತೆಯನ್ನು ಇವತ್ತು ನಮ್ಮ ಸಂವಿದಾನದಲ್ಲಿ ಕೊಟ್ಟಿದ್ದಾರೆ ಎಂದು ಎಮ್ ಎಲ್ ಸಿ ಮಂಜುನಾಥ ಭಂಡಾರಿ ಅಭಿಪ್ರಾಯ ಪಟ್ಟರು. ಅವರು ವಿಶ್ವ ಪ್ರಜಾಪ್ರಭುತ್ವ ದಿನದ ಅಂಗವಾಗಿ ಜಿಲ್ಲಾಡಳಿತ ನಗರದ ಸರ್ಕ್ಯೂಟ್ ಹೌಸ್ ಎದುರುಗಡೆ ಆಯೋಜಿಸಿದ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಮಾತನಾಡಿ,
ಸುಮಾರು ಎರಡೂವರೆ ಸಾವಿರ ಕಿಲೋಮೀಟರ್ ದೂರವನ್ನು ಬೀದರಿನಿಂದ ಹಿಡಿದು ಚಾಮರಾಜ ನಗರದ ತನಕ ಸುಮಾರು 25 ಲಕ್ಷ ಜನರು ಭಾಗವಹಿಸುವ ಈ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರ ಹಮ್ಮಿಕೊಂಡಿದೆ. ಪ್ರಜಾಪ್ರಭುತ್ವವನ್ನು ಉಳಿಸಿ ಬೆಳೆಸುವಂತಹ ಜವಾಬ್ದಾರಿ ನಮ್ಮದು. ಈ ಭಾರತ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳ ಕಾರಣಕ್ಕೆ ಇವತ್ತು ಈ ದೇಶ ಸ್ವಾತಂತ್ರ ವರ್ಷಗಳ ಆಚರಣೆ ಮಾಡಿಕೊಂಡು ವಿವಿಧ ಮುಖಗಳಲ್ಲಿ ಹಲವಾರು ಬದಲಾವಣೆಗಳನ್ನು ತಂದು ಹಲವಾರು ರೀತಿಯಲ್ಲಿ ಬೆಳವಣಿಗೆಗಳನ್ನ ಮಾಡಿಕೊಂಡು ಇವತ್ತು ವಿಶ್ವದ ಐದನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಅಂತ ಶ್ರೇಷ್ಠ ಸಾಂಸ್ಕೃತಿಕ ಪರಂಪರೆಯ, ಸಂಸ್ಕೃತಿಯ ಆಧಾರದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡು ಈ ಭವ್ಯ ಭಾರತವನ್ನು ಕಟ್ಟಬೇಕಾದಂತ ಒಂದು ದೊಡ್ಡ ಜವಾಬ್ದಾರಿ ಇದೆ ಎಂದರು.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮೈಗೂಡಿಸಿಕೊಂಡು ಅದರ ಆಧಾರದಲ್ಲಿ ನಿಮಿತ್ತವಾಗಿ ಇವತ್ತು ಅಂತರ್ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಇದ್ದರೂ ಕೂಡ ಪ್ರತಿಯೊಂದು ದಿನವು ಪ್ರಜಾಪ್ರಭುತ್ವದ ದಿನ ಆಗಲಿ. ಪ್ರಜಾಪ್ರಭುತ್ವ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳೋಣ ನಮ್ಮ ಕರ್ತವ್ಯಗಳನ್ನ ಮತ್ತು ಹಕ್ಕುಗಳನ್ನು ತಿಳಿದುಕೊಳ್ಳುವಂತ ಪ್ರಯತ್ನವನ್ನು ಮಾಡೋಣ ನಮ್ಮ ಕರ್ತವ್ಯಗಳನ್ನ ಪ್ರಾಮಾಣಿಕವಾಗಿ ನಿರ್ವಹಿಸೋಣ ಮತ್ತು ಹಕ್ಕುಗಳನ್ನು ಪಡೆಯುವಂತಹ ಕೆಲಸವನ್ನು ಕೂಡ ಮಾಡೋಣ. ಈ ಪ್ರಜಾಪ್ರಭುತ್ವದ ಹಬ್ಬವನ್ನು ನಾವು ಸದ್ಬಳಕೆ ಮಾಡಿಕೊಂಡು ಈ ಭವ್ಯ ಭಾರತವನ್ನು ಕಟ್ಟುವಲ್ಲಿ ನಾವೆಲ್ಲರೂ ಒಂದಾಗಿ ಒಟ್ಟಾಗಿ ಶ್ರಮಿಸೋಣ ಅಂತ ವಿಶ್ವ ಪ್ರಜಾಪ್ರಭುತ್ವ ದಿನದ ಮುಖಾಂತರ ಭಾರತದ ಏಕತೆ ಮತ್ತೆ ಸಮಗ್ರತೆಯನ್ನು ಸಾರ್ಥಕ ಮಾಡುವಂತಹ ಈ ಒಂದು ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿರ ತಕ್ಕಂತಹ ಕಾರ್ಯಕ್ರಮ. ಈ ದೇಶ ಇವತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಶ್ವದಲ್ಲಿ ಅತಿ ದೊಡ್ಡ ದೇಶ ಯಾವುದು ಅಂತ ಹೇಳಿದರೆ ಅದು ನಮ್ಮ ಭಾರತ ಈ ದೇಶದ ಒಬ್ಬ ಸಾಮಾನ್ಯ ಒಬ್ಬ ವ್ಯಕ್ತಿಯು ಕೂಡ ದೇಶದ ಪ್ರಧಾನಮಂತ್ರಿ ಹುದ್ದೆಗೆ ಹೋಗಬಹುದು ಎನ್ನುವಂತಹ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಿರುವಂತಹ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರಿಗೆ ಈ ಸಂದರ್ಭದಲ್ಲಿ ನಾನು ನಮನವನ್ನು ಸಲ್ಲಿಸುತ್ತಾ ಈ ಒಂದು ದೇಶದಲ್ಲಿ ಶಾಸಕಾಂಗ ಕಾರ್ಯಾಂಗ ನ್ಯಾಯಾಂಗದ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟು ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಆ ಒಂದು ಆರ್ಥಿಕವಾಗಿ ಸದೃಢವಾಗಿ ಬೆಳೆಯಬೇಕೆಂಬ ನಿಟ್ಟಿನಲ್ಲಿ ಈ ದೇಶಕ್ಕೆ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಿರತಕ್ಕಂತಹ ಡಾ. ಬಿ ಆರ್ ಅಂಬೇಡ್ಕರ್ ಅವರು ಇವತ್ತು ಕೂಡ ಪೂಜನೀಯರಾಗಿದ್ದಾರೆ ಎಂದರು.
ಬೆಳಗ್ಗೆ 9.30ಕ್ಕೆ ಸರಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು, ಶಾಲಾವಿದ್ಯಾರ್ಥಿಗಳನ್ನು ಒಳಗೊಂಡ ಬೃಹತ್ ಮಾನವ ಸರಪಳಿ ರಚಿಸಲಾಯಿತು.
ಕಾರ್ಯಕ್ರಮ ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು, ಬಳಿಕ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಆ ಬಳಿಕ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಸಂವಿಧಾನ ಪ್ರಸ್ತಾವನೆಯನ್ನು ಓದಿದರು. ಅದನ್ನು ಎಲ್ಲರೂ ಪುನರುಚ್ಚರಿಸಿದರು. ಬೆಳಗ್ಗೆ 10 ಗಂಟೆಗೆ ಮಾನವ ಸರಪಳಿಯಲ್ಲಿ ಎಲ್ಲರೂ ತಮ್ಮ ಎರಡು ಕೈಗಳನ್ನು ಮೇಲೆತ್ತಿ ಜೈ ಹಿಂದ್, ಜೈ ಕರ್ನಾಟಕ ಘೋಷಣೆ ಕೂಗಿ ಸರಪಳಿಯನ್ನು ಕಳಚಿದರು.