ಮಂಗಳೂರು: ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖಾ ವತಿಯಿಂದ ಮೈಸೂರಿನ ಸರ್ಕಾರಿ ಅಂಧ ಮಕ್ಕಳ ಪಾಠಶಾಲೆಯ ಆವರಣದಲ್ಲಿ ಕಳೆದ 24 ವರ್ಷಗಳಿಂದಲೂ ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ಡಿಪ್ಲೊಮಾ ಇನ್ ಸ್ಪೆಷಲ್ ಎಜುಕೇಶನ್ (ಹೆಚ್.ಐ) ಹಾಗೂ ಡಿಪ್ಲೊಮಾ ಇನ್ ಸ್ಪೆಷಲ್ ಎಜುಕೇಶನ್ (ವಿ.ಐ) ನ ತರಬೇತಿ ಕಾರ್ಯಕ್ರಮವನ್ನು ಆರ್.ಸಿ.ಐ (ರಾಷ್ಟ್ರೀಯ ಪುನರ್ವಸತಿ ಮಂಡಳಿ) ರವರ ಪಠ್ಯಕ್ರಮ ಹಾಗೂ ಮಾರ್ಗಸೂಚಿಯನ್ವಯ ನಡೆಸಲಾಗುತ್ತಿದೆ.
ಸರ್ಕಾರದ ವತಿಯಿಂದ ಉಚಿತವಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ.ಹೆಚ್ಚಿನ ಮಾಹಿತಿಗೆ ಮೈಸೂರು ಪುಲಕೇಶಿ ರಸ್ತೆಯ ತಿಲಕ್ ನಗರ ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ 33 5, (0821-2491600) ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ