image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜನಸೇವೆ ಮಾಡುವುದು ಅಷ್ಟೊಂದು ಸುಲಭದ ಕೆಲಸವಲ್ಲ : ಅಶೋಕ್ ರೈ

ಜನಸೇವೆ ಮಾಡುವುದು ಅಷ್ಟೊಂದು ಸುಲಭದ ಕೆಲಸವಲ್ಲ : ಅಶೋಕ್ ರೈ

ಪುತ್ತೂರು: ಜನಸೇವೆ ಮಾಡುವುದು ಅಷ್ಟೊಂದು ಸುಲಭದ ಕೆಸಲವಲ್ಲ. ಕಷ್ಟಗಳನ್ನು ಅನುಭವಿಸಿದವರಿಗೆ ಮಾತ್ರ ಇನ್ನೊಬ್ಬರ ಕಷ್ಟಗಳ ಅರಿವಾಗುತ್ತದೆ. ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಈ ನಿಟ್ಟಿನಲ್ಲಿ ಬಹಳ ಪ್ರಾಮಾಣಿಕವಾಗಿ ಜನಸೇವೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್‌ ಮಂಗಳೂರು ವತಿಯಿಂದ ನಡೆಸಲ್ಪಡುವ `ಕ್ಲಾನ್ ಆನ್ ವೀಲ್ಸ್' ಗ್ರಾಮೀಣ ವಿದ್ಯಾರ್ಥಿಗಳ ಕಂಪ್ಯೂಟರ್ ಕಲಿಕಾ ಬಸ್‌ನ ಶಾಶ್ವತ ಪ್ರಾಯೋಜಕತ್ವವನ್ನು ಬಜ್ಜೆಗುತ್ತು ದಿ. ಹಾಜಿ ಬಿ ಶೇಕುಂಞ ಸ್ಮರಣಾರ್ಥ ಅವರ ಪುತ್ರ ಝಕರಿಯಾ ಜೋಕಟ್ಟೆ (ಅಲ್‌ ಮುಝನ್ ಪಡೆದುಕೊಂಡಿದ್ದು, ಈ ಕಾರ್ಯಕ್ರಮವನ್ನು ಶನಿವಾರ ಪುತ್ತೂರಿನ ಚುಂಚಶ್ರೀ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಶಾಸಕರು ಉದ್ಘಾಟಿಸಿ ಮಾತನಾಡಿದರು.

ಇಂತಹ ಟ್ರಸ್ಟಳು ಜನರ ಕಷ್ಟಗಳಿಗೆ ಸ್ಪಂಧಿಸಲು ಸಾಧ್ಯವಿದೆ ಎಂಬ ವಿಚಾರ ಮತ್ತು ಆ ಬಗ್ಗೆ ಸ್ಪಷ್ಟವಾದ ಅರಿವು ನನಗಿದೆ. ದುಡ್ಡಿದ್ದ ಮಾತ್ರಕ್ಕೆ ಜನಸೇವೆ ಮಾಡಬಹುದು ಎಂದು ಹೇಳಲಾಗುವುದಿಲ್ಲ. ಅದು ಅಷ್ಟೊಂದು ಸುಲಭವೂ ಅಲ್ಲ. ಇದಕ್ಕೆ ತುಂಬಾ ಪ್ರಾಮಾಣಿಕತೆ ಮತ್ತು ಕಾಳಜಿ ಇರಬೇಕು. ತ್ಯಾಗ ಮನೋಭಾವ ಇರಬೇಕು. ಬಾಲ್ಯದಲ್ಲಿ ಕಷ್ಟ ಪಟ್ಟವರಿಗೆ ಮಾತ್ರ ಇನ್ನೊಬ್ಬರ ಕಷ್ಟ ಗೊತ್ತಾಗುತ್ತದೆ. ಈ ನಿಟ್ಟಿನಲ್ಲಿ ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್‌ ದೇಶ ಮತ್ತು ದೇವರು ಮೆಚ್ಚುವಂತಹ ಮಾದರಿಯಾದ ಕೆಲಸ ಮಾಡುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಂ. ಫ್ರೆಂಡ್ಸ್ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಝಕರಿಯಾ ಜೋಕಟ್ಟೆ ಮಾತನಾಡಿ ನಾವೆಲ್ಲರೂ ಸೇರಿಕೊಂಡು ಜಾತಿ, ಮತ ಬೇಧವಿಲ್ಲದ ಸೌಹಾರ್ಧತೆಯೊಂದಿಗೆ ಜೀವಿಸುವ ಜಿಲ್ಲೆಯನ್ನು ನಿರ್ಮಿಸಲು ಪ್ರಯತ್ನ ನಡೆಸಬೇಕು. ನಮ್ಮ ಜಿಲ್ಲೆಯು ಉತ್ತಮ ಪ್ರವಾಸಿ ಪ್ರದೇಶವಾಗಿ ಎಲ್ಲರನ್ನೂ ಆಕರ್ಷಿಸಬೇಕು. ಅದಕ್ಕಾಗಿ ನಾನು ರಾಜ್ಯದ ಮಂತ್ರಿಗಳ ಜೊತೆಗೂ ಚರ್ಚೆ ನಡೆಸಿದ್ದೇನೆ. ನನಗೆ ಸಮಾಜ ಸೇವೆ ಮಾಡಲು ಪ್ರೇರಣೆ ನೀಡಿದವರು ಎಂ. ಫ್ರೆಂಡ್ಸ್ ಸಂಸ್ಥಾಪಕ ರಶೀದ್‌ ವಿಟ್ಲ. ಅವರಿಂದಾಗಿ ನನ್ನ ಜನಸೇವೆಯ ಕಾರ್ಯ ಸಾಧ್ಯವಾಯಿತು. ಪುತ್ತೂರಿನ ಶಾಸಕರು ಅನೇಕ ಜನಪರ ಕೆಲಸಗಳನ್ನು ಮಾಡುತ್ತಿದ್ದು, ಅವರ ಉತ್ತಮ ಕೆಲಸಗಳ ಜೊತೆಗೆ ನಾನೂ ಕೈಜೋಡಿಸುತ್ತೇನೆ. ದಾನ ಮಾಡಿ ಯಾರೂ ಕೆಟ್ಟವರಿಲ್ಲ. ದಾನಕ್ಕೆ ಜನರ ಆಶೀರ್ವಾದವಿರುತ್ತದೆ. ಯಾವುದೇ ಕಾರಣಕ್ಕೂ ದಾನವನ್ನು ನಿಲ್ಲಿಸಬಾರದು ಎಂದು ಹೇಳಿದ ಅವರು ಬಾಲ್ಯದಲ್ಲಿ ನಾನೂ ಸಾಕಷ್ಟು ಬಡತನದ ನೋವು ಅನುಭವಿಸಿದ್ದೇನೆ ಎಂದು ನೆನಪಿಸಿಕೊಂಡರು.

Category
ಕರಾವಳಿ ತರಂಗಿಣಿ