ಕಾಸರಗೋಡು: ಕೇರಳ ಗಡಿ ಜಿಲ್ಲೆ ಕಾಸರಗೋಡಿನಲ್ಲಿ ವಿಪರೀತ ಮಳೆಯಾಗುತ್ತಿದ್ದು, ಪ್ರಸಿದ್ಧ ಮಧೂರು ದೇವಾಲಯದ ಪ್ರಾಂಗಣದೊಳಗೇ ನೀರು ನುಗ್ಗಿದೆ.
ಕಾಸರಗೋಡು ಜಿಲ್ಲೆಯ ಪ್ರಸಿದ್ಧ ಗಣಪತಿ ದೇವರ ಸನ್ನಿಧಿಯಾಗಿರುವ ಮಧೂರು ದೇವಾಲಯದಲ್ಲಿ ಮಧುವಾಹಿನಿ ಹೊಳೆ ನೀರು ನುಗ್ಗಿದ್ದು ಪ್ರಾಂಗಣವಿಡಿ ನೀರಿನಲ್ಲಿ ಮುಳುಗಿದ್ದು,ಇದರಿಂದಾಗಿ ಭಕ್ತರು ನೀರಿನಲ್ಲಿಯೇ ದೇವರಿಗೆ ಪ್ರಾರ್ಥನೆ ಮಾಡುವ ಸ್ಥಿತಿ ಎದುರಾಗಿದೆ. ಪ್ರತೀ ಬಾರಿಯೂ ಇಲ್ಲಿ ಮಳೆಗಾಲದಲ್ಲಿ ನೀರು ದೇವಾಲಯಕ್ಕೆ ನುಗ್ಗುವುದು ಸಾಮಾನ್ಯವಾಗಿದೆ. ಈ ಬಾರಿಯೂ ದೇವಾಲಯದ ಸಮೀಪದಲ್ಲೇ ಇರುವ ಹೊಳೆ ಭಾರೀ ಮಳೆಯಿಂದ ಉಕ್ಕಿ ಹರಿಯುತ್ತಿರುವ ಕಾರಾ ಪ್ರಾಂಗಣಕ್ಕೆ ನೀರು ನುಗ್ಗಿದೆ.