image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಚೆಕ್ ಅಮಾನ್ಯ ಪ್ರಕರಣ: ಸೂರಲ್ಪಾಡಿ ಬಿಜಿಲಿ ಖಾದರ್ ಗೆ ಜೈಲು ಶಿಕ್ಷೆ, ದಂಡ

ಚೆಕ್ ಅಮಾನ್ಯ ಪ್ರಕರಣ: ಸೂರಲ್ಪಾಡಿ ಬಿಜಿಲಿ ಖಾದರ್ ಗೆ ಜೈಲು ಶಿಕ್ಷೆ, ದಂಡ

ಮಂಗಳೂರು: ಚೆಕ್ ಅಮಾನ್ಯಗೊಂಡ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಸೂರಲ್ಪಾಡಿ ನಿವಾಸಿ, ಖಾದರ್, ಯಾನೆ ಬಿಜಿಲಿ ಖಾದರ್, ಕೃಷ್ಣಾಪುರದ ಖಾಲಿದ್ ಎಂಬವನಿಂದ kA-20 -C-2031 ಟಿಪ್ಪರ್ ಲಾರಿಯನ್ನು ಬಾಡಿಗೆ ರೂಪದಲ್ಲಿ ನಡೆಸುವ ಉದ್ದೇಶದಿಂದ ಪಡೆದು ಕೊಂಡಿದ್ದನು, ನಂತರದ ದಿನಗಳಲ್ಲಿ ಸೂರಲ್ಪಾಡಿ ಬಿಜಿಲಿ ಖಾದರ್ ಎಂಬವನು ಟಿಪ್ಪರ್ ಲಾರಿಯನ್ನು ಮಾಲಕರಿಗೆ ಹಿಂದುರುಗಿಸದೆ ವಂಚಿಸಿದ್ದನು, ಈ ಬಗ್ಗೆ ಬಜಪೆ ಠಾಣೆಯಲ್ಲಿ ಬಿಜಿಲಿ ಖಾದರ್ ವಿರುದ್ದ ಟಿಪ್ಪರ್ ಮಾಲಿಕ ಖಾಲಿದ್ ದೂರು ಸಲ್ಲಿಸಿದ್ದರು, ಆದರೆ ಖಾದರ್ ಟಿಪ್ಪರ್ ಲಾರಿಯನ್ನು ಬಿಡಿ ಭಾಗಗಳಾಗಿ ಮಾರಾಟ ಮಾಡಿರುವ ಆರೋಪ ಕೇಳಿ ಬಂದು ಕೊನೆಗೆ ಹಿರಿಯರ ಸಮ್ಮುಖ ದಲ್ಲಿ 6,00,000 (ಆರು ಲಕ್ಷ)ರೂಪಾಯಿ ನೀಡುತ್ತೇನೆಂದು ಖಾದರ್ ಒಪ್ಪಿಕೊಂಡು ಚೆಕ್ ನೀಡಿ ಕರಾರು ಪತ್ರ ಮಾಡಿ ಖಾಲಿದ್ ಗೆ ಕೊಟ್ಟಿದ್ದು ಆದರೆ ಆರೋಪಿ ಖಾದರ್ ಸೂರಲ್ಪಾಡಿ ಎಂಬವನು ಪಾವತಿಗೆ ಚೆಕ್ ನೀಡಿದ್ದರೂ ಅದು ಅಮಾನ್ಯಗೊಂಡ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರು 8ನೇ ಜೆಎಂಎಫ್‌ಸಿ ನ್ಯಾಯಾಲಯ ಖಾದರ್ ನಿಗೆ 6,10,000 (ಆರು ಲಕ್ಷ ಹತ್ತು ಸಾವಿರ) ರೂ. ದಂಡ ವಿಧಿಸಿದೆ. ದಂಡ ಕಟ್ಟಲು ತಪ್ಪಿದ್ದಲ್ಲಿ ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಲು ಆದೇಶ ಹೊರಡಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಫವಾಜ್ ಪಿ. ಎ.  ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ.

Category
ಕರಾವಳಿ ತರಂಗಿಣಿ