image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪಕ್ಷದ ಸಿದ್ಧಾಂತದಲ್ಲಿ ಯಾವುದೇ ರೀತಿಯ ರಾಜಿ ಇಲ್ಲದೆ ಪಕ್ಷದ ಬೆಳವಣಿಗೆಯಲ್ಲಿ ತೊಡಗಿಸಿ : ವಿನಯ್ ಕುಮಾರ್ ಸೊರಕೆ

ಪಕ್ಷದ ಸಿದ್ಧಾಂತದಲ್ಲಿ ಯಾವುದೇ ರೀತಿಯ ರಾಜಿ ಇಲ್ಲದೆ ಪಕ್ಷದ ಬೆಳವಣಿಗೆಯಲ್ಲಿ ತೊಡಗಿಸಿ : ವಿನಯ್ ಕುಮಾರ್ ಸೊರಕೆ

ಕಾಪು : ಪಕ್ಷದ ಸಿದ್ಧಾಂತದಲ್ಲಿ ಯಾವುದೇ ರೀತಿಯ ರಾಜಿ ಇಲ್ಲದೆ ಪಕ್ಷದ ಬೆಳವಣಿಗೆಯಲ್ಲಿ ತೊಡಗಿಸಿ ಕೊಳ್ಳಬೇಕು. ಸಂವಿಧಾನಕ್ಕೆ ಧಕ್ಕೆ ಬಂದರೆ ಸಿದ್ಧಾಂತಕ್ಕಾಗಿ ಹೋರಾಟ ಮಾಡುವಂತಹ ಕೆಲಸಕ್ಕೆ ಯುವಕಾಂಗ್ರೆಸ್‌ ಅಣಿಯಾಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಕರೆ ನೀಡಿದರು. ಕಾಪು ವಿಧಾನಸಭಾ ಕ್ಷೇತ್ರ ಯುವಕಾಂಗ್ರೆಸ್ ಸಮಿತಿಯ ಕಾಪು ಯುವ ಕಾಂಗ್ರೆಸ್ ಸಮಿತಿ ದಕ್ಷಿಣ ಮತ್ತು ಉತ್ತರ ಮತ್ತು ನೂತನ ಕಾರ್ಯಕಾರಿ ಸಮಿತಿ ಪದಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಕಳೆದ ಐವತ್ತು ವರ್ಷಗಳು ಇಲ್ಲದ ತುರ್ತು ಪರಿಸ್ಥಿತಿಯ ವಿಚಾರ ಇರಲಿಲ್ಲ. ಮೋದಿ ಅಧಿಕಾರದಲ್ಲಿರುವ ಸಂದರ್ಭದಲ್ಲಿ ಇದೀಗ ತುರ್ತು ಪರಿಸ್ಥಿತಿಯ ಬಗ್ಗೆ ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಅಗುತ್ತಿದೆ.

ಇಂದಿರಾ ಗಾಂಧಿನ ಅವರಿಗೆ ಅಂದು ಸವಾಲುಗಳಿತ್ತು. ಬಡತನ ನಿರ್ಮುಲನ ಮಾಡಬೇಕು. 20 ಅಂಶ ಕಾರ್ಯಕ್ರಮ ಅನುಷ್ಠಾನ ತರಬೇಕು. ಬಡವರ, ದೀನ ದಲಿತರ ಪರವಾಗಿ ಸಾಮಾಜಿಕ ಸ್ವಾತಂತ್ರದ ಕನಸಿಗಾಗಿ ಅಂದು ಅನಿವಾರ್ಯವಾಗಿ ದೇಶಕ್ಕೆ ತುರ್ತು ಪರಿಸ್ತಿತಿ ಹೇರಬೇಕಾಗಿ ಬಂತು. ಇಂದು ಅದನ್ನೇ ಬಿಂಬಿಸುವ ಮೂಲಕ ಸೂಕ್ಷ್ಮವಾಗಿ ಸಂವಿಧಾನದ ಸಮಾಜವಾದ ಮತ್ತು ಜಾತ್ಯಾತೀತತೆ ತೆಗೆದು ಹಾಕುವ ಬಗ್ಗೆ ಕೆಲಸ ಕಾರ್ಯಗಳು ನಡೆಯುತ್ತಿದೆ. ಇದು ಸಂವಿಧಾನಕ್ಕೆ ಮಾರಕವಾಗಿದೆ. ಈ ನಿಟ್ಟಿನಲ್ಲಿ ಇಂತಹ ಧಕ್ಕೆ ತರುವಂತಹ ಕೆಲಸ ಆಡಳಿತ ರೂಢ ಮೋದಿ ಸರಕಾರ ಮಾಡುತ್ತಿವೆ. ಈ ನಿಟ್ಟಿನಲ್ಲಿ ಪ್ರತಿಯೊಇಬ್ಬರು ಎಚ್ಚೆತ್ತುಕೊಳ್ಳಬೇಕು. ಆದರೆ ಇಂದಿನ ಹಾಗೆ ಇಡಿ, ಐಟಿ ಸಿಬಿಐ ದಾಳಿ ಅಂದು ಇರಲಿಲ್ಲ. ಇಂದಿನ ಮೋದಿ ಸರಕಾರದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಅವರು ಹೇಳಿದರು.

ಉಡುಪಿ ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಕಾರ್ಯದರ್ಶಿ ಇನಾಯತ್ ಆಲಿ, ಕಾಪು ಬ್ಲಾಕ್ ಕಾಂಗ್ರೆಸ್‌ ಸಮಿತಿಯ (ದಕ್ಷಿಣ) ಅಧ್ಯಕ್ಷ ವೈ.ಸುಕುಮಾ‌ರ್, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ (ಉತ್ತರ)ಅಧ್ಯಕ್ಷ ಸಂತೋಷ್ ಕುಲಾಲ್, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್‌ನ ಅಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ, ಮಾಜಿ ಅಧ್ಯಕ್ಷ ದೀಪಕ್ ಕೋಟ್ಯಾನ್ ಇನ್ನಾ ನವೀನ್‌ಚಂದ್ರ ಜೆ. ಶೆಟ್ಟಿ, ಅಬ್ದುಲ್ ಅಝೀಝ್ ಹೆಜಮಾಡಿ, ವಿಶ್ವಾಸ್‌ ಅಮೀನ್, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ಉತ್ತರ) ಅಧ್ಯಕ್ಷ ಶರತ್‌ ನಾಯ್ಕ, ಕಾಪು ಬ್ಲಾಕ್ ಯುವಕಾಂಗ್ರೆಸ್‌ ಸಮಿತಿ (ದಕ್ಷಿಣ) ಅಧ್ಯಕ್ಷ ಗೌರೀಶ್ ಕೋಟ್ಯಾನ್, ಅರ್ಜುನ್ ನಾಯರಿ, ಕಾಪು ದಿವಾಕ‌ರ್ ಶೆಟ್ಟಿ, ಶರ್ಪುದ್ದೀನ್, ಎಂ. ಎ ಗಪೂರ್ ನವೀನ್ ಚಂದ್ರ ಸುವರ್ಣ, ಹಸನಬ್ಬ ಶೇಕ್, ನವೀನ್ ಎನ್ ಶೆಟ್ಟಿ, ಹರೀಶ್ ಕಿಣಿ, ರಮೀಜ್ ಹುಸೇನ್, ಶಾಂತ ಲತಾ ಶೆಟ್ಟಿ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ