image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಹಕಾರಿ ರಂಗಕ್ಕೆ ಭದ್ರ ತಳಪಾಯ ಹಾಕಿ ಕೊಟ್ಟವರು ಮೊಳಹಳ್ಳಿ ಶಿವರಾವ್‌: ಡಾ.ಎಂ.ಎನ್.ರಾಜೇಂದ್ರಕುಮಾ‌ರ್

ಸಹಕಾರಿ ರಂಗಕ್ಕೆ ಭದ್ರ ತಳಪಾಯ ಹಾಕಿ ಕೊಟ್ಟವರು ಮೊಳಹಳ್ಳಿ ಶಿವರಾವ್‌: ಡಾ.ಎಂ.ಎನ್.ರಾಜೇಂದ್ರಕುಮಾ‌ರ್

ಮಂಗಳೂರು : ಅವಿಭಜಿತ ದ.ಕ.ಜಿಲ್ಲೆಯಲ್ಲಿ ಸಹಕಾರಿ ರಂಗ ಬೆಳೆಯಲು ಮೊಳಹಳ್ಳಿ ಶಿವರಾವ್ ಅವರು ಹಾಕಿ ಕೊಟ್ಟ ಭದ್ರ ತಳಪಾಯ ಕಾರಣ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದ್ದಾರೆ.ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಲಿಮಿಟೆಡ್ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಸಹಕಾರಿ ಪಿತಾಮಹ ದಿ। ಮೊಳಹಳ್ಳಿ ಶಿವರಾವ್‌ ಅವರ 145 ಜನ್ಮದಿನಾಚರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಹಕಾರಿ ಕ್ಷೇತ್ರ ಎಲ್ಲರನ್ನೂ ಬೆಳೆಸುತ್ತದೆ. ಮೊಳಹಳ್ಳಿ ಶಿವರಾಯರು ಸಮಾಜಕ್ಕೆ ದೊಡ್ಡ ಕೊಡುಗೆ ಸಹಕಾರಿ ಕ್ಷೇತ್ರ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾಲ ಪಡೆದ ರೈತರು ಶೇ.100 ಮರುಪಾವತಿ ಮಾಡುತ್ತಿರುವುದು ದೇಶದಲ್ಲೆ ಅಪರೂಪದ ಸಾಧನೆ. ಜಿಲ್ಲೆಯಲ್ಲಿ ರೈತರಿಗೆ ಸಾಲ ಸೌಲಭ್ಯ ದೊರೆತಿಲ್ಲ ಎನ್ನುವ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ಇಲ್ಲ. ಈ ಸಾಧನೆಗೆ ಜಿಲ್ಲೆಯಾದ್ಯಂತ ವಿಸ್ತರಿಸಿರುವ ಸಹಕಾರಿ ಸಂಸ್ಥೆ, ಅಲ್ಲಿನ ಸಿಬ್ಬಂದಿಗಳು ಆಡಳಿತ ಮಂಡಳಿ ಹಾಗೂ ಸದಸ್ಯರ ಪ್ರಮುಖ ಪಾತ್ರ ಇದೆ. ಕೃಷಿ ಸಾಲಕ್ಕೆ ಪ್ರಥಮ ಆದ್ಯತೆ ನೀಡುತ್ತಿದ್ದೇವೆ. ಕೃಷಿ ಸಾಲದ ಸಂದರ್ಭದಲ್ಲಿ ಲಾಭದ ಉದ್ದೇಶ ಮುಖ್ಯ ಸಹಕಾರಿ ಸಂಘಗಳು ವಾಣಿಜ್ಯ ಬ್ಯಾಂಕ್ ಗಳನ್ನು ಮೀರಿಸುವ ರೀತಿಯಲ್ಲಿ ಬೆಳೆಯಬೇಕಾಗಿದೆ ಎಂದರು.

ಸಮಾರಂಭದಲ್ಲಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನಿ., ಮಂಗಳೂರು ಇದರ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ. ಅಧ್ಯಕ್ಷ ರವಿರಾಜ ಹೆಗ್ಡೆ, ಕ್ಯಾಂಪ್ರೋ ಅಧ್ಯಕ್ಷ ಕಿಶೋ‌ರ್ ಕೊಡ್ಲಿ ಶುಭ ಹಾರೈಸಿದರು.

ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಮುಖ್ಯ ಕಾರ್ಯ. ನಿರ್ವಹ ಣಾಧಿಕಾರಿ, ಗೋಪಾಲಕೃಷ್ಣ ಭಟ್, ನಬಾರ್ಡ್ ಡಿ.ಜಿ.ಎಂ.ಸಂಗೀತ ಕರ್ತ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತದ ನಿರ್ದೇಶಕರು, ಮಂಗಳೂರು, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಲಿ. ನಿರ್ದೇಶಕರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕರಾವಳಿ ಸಹಕಾರಿ ಮಾಸ ಪತ್ರಿಕೆಯನ್ನು ಡಾ.ಎಂ.ಎನ್.ರಾಜೇಂದ್ರ ಕುಮಾ‌ರ್ ಬಿಡುಗಡೆಗೊಳಿಸಿದರು.

ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಲಿ. ಅಧ್ಯಕ್ಷ  ಶಶಿಕುಮಾರ್  ರೈ ಬಾಲ್ಗೊಟ್ಟು ಸ್ವಾಗತಿಸಿದರು. ಹರೀಶ್ ‌ಆಚಾರ್ಯ ವಂದಿಸಿದರು.

Category
ಕರಾವಳಿ ತರಂಗಿಣಿ