image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನೆರೆ ಹಾವಳಿ ಪ್ರದೇಶಕ್ಕೆ ಭೇಟಿ ನೀಡಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ

ನೆರೆ ಹಾವಳಿ ಪ್ರದೇಶಕ್ಕೆ ಭೇಟಿ ನೀಡಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ

ಪಡುಬಿದ್ರಿ : ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನೆರೆ ಉಂಟಾಗಿರುವ ಪುರಸಭೆ ವ್ಯಾಪ್ತಿ ಪ್ರದೇಶಕ್ಕೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪುರಸಭೆ ವ್ಯಾಪ್ತಿಯ ಲೈಟ್‌ಹೌಸ್‌ ವಾರ್ಡ್‌ನ ರಾಮನಗರದಲ್ಲಿ ಮನೆಗಳಿಗೆ ನೀರು ನುಗ್ಗಿ ರಸ್ತೆಗಳು ಜಲಾವೃತಗೊಂಡಿದ್ದು, ಬೀಡುಬದಿ ವಾರ್ಡ್‌ನ ಕೆಲವೆಡೆ ಚರಂಡಿಯ ನೀರು ಗದ್ದೆಗಳಿಗೆ ನುಗ್ಗಿ ಬೆಳೆ ಹಾನಿಯಾಗಿದೆ. ನೀರು ಸರಾಗವಾಗಿ ಹರಿದು ಹೋಗಲು ಚರಂಡಿಗಳನ್ನು ನಿರ್ಮಿಸುಂತೆ, ಬೆಳೆ ಹಾನಿಗೆ ಗರಿಷ್ಠ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್‌ ಕುಮಾ‌ರ್, ಸದಸ್ಯರಾದ ನಿತೀಶ್ ಕುಮಾ‌ರ್, ಮುಖ್ಯಾಧಿಕಾರಿ ನಾಗರಾಜ್, ತಹಶೀಲ್ದಾ‌ರ್ ಪ್ರತಿಭಾ ಆರ್, ಸ್ಥಳೀಯರು ಜೊತೆಗಿದ್ದರು.

Category
ಕರಾವಳಿ ತರಂಗಿಣಿ