ಮಂಗಳೂರು: ಅಡ್ಯಾರ್ ಗ್ರಾಮ ಪಂಚಾಯತ್, ಅಡ್ಯಾರ್ ಮಂಗಳೂರು ಮತ್ತು ಸಹ್ಯಾದ್ರಿ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜೆಂಟ್, ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಅಡ್ಯಾರ್ ಪದವು ಅಂಬೇಡ್ಕರ್ ಭವನದಲ್ಲಿ 'ವಿದ್ಯುತ್ ಮಗ್ಗ ಬಟ್ಟೆ ಉತ್ಪಾದನಾ ಘಟಕ' ಶುಭಾರಂಭಗೊಂಡಿತು. ಕಾರ್ಯಕ್ರಮವನ್ನು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ, ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ ಭಾಗವಹಿಸಿದ್ದರು. ವಿದ್ಯುತ್ ಮಗ್ಗ ಘಟಕ ಉದ್ಘಾಟನೆಯು ಗ್ರಾಮೀಣ ಆಧಾರಿತ ಉದ್ಯಮದ ವಿಕಾಸದತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಅಡ್ಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಜಲೀಲ್ ಸಮಾರಂಭದ ಅಧ್ಯಕ್ಷೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಹಾಗೂ ಸ್ಥಳೀಯ ನಾಗರಿಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಕಾಲೇಜು ಪ್ರಾಂಶುಪಾಲರು ಡಾ. ಇಂಜಗನೇರಿ ಸ್ವಾಗತಿಸಿದರು, ಡಾ.ವಿಶಾಲ್ ಸಮರ್ಥ ಅವರು ವಂದಿಸಿದರು. ಪ್ರೊ ಪದ್ಮನಾಭ ಕಾರ್ಯಕ್ರಮ ನಿರೂಪಿಸಿದರು.