ಸುಳ್ಯ: ಜಾಲ್ಲೂರು ಗ್ರಾಮದ ಕೆಮನಬಳ್ಳಿ ಬಳಿ ತೋಟಕ್ಕೆ ಕಾಡಾನೆ ದಾಳಿ ಮಾಡಿ ಅಪಾರ ಪ್ರಮಾಣದ ಅಡಕೆ, ತೆಂಗು, ಬಾಳೆ ಕೃಷಿಯನ್ನು ನಾಶ ಪಡಿಸಿದೆ. ಕಾಡಾನೆ ಕಳೆದ ಮೂರು ದಿನಗಳಿಂದ ಸತತವಾಗಿ ರಾತ್ರಿ ವೇಳೆ ದಾಳಿ ನಡೆಸುತ್ತಿದ್ದು ಅಪಾರ ಕೃಷಿಯನ್ನು ನಾಶಪಡಿಸಿದೆ. ಮೂರು ದಿನಗಳಲ್ಲಿ ಸುಮಾರು 50ಕ್ಕೂ ಅಡಕೆ ಮರಗಳು, ತೆಂಗು ಹಾಗೂ ಬಾಳೆ ಗಿಡಗಳನ್ನು ಪುಡಿಗೈದು ಹಾನಿಯುಂಟು ಮಾಡಿದೆ. ಕಳೆದ ಕೆಲವು ತಿಂಗಳುಗಳಿಂದ ಜಾಲ್ಲೂರು ಮತ್ತು ಕನಕಮಜಲು ಗ್ರಾ ಪರಿಸರದಲ್ಲಿ ಕಾಡಾನೆಗಳ ಉಪಟಳ ಮಿತಿ ಮೀರಿದ್ದು, ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಕೂಡಲೇ ಗಮನ ಹರಿಸಿ ಕೃಷಿ ಹಾನಿಯನ್ನು ತಪ್ಪಿಸಬೇಕೆಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ.