image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸರಕಾರದ ಕಾರ್ಯದರ್ಶಿಯ ಗಮನ ಸೆಳೆಯಲು ನಗರಾಭಿವೃದ್ಧಿ ಪ್ರಾಧಿಕಾರ ಮನವಿ

ಸರಕಾರದ ಕಾರ್ಯದರ್ಶಿಯ ಗಮನ ಸೆಳೆಯಲು ನಗರಾಭಿವೃದ್ಧಿ ಪ್ರಾಧಿಕಾರ ಮನವಿ

ಮಂಗಳೂರು : ದ.ಕ.ಮತ್ತು ಉಡುಪಿ ಜಿಲ್ಲೆಯ ಭೂಸಮಸ್ಯೆ ಬಗೆಹರಿಸಲು ನಗರಾಭಿವೃದ್ಧಿ ಸಚಿವರು ಮತ್ತು ಸರಕಾರದ ಕಾರ್ಯದರ್ಶಿಯ ಗಮನ ಸೆಳೆಯಲು ನಗರಾಭಿವೃದ್ಧಿ ಪ್ರಾಧಿಕಾರದ ಒಕ್ಕೂಟವು ಸ್ಪೀಕ‌ರ್ ಯು.ಟಿ.ಖಾದರ್‌ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್‌, ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸುಡ) ಅಧ್ಯಕ್ಷ ಕೆ.ಎಂ. ಮುಸ್ತಫ ನೇತೃತ್ವದ ನಿಯೋಗವು ಸ್ಪೀಕ‌ರ್ ಯು.ಟಿ.ಖಾದರ್‌ರನ್ನು ಭೇಟಿ ಮಾಡಿ ದ.ಕ., ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಪ್ರತ್ಯೇಕ ವಲಯ ನಿಯಮಾವಳಿ ರಚಿಸಲು ಮತ್ತು ಇತ್ತೀಚೆಗೆ ಗ್ರಾಪಂ ವ್ಯಾಪ್ತಿಗಳಲ್ಲಿ ಜಾರಿಗೊಳಿಸಿದ 9/11, ವಿನ್ಯಾಸ ನಕ್ಷೆ, ಪರವಾನಿಗೆ ಮೊದಲಾದ ನಿಯಮಗಳಲ್ಲಿ ಸರಳೀಕರಣಗೊಳಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸ್ಪೀಕರ್ ಯು.ಟಿ. ಖಾದರ್ ನಗರಾಭಿವೃದ್ಧಿ ಸಚಿವರಿಗೆ ಮತ್ತು ನಗರಾಭಿವೃದ್ಧಿ ಇಲಾಖೆ ಸರಕಾರದ ಕಾರ್ಯದರ್ಶಿಗೆ ಪತ್ರ ಬರೆದಿವುದಾಗಿ ತಿಳಿದು ಬಂದಿದೆ.

Category
ಕರಾವಳಿ ತರಂಗಿಣಿ