ಮಂಗಳೂರು ಸಾಹಿತ್ಯದ ರಚನೆಯಲ್ಲಿ ವಿವಿಧ ಭಾಷೆಗಳು ತುರುಕಿ ಬರುವುದು ಈಗಿನ ಗ್ಲೋಬಲೈಜ್ ನಿಂದ ಸಾಮಾನ್ಯ. ನಾವು ಸಾಹಿತ್ಯದ ಬರವಣಿಗೆ ಮಾಡುವಾಗ ಮೂಲ ಆಂಗ್ಲ ಶಬ್ದ ಬರೆದರೆ ಸರಿಯಾದ ಸಾಂದರ್ಭಿಕ ಅರ್ಥ ಬರಲು ಸುಲಭ ಆದೀತು ಎಂದು ಹಿರಿಯ ಶಿಕ್ಷಕಿ ಸಾಹಿತಿ ಚಂದ್ರಕಲಾ ನಂದಾವರ್ ಹೇಳಿದರು.
ಅವರು ನಗರದ ಪ್ರೆಸ್ ಕ್ಲಬ್ ನಲ್ಲಿ ರೇಮಂಡ್ ಡಿಕೂನಾ ತಾಕೊಡೆ ಬರೆದ "ಆಭರಣಗಳು" ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಪರಿಚಯ ಮಾಡಿ ಮಾತನಾಡುತ್ತಿದ್ದರು.
ಪತ್ರಕರ್ತರ ಜೀವನ ಮತ್ತು ಸಾಹಿತಿ ಹಾಗೂ ಶಿಕ್ಷಕರ ಜೀವನ ಒಂದು ಪ್ರೆಶರ್ ನಲ್ಲಿ ಈಗ ಇದೆ. ಯಾವುದು ಬರೆಯಬೇಕು, ಹೇಳಬೇಕು, ಕಲಿಸಬೇಕು ಎಂದು ಹೇಳುವ ಒತ್ತಡ ಇಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಮುಕ್ತವಾಗಿ ಮತ್ತು ಸರಳವಾಗಿ ಎಲ್ಲವೂ ಇದ್ದಾರೆ ಒಳ್ಳೆಯದು ಎಂಬುವ ಅಭಿಪ್ರಾಯ ವ್ಯಕ್ತಪಡಿಸಿದರು.
ಪುಸ್ತಕ ಬಿಡುಗಡೆ ಮಾಡಿದ ದಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ನಾಯಕ್ ಇಂದಾಜೆ ಸಾಹಿತ್ಯದ ಮಗ್ಗುಲುಗಳನ್ನು ಪತ್ರಕರ್ತರ ಜೀವನದ ಒಂದು ಅಂಶ ಅದನ್ನು ಮರೆಯದೆ ಬರೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರೆಸ್ ಕ್ಲಬ್ ಆಧ್ಯಕ್ಷ ಪಿಬಿ ಹರೀಶ್ ರೈ ಮಾತನಾಡಿ ಪ್ರತಿಯೊಬ್ಬ ಪತ್ರಕರ್ತರು ತಮ್ಮ ಬೈಲೈನ್ ಆರ್ಟಿಕಲ್ಸ್ ಸಂಗ್ರಹಿಸಿ ಪುಸ್ತಕ ಪ್ರಕಟ ಮಾಡಬೇಕು. ಇಲ್ಲವಾದರೆ ನಾವು ಎಷ್ಟು ದೊಡ್ಡ ಪತ್ರಕರ್ತರು ಆದರೂ ಮತ್ತೆ ಮರೆತು ಹೋಗುತ್ತವೆ ಎಂದರು.
ಮೊದಲಿಗೆ ಹಿರಿಯ ಪತ್ರಕರ್ತ ಬಹುಭಾಷಾ ಸಾಹಿತಿ ರೇಮಂಡ್ ಡಿಕೂನಾ ತಾಕೊಡೆ ಸ್ವಾಗತಿಸಿ ರಿಯಾನಾ ಡಿಕೂನಾ ವಂದಿಸಿದರು. ಪತ್ರಕರ್ತರ ಸಂಘದ ಉಪಾಧ್ಯಕ್ಷ ಪತ್ರಕರ್ತ ಭಾಸ್ಕರ ರೈ ಕಟ್ಟ ನಿರೂಪಿಸಿದರು.