ಮಂಗಳೂರು: ಕಂಕನಾಡಿ ಗರೋಡಿ ಬಿಲ್ಲವಾ ಸೇವಾ ಸಮಾಜದ ವಾರ್ಷಿಕ ಮಹಾಸಭೆ ವಿದ್ಯಾರ್ಥಿ ವೇತನ ವಿತರಣೆ ಪ್ರತಿಭಾ ಪುರಸ್ಕಾರ ಸನ್ಮಾನ ಕಾರ್ಯಕ್ರಮವು ಸಂಘದ ಅಧ್ಯಕ್ಷರಾದ ಶ್ರೀ ಜೆ ದಿನೇಶ್ ಅಂಚನ್ ರವರ ಅಧ್ಯಕ್ಷತೆಯಲ್ಲಿ ಕಂಕನಾಡಿ ಗರಡಿ ಕ್ಷೇತ್ರದ ಸರ್ವ ಮಂಗಳ ಸಭಾಂಗಣದಲ್ಲಿ ಜರಗಿತು
ಪ್ರಾರಂಭದಲ್ಲಿ ಕ್ಷೇತ್ರದ ಸರ್ವ ಶಕ್ತಿಗಳಿಗೆ ಪೂಜೆಯನ್ನು ಸಲ್ಲಿಸಿ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ದೀಪವನ್ನು ಬೆಳಗಿಸಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು ಸಂಘದ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಕರ್ಕೇರ ರವರು ವಾರ್ಷಿಕ ವರದಿಯನ್ನು ಮತ್ತು ಕೋಶಾಧಿಕಾರಿ ಚಂದ್ರಹಾಸ ಕಟ್ಟಪುಣಿಯವರು ಲೆಕ್ಕಪತ್ರವನ್ನು ಸಭೆಯಲ್ಲಿ ಮಂಡಿಸಿದರು. ಸಂಘದ ನಿರ್ಣಯ ಪತ್ರವನ್ನು ಉಪಾಧ್ಯಕ್ಷರಾದ ರಾಮಚಂದ್ರ ಸುವರ್ಣ ಅವರು ಸಭೆಯಲ್ಲಿ ಓದಿ ಹೇಳಿದರು. ನಂತರ ನಡೆದ ವಿದ್ಯಾರ್ಥಿ ವೇತನ ವಿತರಣಾ ಸಭೆಯಲ್ಲಿ ಉದ್ಯಮಿ ಸೂರಜ್ ಕಲ್ಯ. ಅತ್ತಾವರ ಶ್ರೀ ಕೃಷ್ಣ ಜಯಂತಿ ಉತ್ಸವದ ಸಮಿತಿಯ ಅಧ್ಯಕ್ಷರಾದ ಚಂದ್ರನಾಥ್ ಅತ್ತಾವರ . ಶ್ರೀಯುತ ದಿನಕರ ಅಳಪೆ ಮುಂಬೈ. ಮಂಗಳೂರು ಮಹಾನಗರ ಪಾಲಿಕೆಯ ನಿಕಟ ಪೂರ್ವ ಸದಸ್ಯರುಗಳಾದ ಸಂದೀಪ್ ಗರೋಡಿ. ಶ್ರೀಮತಿ ಚಂದ್ರಾವತಿ ವಿಶ್ವನಾಥ್. ನಾಮ ನಿರ್ದೆಶಕ ಶ್ರೀ ಹೇಮಂತ್ ಗರೋಡಿ. ಜಪ್ಪಿನಮೊಗರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಅಧ್ಯಕ್ಷ ಶ್ರೀ ನಾಗರಾಜ ಬಿ ವಿ. ಕಂಕನಾಡಿ ಗರಡಿ ಕ್ಷೇತ್ರದ ಮುಕ್ತಸರ ವಿಟ್ಟಲ ಅಮೆವು. ರವರುಗಳು ಉಪಸ್ಥಿತಿಯಲ್ಲಿದ್ದ ಈ ಕಾರ್ಯಕ್ರಮದಲ್ಲಿ ಪಿ ಎಚ್ ಡಿ ಪದವಿ ಗಳಿಸಿದ ಶ್ರೀಯುತ ಸಂಜಿತ್ ಎಸ್ ಅಂಚನ್. ಕ್ರೀಡಾಪಟು ಶ್ರೇಯಸ್ ಎನ್ ಹಾಗೂ ಶ್ರೀಯುತ ಪ್ರವೀಣ್. ಶ್ರೀಮತಿ ಮಮತಾ ಪ್ರವೀಣ್ ರವರುಗಳನ್ನು ಸನ್ಮಾನಿಸಲಾಯಿತು. ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಹತ್ತನೇ ತರಗತಿಯ 24 ವಿದ್ಯಾರ್ಥಿಗಳನ್ನು ದ್ವಿತೀಯ ಪಿಯುಸಿಯ 20 ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರವಾಗಿ ಫಲ ಪುಷ್ಪ ಸ್ಮರಣೆಗೆ ಅರ್ಹತಾ ಪತ್ರಗಳೊಂದಿಗೆ ಗೌರವಿಸಲಾಯಿತು. ಶ್ರೀಯುತ ಜಯರಾಜ್ ರವರು ತಮ್ಮ ತಂದೆಯ ಸ್ಮರಣಾರ್ಥ ನೀಡುವ ಆರ್ಥಿಕ ನೆರವನ್ನು 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಆಶಿಶ್ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಂಜನಾ ರವರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಸಂಘದ ವ್ಯಾಪ್ತಿಗೆ ಒಳಪಟ್ಟ ಗ್ರಾಮಗಳ ವಿದ್ಯಾರ್ಥಿಗಳಿಗೆ ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ವಿದ್ಯಾರ್ಥಿ ವೇತನವನ್ನು ನೀಡಲಾಯಿತು. ವಿದ್ಯಾರ್ಥಿ ವೇತನ ಕಾರ್ಯಕ್ರಮವನ್ನು ವಿದ್ಯಾ ಸಮಿತಿ ಸಂಚಾಲಕರಾದ ಪದ್ಮನಾಭ ಮರೋಳಿ ಮತ್ತು ಶ್ರೀಯುತ ರಮಾನಂದರವರು ನಿರ್ವಹಿಸಿದರು. ಸಭೆಯಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ಶ್ರೀ ಗೋಪಾಲ್ ಪೂಜಾರಿ. ಮೋಹನ್ ಪಡೀಲ್ ಶ್ರೀ ವಸಂತ ಪೂಜಾರಿ ಶ್ರೀ ಮಹಾಬಲ ಪೂಜಾರಿ. ,ಕೆ ಧರ್ಮ ಪಾಲ್. ಪ್ರಭಾಕರ ಅಮೀನ್. ಭರತೇಶ ಅಮೀನ್. ಮೊದಲಾದವರು ಉಪಸ್ಥಿತರಿದ್ದರು ವಿದ್ಯಾನಿಧಿ ಸ್ಮರಣಾರ್ತಿಗಳಿಗೆ ಶ್ರೀಯುತ ಶೇಖರ್ ಅಮಿನ್ ಮರೋಳಿ ನುಡಿ ನಮನ ಸಲ್ಲಿಸಿದರು..ಜಯಪೂಜಾರಿ ಸ್ವಾಗತ ಗ್ಯದರು ದೇವದಾಸ್ ಮರೋಳಿಕಾರ್ಯಕ್ರಮ ನಿರ್ವಹಿಸಿದರು ಜೊತೆ ಕಾರ್ಯದರ್ಶಿ ನಿತೇಶ್ ಸಾಲಿಯನ್ಮ ಮತ್ತು ಧರ್ಮರಾಜ್ ವಂದಿಸಿದರು.ಚುನಾವಣಾ ಕಾರ್ಯಯಾಗಿ ವಸಂತ ಪೂಜಾರಿಯವರು ಕಾರ್ಯ ನಿರ್ವಹಿಸಿದರು