image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಂಬಳಪದವು ಅರ್ಕಾನ ಮಿತ್ತಕೋಡಿ ರಸ್ತೆ ಗುಡ್ಡ ಕುಸಿತದಿಂದಾಗಿ ಬಂದ್

ಕಂಬಳಪದವು ಅರ್ಕಾನ ಮಿತ್ತಕೋಡಿ ರಸ್ತೆ ಗುಡ್ಡ ಕುಸಿತದಿಂದಾಗಿ ಬಂದ್

ಕೊಣಾಜೆ: ಪಜೀರು ಗ್ರಾಮದ ಕಂಬಳಪದವು ಸಮೀಪದ ಅರ್ಕಾನ ಎಂಬಲ್ಲಿ ಧಾರಕಾರ ಮಳೆಗೆ ಗುಡ್ಡಕುಸಿದು ಅರ್ಕಾನ ಮಿತ್ತಕೋಡಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿದೆ. ಇತ್ತೀಚೆಗೆ ಕೆಲ ದಿನಗಳ ಹಿಂದೆಯಷ್ಟೇ ಇಲ್ಲಿ ಗುಡ್ಡದ ಮಣ್ಣು ಕುಸಿದು ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಈ ಪ್ರದೇಶದಲ್ಲಿ ಗುಡ್ಡ ಕುಸಿಯುವ ಭೀತಿ ಎದುರಾಗಿದ್ದು, ಕೆಲದಿನಗಳ ವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ಬಂದ್‌ಗೊಳಿಸುವ ಬಗ್ಗೆ ಅಧಿಕಾರಿಗಳು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.

Category
ಕರಾವಳಿ ತರಂಗಿಣಿ