image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಎಂ.ಸಿ.ಸಿ.ಬ್ಯಾoಕಿನ ಬೆಳ್ಮಣ್ ಶಾಖೆಯಲ್ಲಿ 9ನೇ ಎಟಿಎಮ್ ಉದ್ಘಾಟನೆ

ಎಂ.ಸಿ.ಸಿ.ಬ್ಯಾoಕಿನ ಬೆಳ್ಮಣ್ ಶಾಖೆಯಲ್ಲಿ 9ನೇ ಎಟಿಎಮ್ ಉದ್ಘಾಟನೆ

ಮಂಗಳೂರು: ಎಂಸಿಸಿ ಬ್ಯಾಂಕ್ ಲಿಮಿಟೆಡ್ ಆಗಸ್ಟ್ 9, 2025 ರಂದು  ಬೆಳ್ಮಣ್  ಶಾಖೆಯಲ್ಲಿ ತನ್ನ 9 ನೇ ಎಟಿಎಂನ್ನು ಉದ್ಘಾಟಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ವಹಿಸಿದ್ದರು. ಎಟಿಎಂನ್ನು ಬೆಳ್ಮನ್‌ನ  ಡೆವಲಪರ್ಸ್ ಮತ್ತು ಹೋಟೆಲ್ ಸೂರಜ್ ಇನ್‌ನ ಮಾಲೀಕ ಶ್ರೀ ಶೋಧನ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ಬೆಳ್ಮಣ್ ನ ಸೇಂಟ್ ಜೋಸೆಫ್ ಚರ್ಚ್‌ನ ಧರ್ಮಗುರುಗಳಾದ ರೆವೆರೆಂಡ್ ಫಾದರ್ ಫ್ರೆಡ್ರಿಕ್ ಮಸ್ಕರೇನ್ಹಸ್ ಅವರು ಎಟಿಎಂನ್ನು ಆಶೀರ್ವಚಿಸಿ ಶಾಖೆ ಮತ್ತು ಅದರ ಗ್ರಾಹಕರಿಗೆ ಅನುಗ್ರಹ ಮತ್ತು ಸಮೃದ್ಧಿಯನ್ನು ಕೋರಿದರು.

ಎಟಿಎಂನಿoದ ಮೊದಲ ನಗದು ಹಿಂಪಡೆಯುವಿಕೆಯನ್ನು ಶ್ರೀ ಫ್ರೆಡ್ರಿಕ್ ವಿನ್ಸೆಂಟ್ ಅಂದ್ರಾದೆ ಮಾಡಿದರು.ಈ ಸಮಾರಂಭದಲ್ಲಿ ಮುಖ್ಯ ಅತಿಥಿ ಶ್ರೀ ಫ್ರಾನ್ಸಿಸ್ ಡಿ ಸೋಜಾ, ಸೇಂಟ್ ಜೋಸೆಫ್ ಅರ್ಥ್ ಮೂವರ್ಸ್ ಮತ್ತು ಸೇಂಟ್ ಜೋಸೆಫ್ ಪ್ಯೂಯೆಲ್ಸ್ ಮಾಲೀಕ ಶ್ರೀ ಡೊಮಿನಿಕ್ ಆಂದ್ರಾದೆ ಮತ್ತು ಬೆಳ್ಮನ್‌ನ ಸೇಂಟ್ ಜೋಸೆಫ್ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ