image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸೋಮೇಶ್ವರನ ಸನ್ನಿಧಿಯಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನೇತೃತ್ವದ 'ಯೋಗ ವಿದ್ ಯೋಧ'.....

ಸೋಮೇಶ್ವರನ ಸನ್ನಿಧಿಯಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನೇತೃತ್ವದ 'ಯೋಗ ವಿದ್ ಯೋಧ'.....

ಮಂಗಳೂರು : ದ.ಕ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನೇತೃತ್ವದಲ್ಲಿ  ಅಂತರಾಷ್ಟ್ರೀಯ ಯೋಗ ದಿನ ಪ್ರಯುಕ್ತ ಇಂದು ಸೋಮೇಶ್ವರ ದೇವಾಲಯದ ಆವರಣದಲ್ಲಿ 'ಯೋಗ ವಿದ್ ಯೋಧ' ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮ ಉದ್ಘಾಟನೆಯ ಬಳಿಕ ಮಾತನಾಡಿದ ಸಂಸದ ಕ್ಯಾ. ಚೌಟ ಅವರು ಸೋಮನಾಥನ ಆಶಿರ್ವಾದದಿಂದ ಯೋಗ ಕೂಡಿ ಬಂದರೆ ಎಲ್ಲವೂ ಸಫಲವಾಗುತ್ತದೆ. ಅದರೊಂದಿಗೆ ನಾವು ಮಾಡುವ ಪ್ರಯತ್ನವೂ ಮುಖ್ಯವಾಗಿದೆ. ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯೋಗವನ್ನು ಜಗದಗಲಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡಿದರು. ಅದಕ್ಕೆ ಅವರನ್ನು ಅಭಿನಂದಿಸೋಣ. ಈ ಯೋಗದ ಮುಖಾಂತರ ನಮ್ಮ ತುಳುನಾಡನ್ನು ಜಗತ್ತಿದೆ ಪರಿಚಯ ಮಾಡಿಕೊಡುತಾಗಲಿ ಎಂದು ಆಶಿಸೋಣ ಎಂದರು.

ದಕ್ಷಿಣ ಕನ್ನಡ ಜಿಲ್ಲೆಗೆ ಈ ರಾಜ್ಯದ ಅಥವಾ ದೇಶದ ಎಲ್ಲ ಆಯಾಮಗಳಿಂದ ನಂಬರ್ 1 ಆಗುವಂತಹ ಯೋಗ್ಯತೆವಿದೆ. ಆ ಯೋಗ್ಯತೆಗೆ ಯೋಗ ಕೂಡಿ ಬರಬೇಕಾದರೆ ಜನರು ಮನಸು ಮಾಡಬೇಕು. ನಮ್ಮೆಲ್ಲರ ಸಂಕಲ್ಪ ಶಕ್ತಿ ಸರಕಾರಕ್ಕೆ ಸರಕಾರೇತರ ಸಂಸ್ಥೆಗಳಿಗೆ ತಲುಪಬೇಕು. ಆಗ ಮಾತ್ರ ಕರಾವಳಿ ಕರ್ನಾಟಕ ಜಗತ್ತಿಗೆ ಗೊತ್ತಾಗಲು ಸಾಧ್ಯ. ತುಳುನಾಡು ಇದು ಒಂದು ಸಾಧ್ಯತೆಗಳ ಸಾಗರ ಎಂದು ನಂಬಿದ್ದು ಸಾಧ್ಯತೆಯನ್ನು ಸಹಕಾರಗೊಳಿಸಲು ಎಲ್ಲರ ಸಂಕಲ್ಪ ಶಕ್ತಿ ಅಗತ್ಯವಿದ್ದು, ಜೊತೆಗೆ ಭಗವಂತನ ಆಶೀರ್ವಾದದ ಅಗತ್ಯವಿದೆ ಎಂದರು. 

ಈ ಬಾರಿ ಸೋಮನಾಥ ಕ್ಷೇತ್ರವನ್ನು ಗುರುತಿಸಲು ಕಾರಣ " ಭಾರತ ಸ್ವತಂತ್ರವಾದ ಸಂದರ್ಭದಲ್ಲಿ   ಗುಜರಾತಿನ ಸೋಮನಾಥ ಕ್ಷೇತ್ರದಿಂದ ಪುನರುತ್ಥಾನ ಪ್ರಾರಂಭವಾಗಿದ್ದು, ಅದೇ ರೀತಿ ಗುಜರಾತಿನ ಸೋಮನಾಥ ಕ್ಷೇತ್ರದಿಂದ ಕರಾವಳಿಯ ಸೋಮನಾಥನವರೆಗೆ ಹೇಗೆ ಹೆಮ್ಮೆಯ ಪ್ರಧಾನ ಮಂತ್ರಿಯನ್ನು ಆಶೀರ್ವಾದ ಮಾಡಿದರೋ ಅದೇ ರೀತಿ ಸೋಮೇಶ್ವರದ ಸೋಮನಾಥ ಈ ಕರಾವಳಿ ಕರ್ನಾಟಕದ ತುಳುನಾಡಿನ ಮಂಗಳೂರಿನ ಸಾಧ್ಯತೆಯನ್ನು ಅನಾವರಣ ಗೊಳಿಸಲು ನಮಗೆಲ್ಲರಿಗೆ ಶಕ್ತಿಯನ್ನು,ಪ್ರೇರಣೆಯನ್ನು ನೀಡಲಿ.

ಮನಸಿಗೆ ಸಂಕಲ್ಪ ಮಾಡುವಂತಾಗಲಿ ಎಂದು ಹೇಳಿದರು. ನಂತರ ನೂರಾರು ಯೋಗ ಪಟುಗಳ ಜೊತೆಗೆ ಕ್ಯಾ. ಚೌಟ ಯೋಗ ಮಾಡಿದರು.

Category
ಕರಾವಳಿ ತರಂಗಿಣಿ