image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕನ್ನಡಿ ಹಾವಿಂದ ಕಚ್ಚಿಸಿಕೊಂಡ ವ್ಯಕ್ತಿ ಸಾವು

ಕನ್ನಡಿ ಹಾವಿಂದ ಕಚ್ಚಿಸಿಕೊಂಡ ವ್ಯಕ್ತಿ ಸಾವು

ಮಂಗಳೂರು: ವಿಷವಿಲ್ಲದ ಹಾವೆಂದು ತಪ್ಪಾಗಿ ಭಾವಿಸಿದ ರಾಮಚಂದ್ರ ಪೂಜಾರಿ (55) ಕನ್ನಡಿ (ಕಂದಡಿ) ಹಾವನ್ನು ಹಿಡಿಯಲು ಹೋಗಿ ಅದೇ ಹಾವಿನಿಂದ ಕಚ್ಚಿಸಿಕೊಂಡು ಸಾವನ್ನಪ್ಪಿದ ಘಟನೆ ನಗರದ ಹೊರವಲಯದ ಬಜ್ಪೆಯಲ್ಲಿ ನಡೆದಿದೆ. ಗುರುವಾರ ಬಜ್ಪೆಯ ಮನೆಯೊಂದರ ಪರಿಸರದಲ್ಲಿ ಕನ್ನಡಿ ಹಾವು ಕಾಣಿಸಿಕೊಂಡಾಗ ರಾಮಚಂದ್ರ ಪೂಜಾರಿಯವರು ವಿಷರಹಿತ ಹಾವೆಂದು ತಪ್ಪಾಗಿ ಭಾವಿಸಿ ಕೈಯಲ್ಲಿ ಹಿಡಿದಿದ್ದರು. ಆಗ ಹಾವು ಅವರ ಕೈಗೆ ಕಚ್ಚಿದೆ. ಆದರೆ ರಾಮಚಂದ್ರ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಆದ್ದರಿಂದ ಅವರು ಆಸ್ಪತ್ರೆಗೆ ತೆರಳದೆ ಮನೆಗೆ ತೆರಳಿದ್ದರು. ಸಂಜೆಯಾಗುತ್ತಲೇ ರಾಮಚಂದ್ರ ಪೂಜಾರಿಯವರಿಗೆ ತಲೆ ತಿರುಗಲಾರಂಭಿಸಿದೆ. ತಕ್ಷಣ ಅವರನ್ನು ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ ಆದರೆ ಶುಕ್ರವಾರ  ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ವರದಿಯಾಗಿದೆ

Category
ಕರಾವಳಿ ತರಂಗಿಣಿ