image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನೂತನ ಕಾರಾಗೃಹ ನಿರ್ಮಾಣ ಸ್ಥಳಕ್ಕೆ ಗ್ರಹ ಸಚಿವರ ಭೇಟಿ

ನೂತನ ಕಾರಾಗೃಹ ನಿರ್ಮಾಣ ಸ್ಥಳಕ್ಕೆ ಗ್ರಹ ಸಚಿವರ ಭೇಟಿ

ಮಂಗಳೂರು: ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು  ಮುಡಿಪು ಕುರ್ನಾಡು ಸಮೀಪದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಜಿಲ್ಲಾ ಕಾರಾಗೃಹ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದರು.
ನಿರ್ಮಾಣ ಹಂತದ ಕಟ್ಟಡ   ವೀಕ್ಷಿಸಿದ ಅವರು ಕಾಮಗಾರಿಗಳ ಮಾಹಿತಿ ಪಡೆದರು. ಕಾಮಗಾರಿಯನ್ನು ಉತ್ತಮ  ಗುಣಮಟ್ಟದಲ್ಲಿ ತ್ವರಿತಗತಿಯಲ್ಲಿ ನಡೆಸಿ ಆದಷ್ಟು ಬೇಗನೆ ಪೂರ್ಣಗೊಳಿಸಬೇಕು ಎಂದು ಅವರು ಸೂಚಿಸಿದರು.
ಕಾರಾಗೃಹದ ಆವರಣ ಗೋಡೆ ಸೇರಿದಂತೆ ಅತ್ಯುನ್ನತ ಭದ್ರತಾ ವ್ಯವಸ್ಥೆ ನೂತನ ಕಾರಾಗೃಹ  ಸಂಕೀರ್ಣದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.  ಕಾರಾಗೃಹ ಇಲಾಖೆ ಡಿಐಜಿ ದಿವ್ಯಶ್ರೀ ಅವರು ಸಚಿವರಿಗೆ ವಿವರ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಅಶೋಕ್ ಕುಮಾರ್ ರೈ, ಮಂಜುನಾಥ ಭಂಡಾರಿ, ಐವನ್ ಡಿಸೋಜಾ, ಪೆೊಲೀಸ್ ಮಹಾ ನಿರ್ದೇಶಕ ಎಂ.ಎ.ಸಲೀಂ ,  ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಮತ್ತಿತರರು ಇದ್ದರು.

 

Category
ಕರಾವಳಿ ತರಂಗಿಣಿ