ಮಂಗಳೂರು: ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ಅಸ್ತಿತ್ವದಲ್ಲಿರುವ ಭಾರತ ಸರ್ಕಾರದ ನಗರಾಭಿವೃದ್ದಿ ಮತ್ತು ಬಡತನ ನಿವಾರಣೆ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಪ್ರಾಯೋಜಿತ ಯೋಜನೆಯಾದ ಮೀನುಗಾರಿಕೆಯಲ್ಲಿ ಕೌಶಲ್ಯಾಭಿವೃಧ್ಧಿ ಮತ್ತು ಸುರಕ್ಷತಾ ತರಬೇತಿ ಕೇಂದ್ರದಲ್ಲಿ ತಾತ್ಕಾಲಿಕ ಆಧಾರದ ಮೇಲೆ ಸಹ ತರಬೇತುದಾರ ಮತ್ತು ಸಹಾಯಕ ತರಬೇತುದಾರ ಹಾಗೂ ಆರೈಕೆದಾರ/ ಸಹಾಯಕ ಹುದ್ದೆಗಳಿಗೆ ಪುರುಷ ವ್ಯಕ್ತಿಗಳನ್ನು ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ, ವಿದ್ಯಾರ್ಹತೆ, ಅನುಭವ, ಸಂದರ್ಶನ ಇತ್ಯಾದಿಗಳ ವಿವರಗಳ ಮಾಹಿತಿಯನ್ನು ವೆಬ್‍ಸೈಟ್ www.cofm.edu.in ಮೂಲಕ ಪಡೆಯಬಹುದು. ಅರ್ಜಿಯನ್ನು ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿ ಭರ್ತಿ ಮಾಡಿದ ಅರ್ಜಿಯನ್ನು ‘ಸಹಾಯಕ ಆಡಳಿತಾಧಿಕಾರಿ, ಮೀನುಗಾರಿಕಾ ಕಾಲೇಜು, ಮಂಗಳೂರು–575 002’ ರವರಿಗೆ ಆಗಸ್ಟ್ 14 ರೊಳಗೆ ಖುದ್ದಾಗಿ, ಅಂಚೆ ಅಥವಾ ಕೊರಿಯರ್ ಮೂಲಕ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ಸಂಯೋಜಕರು ಹಾಗೂ ಪ್ರಧಾನ ಸಂಶೋಧಕ ಪೆÇ್ರಫೆಸರ್ ಡಾ. ಎ.ಟಿ. ರಾಮಚಂದ್ರ ನಾಯ್ಕ್ ಮೊಬೈಲ್ ಸಂಖ್ಯೆ: 9916924084 ಗೆ ಅಥವಾ ಸಹ ಪ್ರಾಧ್ಯಾಪಕ ಡಾ. ಕುಮಾರನಾಯ್ಕ ಎ.ಎಸ್. ಮೊಬೈಲ್ ಸಂಖೈ:8618660949 ಸಂಪರ್ಕಿಸಬಹುದು ಎಂದು ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.