ಮಂಗಳೂರು : ದ.ಕ.ಜಿಲ್ಲೆಯಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ಜಿಲ್ಲೆಯಲ್ಲಿ ಜುಲೈ 16ರವರೆಗೆ ಎಲ್ಲೋ ಅಲರ್ಟ್ ಘೋಷಿಸಿದೆ. ಜು.16ರಿಂದ 20ರವರೆಗೆ ಆರೇಂಜ್ ಅಲರ್ಟ್ ನೀಡಲಾಗಿದೆ. ಕಡಲ ತೀರದಲ್ಲಿ ಗಂಟೆಗೆ 40ರಿಂದ 50 ಕಿ.ಮೀ. ವೇಗದಲ್ಲಿ ಭಾರೀ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಜು.16ರವರೆಗೆ ಮೀನುಗಾರರು ಕಡಲಿಗೆ ಇಳಿಯದಂತೆ ಸೂಚಿಸಲಾಗಿದೆ. ಶನಿವಾರ ಬೆಳಗ್ಗಿನಿಂದ ರವಿವಾರ ಬೆಳಗ್ಗಿನವರೆಗೆ ಜಿಲ್ಲೆಯಲ್ಲಿ 15.5 ಮಿಮೀ ಮಳೆಯಾಗಿದೆ. ಬೆಳ್ತಂಗಡಿ ಯಲ್ಲಿ 8.6, ಬಂಟ್ವಾಳದಲ್ಲಿ 29.3, ಮಂಗಳೂರಿನಲ್ಲಿ 21.4, ಪುತ್ತೂರಿನಲ್ಲಿ 17.1, ಸುಳ್ಯದಲ್ಲಿ 11.3, ಮೂಡುಬಿದಿರೆಯಲ್ಲಿ 14.4, ಕಡಬದಲ್ಲಿ 11.6, ಮೂಲ್ಕಿಯಲ್ಲಿ 24.9, ಉಳ್ಳಾಲದಲ್ಲಿ 34.5 ಮಿಮೀ ಮಳೆಯಾಗಿದೆ.