image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರು ಮಹಾನಗರ ಪಾಲಿಕೆಯ ನಗರ ಯೋಜನೆ ವಿಭಾಗದಲ್ಲಿ ಶುಕ್ರವಾರವೂ ಲೋಕಾಯುಕ್ತ ಪೊಲೀಸರಿಂದ ಕಡತಗಳ ಪರಿಶೀಲನೆ

ಮಂಗಳೂರು ಮಹಾನಗರ ಪಾಲಿಕೆಯ ನಗರ ಯೋಜನೆ ವಿಭಾಗದಲ್ಲಿ ಶುಕ್ರವಾರವೂ ಲೋಕಾಯುಕ್ತ ಪೊಲೀಸರಿಂದ ಕಡತಗಳ ಪರಿಶೀಲನೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ನಗರ ಯೋಜನೆ ವಿಭಾಗದಲ್ಲಿ ಶುಕ್ರವಾರವೂ ಲೋಕಾಯುಕ್ತ ಪೊಲೀಸರು ಕಡತಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಟಿಡಿಆರ್ ನಲ್ಲಿ ಕೆಲವೊಂದು ಅವ್ಯವಹಾರ ನಡೆದಿರುದ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಜೂ.21ರಿಂದ ಲೋಕಾಯುಕ್ತ ಅಧಿಕಾರಿಗಳು ನಗರ ಪಾಲಿಕೆಗೆ ದಾಳಿ ನಡೆಸಿ ವಿವಿಧ ವಿಭಾಗಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ಹಲವು ಅವ್ಯವಹಾರ, ಅಧಿಕಾರ ದುರುಪಯೋಗ ನಡೆದಿರುವುದು ಕಂಡು ಬಂದಿದೆ. ದಲ್ಲಾಳಿಯ ಬಳಿ 5 ಲಕ್ಷ ರೂ. ಕೂಡಾ ಪತ್ತೆಯಾಗಿತ್ತು. ಲೋಕಾಯುಕ್ತ ಅಧಿಕಾರಿಗಳು ನಿರಂತರ ಪರಿಶೀಲನೆ ನಡೆಸುತ್ತಿರುವುದರಿಂದ ಪಾಲಿಕೆಯ ಅಧಿಕಾರಿಗಳಿಗೆ ನಡುಕ ಉಂಟಾಗಿದೆ ಎನ್ನಲಾಗಿದೆ. ಒಂದು ವಾರದಿಂದ ಕಂದಾಯ, ಆರೋಗ್ಯ ಪರಿಸರ ಸಹಿತ ಪ್ರಮುಖ ವಿಭಾಗಗಳ ಕಡತ ಪರಿಶೀಲನೆ ಮುಂದುವರಿದಿದೆ. ಈ ಬಗ್ಗೆ ಲೋಕಾಯುಕ್ತ ಕೇಂದ್ರ ಕಚೇರಿಗೆ ಸಮಗ್ರ ವರದಿ ನೀಡುವುದಾಗಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ