image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆ.10ರಂದು ಓಶಿಯನ್ ಪರ್ಲ್ ನಲ್ಲಿ ನಡೆಯಲಿದೆ ಕಲಾಸಾಧನದ ಸ್ವರಧಾರ ಸಂಗೀತ ಉತ್ಸವ

ಆ.10ರಂದು ಓಶಿಯನ್ ಪರ್ಲ್ ನಲ್ಲಿ ನಡೆಯಲಿದೆ ಕಲಾಸಾಧನದ ಸ್ವರಧಾರ ಸಂಗೀತ ಉತ್ಸವ

ಮಂಗಳೂರು: ಕಲಾಸಾಧನ ಮಂಗಳೂರು ಇದರ ವತಿಯಿಂದ 'ಸ್ವರಧಾರಾ'  ಸಂಗೀತ ಉತ್ಸವ ಆ.10ರಂದು ಸಂಜೆ 5ಗಂಟೆಯಿಂದ ನಗರದ ಓಶಿಯನ್  ಪರ್ಲ್  ಸಭಾಂಗಣದಲ್ಲಿ ನಡೆಯಲಿದೆ. ಉತ್ಸವದಲ್ಲಿ ಪ್ರಸಿದ್ಧ ಹಿಂದೂಸ್ತಾನಿ ಗಾಯಕಸಂಗೀತ ನಾಟಕ ಅಕಾಡೆಮಿ ನವದೆಹಲಿಯಿಂದ ಭಾರತರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಪಂಡಿತ್ ಕುಮಾರ್  ಮರ್ದೂರ್ ಭಾಗವಹಿಸಲಿದ್ದಾರೆ. 

ಕುಮಾರ್ ರವರು ಕಿರಾಣಾ, ಗ್ವಾಲಿಯರ್ ಮತ್ತು ಜೈಪುರ ಘರಾಣೆಗಳ ಶೈಲಿಗಳನ್ನು ಬೆರೆಸಿ ತಮ್ಮದೇ ಆದ ಗಾಯನವನ್ನು ರಚಿಸಿ ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದವರು.ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್ ಸೋಮನಾಥ ಮರ್ದೂರರ ಫುತ್ರ. ಕುಮಾರ್ 2011 ರಿಂದ 2021 ರವರೆಗೆ 10 ವರ್ಷಗಳ ಕಾಲ ಕೋಲ್ಕತ್ತಾದ ಐಟಿಸಿ-ಸಂಗೀತ ಸಂಶೋಧನಾ ಅಕಾಡೆಮಿಯಲ್ಲಿ ಬೋಧನಾ ಅಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ಅಮೆರಿಕ ಸಂಯುಕ್ತ ಸಂಸ್ಥಾನ, ಕೆನಡಾ, ಸಿಂಗಾಪುರ, ಬಾಂಗ್ಲಾದೇಶಗಳಲ್ಲಿ  ಕಾರ್ಯ ನೀಡಿ ಖ್ಯಾತಿ ಪಡೆದವರು. ಉತ್ಸವದಲ್ಲಿ ಅಕ್ಷಯ ಜೋಶಿ ಧಾರವಾಡ್ ತಬಲಾ ಮತ್ತುಸತೀಶ್ ಭಟ್ ಹೆಗ್ಗಾರ್ ಹಾರ್ಮೊನಿಯಂ ಸಾಥ್ ನೀಡಲಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ನೆರವೇರಿಸಲಿದ್ದಾರೆ ಎಂದು ಕಲಾ ಸಾಧನ ಕೇಂದ್ರದ  ನಿರ್ದೇಶಕಿ ಶ್ರೀಮತಿ ವಿಭಾಶ್ರೀನಿವಾಸ ನಾಯಕ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿ ಯಲ್ಲಿ ಸಂಸ್ಥೆಯ ಗೌರವ ಸಲಹೆಗಾರ ಶ್ರೀನಿವಾಸ್ ನಾಯಕ್ ಇಂದಾಜೆ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ