image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪೌರಕಾರ್ಮಿಕರಿಂದ ಕನಿಷ್ಟ ವೇತನ ಹಾಗೂ ಇಎಸ್‌ಐ, ಪಿಎಫ್‌, ಪಿಂಚಣಿ ಮುಂತಾದ ಸವಲತ್ತುಗಳಿಗಾಗಿ ಬೇಡಿಕೆ

ಪೌರಕಾರ್ಮಿಕರಿಂದ ಕನಿಷ್ಟ ವೇತನ ಹಾಗೂ ಇಎಸ್‌ಐ, ಪಿಎಫ್‌, ಪಿಂಚಣಿ ಮುಂತಾದ ಸವಲತ್ತುಗಳಿಗಾಗಿ ಬೇಡಿಕೆ

ಮಂಗಳೂರು : ನಮ್ಮ ದ.ಕ. ಜಿಲ್ಲೆಯಾದ್ಯಂತ ಇರುವ ಗ್ರಾಮ ಪಂಚಯಾತ್ ಗಳಲ್ಲಿ ಸುಮಾರು 150-200 ಮಂದಿಗೂ ಹೆಚ್ಚು ಪೌರಕಾರ್ಮಿಕರು-ಪೌರಕಾರ್ಮಿಕೇಯರು ಮತ್ತು ಕಸ ಸಾಗಿಸುವ ವಾಹನ ಚಾಲಕರು ಸುಮಾರು 10-15 ವರ್ಷಗಳಿಂದ ಸಮಯದ ಪರಿಧಿಯಿಲ್ಲದೆ- ಕನಿಷ್ಟ ವೇತನ ಹಾಗೂ ಇಎಸ್‌ಐ, ಪಿಎಫ್‌, ಪಿಂಚಣಿ ಮುಂತಾದ ಸವಲತ್ತುಗಳನ್ನು ನೀಡದೆ ದಬ್ಬಾಳಿಕೆ ಮಾಡಿ ಶೋಷಣೆ ಮಾಡಿ ದುಡಿಸುತ್ತಿದ್ದಾರೆ ಎಂದು 

ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಸ್. ಪಿ ಆನಂದ್ ತಿಳಿಸಿದರು. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡು, ಸಂಜೀವಿನಿ ಒಕ್ಕೂಟದ ಗುತ್ತಿಗೆದಾರರು ಪೌರಕಾರ್ಮಿಕ-ಕಾರ್ಮಿಕೆಯರನ್ನು ಮತ್ತು ಕಸ ಸಾಗಿಸುವ ವಾಹನ ಚಾಲಕರನ್ನು ಶೋಷಣೆ ಮಾಡುತ್ತಿದ್ದು,  ಗ್ರಾಮ ಪಂಚಾಯತ್ ವತಿಯಿಂದ ಸರಕಾರ ನಿಗದಿಪಡಿಸಿದ ಕನಿಷ್ಟ ವೇತನವನ್ನು ಸದ್ರಿ ಸಂಜೀವಿನಿ ಒಕ್ಕೂಟಕ್ಕೆ ಗ್ರಾಮ ಪಂಚಾಯತ್‌ಗಳು ಪೌರಕಾರ್ಮಿಕರ ವೇತನವನ್ನು ಪಾವತಿಸಿ ಸದ್ರಿ ಸಂಜೀವಿನಿ ಒಕ್ಕೂಟದ ಗುತ್ತಿಗೆದಾರರು ಪೌರಕಾರ್ಮಿಕರಿಗೆ ದಿನಕ್ಕೆ ಕೇವಲ ರೂ. 300-400/- ಮಾತ್ರ ನೀಡಿ ಇತರ ಯಾವುದೇ ಸವಲತ್ತನ್ನು ನೀಡದೆ ಪೌರಕಾರ್ಮಿಕರನ್ನು ಸ್ವಚ್ಛತೆ ಕೆಲಸವನ್ನು ಬಿಡುವು ಇಲ್ಲದೆ ದುಡಿಸಿಕೊಳ್ಳುತ್ತಿದ್ದಾರೆ. ಅದೂ ಅಲ್ಲದೆ ಅವರಿಗೆ ಕೇವಲ 15-20 ದಿನಗಳ ಕೆಲಸವನ್ನು ಮಾತ್ರ ನೀಡಿ ಅವರ ಜೀವನವನ್ನು ನರಕಸದೃಶ್ಯ ಮಾಡುತ್ತಿದ್ದಾರೆ. ಸದ್ರಿ ಪೌರಕಾರ್ಮಿಕರು ಹಾಗೂ ಕಸ ಸಾಗಿಸುವ ವಾಹನ ಚಾಲಕರು ಪರಿಶಿಷ್ಟ ಜಾತಿ ಸಮುದಾಯದವರು ಮತ್ತು ಇತರ ಜಾತಿ ಸಮುದಾಯದವರು ದುಡಿಯುತ್ತಿದ್ದು ಇವರಿಗೆ ಭದ್ರತೆ ಕೂಡಾ ಇಲ್ಲ. ಸದ್ರಿ ಗುತ್ತಿಗೆದಾರರ ದಬ್ಬಾಳಿಕೆಯಿಂದ ಹೆದರಿ ಹೆದರಿ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ. ಪೌರಕಾರ್ಮಿಕರಿಗೆ ಕನಿಷ್ಟ ವೇತನ, ಇಎಸ್‌ಐ, ಪಿಎಫ್ ಹಾಗೂ ರಜೆ, ರಜೆ ಸಂಬಳ ಮುಂತದ ಯಾವುದೇ ಸವಲತ್ತುಗಳನ್ನು ನೀಡುವುದಿಲ್ಲ.

ಉಳ್ಳಾಲ, ಪುತ್ತೂರು, ಬೆಳ್ತಂಗಡಿ, ಸುಳ್ಯ, ಕಡಬ, ಬಂಟ್ವಾಳ, ಮೂಡಬಿದ್ರೆ, ಮುಲ್ಕಿ, ಮಂಗಳೂರು ತಾಲೂಕುಗಳಲ್ಲಿರುವ ಎಲ್ಲಾ ಗ್ರಾಮ ಪಂಚಾಯತ್ ಹಾಗೂ ಇನ್ನೂ ಜಿಲ್ಲೆಯಾದ್ಯಂತ ಹಲವಾರು ಗ್ರಾಮ ಪಂಚಾಯತುಗಳಲ್ಲಿ ಪೌರಕಾರ್ಮಿಕರು ಮತ್ತು ಕಸ ಸಾಗಿಸುವ ವಾಹನ ಚಾಲಕರು 10-15 ವರ್ಷಗಳಿಂದ ಸ್ವಚ್ಛತೆ ಕೆಲಸದಲ್ಲಿ ದುಡಿಯುತ್ತಿದ್ದರೂ ಅವರ ಸೇವೆಯನ್ನು ಖಾಯಂಗೊಳಿಸಲಾಗಿಲ್ಲ, ಅವರಿಗೆ ಕನಿಷ್ಟ ವೇತನ ಮತ್ತು ಇತರ ಸೌಲಭ್ಯ ನೀಡದೆ ಬೆಳಿಗ್ಗೆ 8.00 ಗಂಟೆಯಿಂದ ಸಾಯಂಕಾಲ 6.30 ಗಂಟೆವರೆಗೆ ದುಡಿಸುತ್ತಾ ಕೇವಲ ರೂ. 300-400/-ರಂತೆ ದಿನಕ್ಕೆ ನೀಡಿ ಸದ್ರಿ ಹಣದಲ್ಲಿ ಸದ್ರಿ ಪೌರಕಾರ್ಮಿಕರಿಗೆ ತನ್ನ ಹಾಗೂ ತನ್ನ ಸಂಸಾರದ ಜೀವನ ಸಾಗಿಸಲು ಬೇಕಾಗುವ ಆಹಾರ ಪದಾರ್ಥಗಳು, ಮಕ್ಕಳ ವಿದ್ಯಾಭ್ಯಾಸದ ಖರ್ಚು, ಬಟ್ಟೆಬರೆ ಮುಂತಾದವುಗಳು ಹೊಂದಿಸಲಾಗದೆ ಬಹಳ ಕಷ್ಟ ಹಾಗೂ ನಿಕೃಷ್ಟ ರೀತಿಯಲ್ಲಿ ಜೀವನ ಸಾಗಿಸುತ್ತಿರುವರು. ಸದ್ರಿ ಪೌರಕಾರ್ಮಿಕರಿಗೆ ನ್ಯಾಯವಾಗಿ ಸಿಗಬೇಕಾದ ಸರಕಾರದ ಎಲ್ಲಾ ಕಸವಲತ್ತುಗಳು ಸಿಗಬೇಕಲ್ಲದೆ ಕೇವಲ ಸಂಜೀವಿನಿ ಒಕ್ಕೂಟದ ಗುತ್ತಿಗೆದಾರರಿಗೆ ಹಣ ಮಾಡಲು ಅವರ ಮೂಲಕ ಪೌರಕಾರ್ಮಿಕರಿಗೆ ಸಿಗಬೇಕಾದ ಕನಿಷ್ಟ ವೇತನ ಮುಂತಾದ ಸವಲತ್ತುಗಳಿಂದ ವಂಚಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.

ಗ್ರಾಮ ಪಂಚಾಯತುಗಳ ಅಡಿಯಲ್ಲಿ ಪೌರಕಾರ್ಮಿಕರನ್ನು ಸಂಜೀವಿನಿ ಒಕ್ಕೂಟ ಗುತ್ತಿಗೆಯನ್ನು ರದ್ದುಪಡಿಸಿ ಗುತ್ತಿಗೆದಾರನ ಕಪಿಮುಷ್ಠಿಯಿಂದ ತಪ್ಪಿಸಿ ಸದ್ರಿ ಪೌರಕಾರ್ಮಿಕರಿಗೆ ಗ್ರಾಮ ಪಂಚಾಯತುಗಳೇ ಸರಕಾರ ನಿಗದಿಪಡಿಸಿದ ವೇತನವನ್ನು ಹಾಗೂ ಇಎಸ್‌ಐ, ಪಿಎಫ್ ಮುಂತಾದ ಸವಲತ್ತುಗಳನ್ನು ನೀಡಿ ಅವರ ಪೈಕಿ ಹೆಚ್ಚಿನ ಸೇವಾ ಅವಧಿಯನ್ನು ಪರಿಗಣಿಸಿ ಖಾಯಂ ಪೌರಕಾರ್ಮಿಕರಾಗಿ ನೇರನೇಮಕಾತಿ ಮೂಲಕ ನೇಮಿಸಲು ಹಾಗೂ ಇತರರಿಗೆ ನೇರಪಾವತಿಯಡಿ ವೇತನ ಮುಂತಾದ ಸವಲತ್ತುಗಳನ್ನು ನೀಡಬೇಕೆಂದು ನಮ್ಮ ಸಂಘಟನೆಯ ಕೋರಿಕೆಯಾಗಿರುತ್ತದೆ.

ಈ ಮೇಲಿನ ಗ್ರಾಮ ಪಂಚಾಯತುಗಳ ಅಡಿಯಲ್ಲಿ ದುಡಿಯುತ್ತಿರುವ ಪೌರಕಾರ್ಮಿಕ-ಕಾರ್ಮಿಕೇಯರನ್ನು ಮತ್ತು ಕಸ ಸಾಗಿಸುವ ವಾಹನ ಚಾಲಕರು ಸಂಜೀವಿನಿ ಒಕ್ಕೂಟದ ಗುತ್ತಿಗೆಯನ್ನು ರದ್ದುಪಡಿಸಿ ಗ್ರಾಮ ಪಂಚಾಯತ್ ಅಧೀನದಿಂದಲೇ ಪೌರಕಾರ್ಮಿಕರನ್ನು ನೇರನೇಮಕಾತಿ ಮಾಡಿಕೊಂಡು ಸರಕಾರದ ಸವಲತ್ತುಗಳನ್ನು, ಕನಿಷ್ಟ ವೇತನ, ಇಎಸ್‌ಐ, ಪಿಂಚಣಿ ಸೌಲಭ್ಯಗಳನ್ನು ಸದ್ರಿ ಪೌರಕಾರ್ಮಿಕರಿಗೆ ನೀಡುವುದಲ್ಲದೆ ಕೆಲಸದ ಸಮಯವನ್ನು ನಿರ್ಧರಿಸಿ ಸ್ವಂತ ಮನೆ ಇಲ್ಲದವರಿಗೆ ವಸತಿ ಸೌಲಭ್ಯ ಒದಗಿಸುವುದು ಮುಂತಾದ ಅವರ ಬೇಡಿಕೆಗಳನ್ನಿಟ್ಟು ನಮ್ಮ ಸಂಘಟನೆಯು ದಿನಾಂಕ 15.06.2025ರಲ್ಲು ಮಾನ್ಯ ಶ್ರೀ ಪ್ರೀಯಾಂಕ ಖರ್ಗೆ, ಮಾನ್ಯ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ಸಚಿವರು ಮತ್ತಿತರರಿಗೆ ಮನವಿಯನ್ನು ಸಲ್ಲಿಸಿದ್ದೇವೆ ಎಂದರು.  

 ಪತ್ರಿಕಾಗೋಷ್ಟಿಯಲ್ಲಿ ಅನಿಲ್ ಕುಮಾರ್, ಹೇಮಾ, ನಯನ, ದೀಪ್ತಿ, ಜಯಂತಿ, ವಿದ್ಯಾ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ