ಮಂಗಳೂರು: ಫರಂಗಿಪೇಟೆ ಅರ್ಕುಳ ದಲ್ಲಿರುವ ಡಾ.ತುಂಗಾಸ್ ಮನಸ್ಸಿನಿ ಆಸ್ಪತ್ರೆಯು ಮಾನಸಿಕ ಆರೋಗ್ಯ ಸೇವೆಗಳಿಗೆ ವಿಶೇಷ ತಜ್ಞತೆಯನ್ನು ಹೊಂದಿರುವ ಆಸ್ಪತ್ರೆ, ಇಲ್ಲಿ ರೋಗಿಗಳ ವ್ಯಕ್ತಿಗತ ಆಗತ್ಯಗಳಿಗೆ ಅನುಗುಣವಾಗಿ ಅಧ್ಯಕ್ಷರಾದ ಡಾ. ಮನೋವೈದ್ಯಕೀಯ ಸಮಾಲೋಚನೆಗಳು ಹೊರ ರೋಗಿ,ಒಳರೋಗಿ ಸೇವೆಗಳು ಲಭ್ಯವಿರುತ್ತದೆ ಎಂದು ಸಂಸ್ಥೆಯ ನಿರ್ದೇಶಕರಾದ ರವೀಶ್ ತುಂಗಾ ಐರೋಡಿ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಡಾ. ತುಂಗಾಸ್ ಮನಸ್ಸಿನಿಯು ವಿಶೇಷವಾಗಿ ಮದ್ಯ ಮಾದಕ ದ್ರವ್ಯ ಮತ್ತು ತಂಬಾಕಿನ ಚಟ ಮೊಬೈಲ್ ಗೀಳು, ಆತಂಕ, ಖಿನ್ನತೆ ಚಿತ್ರ ವಿಕಲತೆ ಹಾಗು ಮತ್ತಿತರ ಮಾನಸಿಕ ರೋಗಗಳಿಗೆ ಚಿಕಿತ್ಸೆ ಹಾಗೂ ವಯೋಸಹಜ ಬರುವಂತಹ ಮಾನಸಿಕ ಖಾಯಿಲೆಗಳಿಗೆ ಮಕ್ಕಳಲ್ಲಿ ಕಂಡುಬರುವ ಮಾನಸಿಕ ಖಾಯಿಲೆಗಳಿಗೆ ಚಿಕಿತ್ಸೆ ಮಾತ್ರವಲ್ಲದೆ ಅವರ ಪುನರ್ವಸತಿಗೊಳಿಸುವಲ್ಲಿ ಶ್ರಮಿಸುತ್ತದೆ. ಇದೆ ಬರುವ ಸೆಪ್ಟೆಂಬರ್ 10 -2024 ವಿಶ್ವ ಆತ್ಮಹತ್ಯೆ ತಡೆ ದಿನ, ಸೆಪ್ಟೆಂಬರ್ ೨೧ ವಿಶ್ವ ಅಲ್‌ಐಮೆರ್ಸ್ ದಿನ ಮತ್ತು ಅಕ್ಟೋಬರ್ 10 -2024- ವಿಶ್ವ ಮಾನಸಿಕ ಆರೋಗ್ಯ ದಿನದ "MIND OVER MATTER" ১০ w ಅವಧಿಯ ಸರಣಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಜನಸಾಮಾನ್ಯರಲ್ಲಿ ಮಾನಸಿಕ ಆರೋಗ್ಯ ಬಗ್ಗೆ ಜಾಗೃತಿ ಯನ್ನು ಮೂಡಿಸುವುದು ಮತ್ತು ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸುವುದು. ಸರಣಿ ಕಾರ್ಯಕ್ರಮದ ವಿವರ ನೀಡಿದರು. ಕೊಲಾಜ್ ಸ್ಪರ್ಧೆ : ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ :ಮಾನಸಿಕ ಆರೋಗ್ಯದ ಬಗ್ಗೆ ಅವರತಿಳುವಳಿಕೆ ಮತ್ತು ದ್ರಷ್ಟಿಕೋನಗಳನ್ನು ವ್ಯಕ್ತ ಪಡಿಸಲು ಪ್ರೋತ್ಸಾಹಿಸುವುದು. ಸೋಗನ್ ರಚಿಸುವುದು ಮತ್ತು ಪುಬಂಧ ಸ್ಪರ್ಧೆ : ಸಾರ್ವಜನಿಕರಿಗೆ ಇದು ಮುಕ್ತ ಅವಕಾಶ ಭಾಗವಹಿಸುವವರು ಮಾನಸಿಕ ಆರೋಗ್ಯದ ಮತ್ತು ತಡೆಗಟ್ಟುವಿಕೆಯ ಮೇಲೆ ಕೇಂದ್ರೀಕರಿಸುವ ಚಿಂತನೆಯ ಘೋಷಣೆ ಗಳು ಮತ್ತು ಒಳ ನೋಟವುಳ್ಳ ಪ್ರಬಂಧಗಳು. ಬೀದಿನಾಟಕ ಸ್ಪರ್ಧೆ: ಸಮಾಜ ಕಾರ್ಯ ವಿದ್ಯಾರ್ಥಿಗಳಿಗೆ. ಕಿರುವಿಡಿಯೋ ಮತ್ತು ಈ -ಪೋಸ್ಟರ್ ಸ್ಪರ್ಧೆ ಪಿ ಯು ಸಿ ಮತ್ತು ಪದವಿ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಸುಮನಾ ಪಿಂಟೋ, ಶಶಿಕಲಾ , ವಿನಾಯಕ ಪ್ರಭು ಉಪಸ್ಥಿತರಿದ್ದರು.