image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯಿಂದ ವಾಯುಪ್ರದೇಶ ಬಂದ್ ಹಿನ್ನೆಲೆ ಗಲ್ಫ್ ಗೆ ತೆರಳಿದ್ದ ವಿಮಾನಗಳು ಮಂಗಳೂರಿಗೆ ವಾಪಸ್

ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯಿಂದ ವಾಯುಪ್ರದೇಶ ಬಂದ್ ಹಿನ್ನೆಲೆ ಗಲ್ಫ್ ಗೆ ತೆರಳಿದ್ದ ವಿಮಾನಗಳು ಮಂಗಳೂರಿಗೆ ವಾಪಸ್

ಮಂಗಳೂರು: ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯಿಂದ ಅಲ್ಲಿನ ವಾಯು ಪ್ರದೇಶಗಳು ಮುಚ್ಚಿದ್ದರಿಂದ ಗಲ್ಫ್ ಗೆ ತೆರಳಿದ್ದ ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿತ್ತು. ಆ ವಿಮಾನಗಳು ವಾಪಸ್ ಮಂಗಳೂರಿಗೆ ಬಂದಿಳಿದಿವೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ. ಸೋಮವಾರ ಸಂಜೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಮಾಮ್ ಗೆ ಹೊರಟಿದ್ದ ಏರ್ ಇಂಡಿಯ ವಿಮಾನವನ್ನು ಮಸ್ಕತ್‌ಗೆ ತಿರುಗಿಸಲಾಗಿತ್ತು. ಅಬುಧಾಬಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವನ್ನು ಮುಂಬೈನಲ್ಲಿ ಇಳಿಸಲಾಗಿತ್ತು. ಮಂಗಳವಾರ ಬೆಳಿಗ್ಗೆ ಎರಡೂ ವಿಮಾನಗಳು ವಾಪಸ್‌ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ.

Category
ಕರಾವಳಿ ತರಂಗಿಣಿ