ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಮಹಾಯೋಜನೆ (ಪ-III) ರ ತಯಾರಿಕೆ ಕಾರ್ಯ ನಡೆಯುತ್ತಿದ್ದು, ಯೋಜನಾ ತತ್ವಗಳ ಆಧಾರದಲ್ಲಿ ಮಹಾಯೋಜನೆ (ಪ-III) ನ್ನು ತಯಾರಿಸಲಾಗುತ್ತಿದೆ. ಮಹಾಯೋಜನೆ ತಯಾರಿಸುವಾಗ ಕಾಯ್ದೆಯಂತೆ ಮಹಾಯೋಜನೆಯಲ್ಲಿ ರಸ್ತೆ ಪರಿಚಲನೆ ಹಾಗೂ ಭೂ ಉಪಯೋಗ ಪ್ರಸ್ತಾವಿತ ನಕ್ಷೆಗಳನ್ನು ತಯಾರಿಸಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಮಹಾಯೋಜನೆ (ಪ-II) ರಂತೆ ಭೂ ಉಪಯೋಗ ಬದಲಾವಣೆ ಕೋರುವ ಅರ್ಜಿಗಳನ್ನು ಸಾರ್ವಜನಿಕರಿಂದ ಆಗಸ್ಟ್ 14 ರವರೆಗೆ ಮಾತ್ರ ಸ್ವೀಕರಿಸಲಾಗುತ್ತದೆ. ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.