ಭ್ರಾಮರಿ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ಇದರ ಆಶ್ರಯದಲ್ಲಿ ನಡೆಯುವ 8ನೇ ವರ್ಷದ ಯಕ್ಷ ವೈಭವ 2025ರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಮಂಗಳೂರಿನ ನಲ್ಲಿ ಸೋಮವಾರ ಸಂಜೆ ಜರಗಿತು . ಮಾಜಿ ಮೇಯರ್ ದಿವಾಕರ ಪಾಂಡೇಶ್ವರ ದೀಪ ಬೆಳಗಿಸಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು ಸಮಾನ ಮನಸ್ಕ ಗೆಳೆಯರು ಸೇರಿಕೊಂಡು ಆರಂಭಿಸಿದ ವಾಟ್ಸಪ್ ಬಳಗವೊಂದು ಟ್ರಸ್ಟ್ ಆಗಿ ಪರಿವರ್ತಿತಗೊಂಡು ಯಕ್ಷಗಾನ ಸಂಘಟನೆಯ ಕೆಲಸ ಮಾಡಿ ಅಪರೂಪದ ಇಡೀ ರಾತ್ರಿಯ ಯಕ್ಷಗಾನ ಸಂಘಟಿಸುವ ಮೂಲಕ ಯಕ್ಷಗಾನ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದು ಶುಭ ಹಾರೈಸಿದರು. ಯಕ್ಷಗಾನವೆಲ್ಲ ಕಾಲಮಿತಿಗೆ ಒಳಪಡುತ್ತಿರುವಾಗ ಮಳೆಗಾಲದಲಿ ಯಕ್ಷಗಾನ ಕಲಾವಿದರಿಗೆ ಸಹಕಾರ ನೀಡುವ ಮೂಲಕ ಯಕ್ಷಗಾನ ಸಂಘಟಿಸುತ್ತಿರುವುದು ಮತ್ತು ಹಿರಿಯ ಕಲಾವಿದರನ್ನು ಸನ್ಮಾನಿಸಿ ಭ್ರಾಮರೀ ಯಕ್ಷಮಣಿ ಪ್ರಶಸ್ತಿ ನೀಡುವುದರ ಜತೆಗೆ ರಂಗದ ತೆರೆಮರೆಯಲ್ಲಿ ದುಡಿಯುವ ನೇಪಥ್ಯ ಕಲಾವಿದರಿಗೆ ಹಾಗೂ ಯಕ್ಷ ಸಂಘಟನೆ ಸಂಸ್ಥೆಗಳಿಗೆ ಭ್ರಾಮರೀ ಯಕ್ಷಸೇವಾ ಪುರಸ್ಕಾರ ನೀಡುತ್ತಿರುವುದು ಮೆಚ್ಚುಗೆಯ ಕೆಲಸ ಎಂದರು.
ಈ ಬಾರಿಯ ಭ್ರಾಮರೀ ಯಕ್ಷವೈಭವ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಗಸ್ಟ್ 2 2025 ಶನಿವಾರದಿಂದ ಮರುದಿನ ಮುಂಜಾನೆವರೆಗೆ ಜರಗಲಿದೆ .ಉಚಿತ ಪ್ರವೇಶ ಇರುತ್ತದೆ ಎಂದು ಸಂಘಟಕರು ತಿಳಿಸಿದರು
ಈ ಸಂದರ್ಭ ಭ್ರಾಮರಿ ಯಕ್ಷಮಿತ್ರರು ಟ್ರಸ್ಟ್‌ನ ಪ್ರಮುಖರಾದ ವಿನಯ್ ಕೃಷ್ಣ ಕುರ್ನಾಡ್,ಸತೀಶ್ ಮಂಜೇಶ್ವರ್, ರವಿಶಂಕರ ಭಟ್, ಸೂರ್ಯನಾರಾಯಣ ಭಟ್, ಪರಮೇಶ್ವರ್ ಭಟ್ ,ಉಮೇಶ್ ಶೆಟ್ಟಿ, ಕೃಷ್ಣ ಮರ್ಕಮೆ, ಅಶ್ವಿತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು ಸತೀಶ್ ಮಂಜೇಶ್ವರ ಸ್ವಾಗತಿಸಿದರು ವಿನಯಕೃಷ್ಣ ಕುರ್ನಾಡು ವಂದಿಸಿದರು.