ಮಂಗಳೂರು: ನಾಪತ್ತೆಯಾಗಿದ್ದ ಬಿಜೆಪಿ ಮುಖಂಡ ರಮೇಶ್ ರೈ (Ramesh Rai) ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ದಕ್ಷಣ ಕನ್ನಡ (Dakshina Kannada) ಜಿಲ್ಲೆ ಪುತ್ತೂರು ನಗರಸಭೆ ಬಿಜೆಪಿ ಸದಸ್ಯರಾಗಿದ್ದ ರಮೇಶ್ ರೈ ಮನೆಯಿಂದ ನಾಪತ್ತೆಯಾಗಿದ್ದರು.
ಬಳಿಕ ಪಾಣೆಮಂಗಳೂರು ಸೇತುವೆಯ ಬಳಿ ರಮೇಶ್ ರೈ ಮೊಬೈಲ್ ಮತ್ತು ಬೈಕ್ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಹಾಗೂ ಸ್ಥಳೀಯರು ಹುಡುಕಾಟ ನಡೆಸಿದಾಗ ಇಂದು ಪಾಣೆ ಮಂಗಳೂರಿನ ಸೇತುವೆ ಬಳಿಯ ನೀರಿನ ಟ್ಯಾಂಕಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ.