ಮಂಗಳೂರು: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತ ( ಮೆಸ್ಕಾಂ) ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮಾಡಾವು 110/33/11 ಕೆವಿ ವಿದ್ಯುತ್ ಉಪಕೇಂದ್ರದಿಂದ 33/11 ಕೆವಿ ಉಪಕೇಂದ್ರ ಸವಣೂರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಹೊಸದಾಗಿ ನಿರ್ಮಾಣ ಮಾಡಿರುವ ಓವರ್‌ಹೆಡ್ ಲೈನ್ ಮತ್ತು ಭೂಗತ ಲೈನನ್ನು ಜು. 30 ಅಥವಾ ಆನಂತರದ ಯಾವುದೇ ದಿನದಿಂದ ಚಾಲನೆಗೊಳಿಸಲು ಉದ್ದೇಶಿಸಲಾಗಿದೆ.
ಈ ವಿದ್ಯುತ್ ಮಾರ್ಗವು ಹಾದುಹೋಗುವ ಜೋಡುಕಾವಲು, ಕುಮಾರಮಂಗಲ, ನೇರೋಳ್ತಡ್ಕ, ಶುಚ್ಚೆಜಾಲು, ನಡುಮನೆ, ಪುಂಚ್ಚಪ್ಪಾಡಿ, ದೇವಸ್ಥ, ಆರಿಗಮಜಲು, ಸವಣೂರು ಪೇಟೆ, ಶಾಂತಿನಗರ ಪ್ರದೇಶಗಳಲ್ಲಿ ವಾಸಿಸುವ ಹಾಗೂ ಇತರರು ಯಾವುದೇ ಕಾಮಗಾರಿ ಕೈಗೊಳ್ಳುವ ಮೊದಲು ಮೆಸ್ಕಾಂ ಅನುಮತಿಯನ್ನು ಪಡೆಯಬೇಕಾಗಿ ಸಾರ್ವಜನಿಕರಿಗೆ/ಸಂಸ್ಥೆಗಳಿಗೆ ತಿಳಿಸಲಾಗಿದೆ. ಈ ಸೂಚನೆಗಳನ್ನು ಉಲ್ಲಂಘಿಸಿ ಉಂಟಾಗಬಹುದಾದ ಕಷ್ಟನಷ್ಟಗಳಿಗೆ ಮತ್ತು ಅನುಮತಿ ಪಡೆಯದೆ ನಡೆಸುವ ಚಟುವಟಿಕೆಗಳಿಗೆ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತವು ಜವಾಬ್ದಾರಿಯಾಗಿರುವುದಿಲ್ಲ ಹಾಗೂ ಇದನ್ನು ಸಾರ್ವಜನಿಕರು ಗಮನಿಸಿ, ಸಹಕರಿಸುವಂತೆ ಕೋರಲಾಗಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.