image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

'ವಿಕೆ ಫರ್ನಿಚರ್' ಪಾಲುದಾರಿಕೆಯೊಂದಿಗೆ ಪ್ರಾರಂಭವಾಗಲಿದೆ 'ಸ್ಟಾನ್ಸಿ ಲೈಫ್‌ಸ್ಟೈಲ್ಸ್', ಮಳಿಗೆ

'ವಿಕೆ ಫರ್ನಿಚರ್' ಪಾಲುದಾರಿಕೆಯೊಂದಿಗೆ ಪ್ರಾರಂಭವಾಗಲಿದೆ 'ಸ್ಟಾನ್ಸಿ ಲೈಫ್‌ಸ್ಟೈಲ್ಸ್', ಮಳಿಗೆ

ಮಂಗಳೂರು : ಭಾರತದ ಐಷಾರಾಮಿ ಪೀಠೋಪಕರಣಗಳು ಮತ್ತು ಗೃಹಾಲಂಕಾರ ಬ್ರಾಂಡ್ ಆಗಿರುವ ಸ್ಟಾನ್ಸಿ ಲೈಫ್‌ಸ್ಟೈಲ್ಸ್, ಮಳಿಗೆ ಈಗ ವಿ.ಕೆ ಫರ್ನಿಚರ್ ನ ಸಹಯೋಗದೊಂದಿಗೆ ಮಂಗಳೂರಿನಲ್ಲಿ ತನ್ನ ಮೊದಲ ಮಳಿಗೆ ನಾಳೆ  ನಗರದ ಯೆಯ್ಯಾಡಿಯಲ್ಲಿ  ಶುಭಾರಂಭಗೊಳ್ಳಲಿದೆ ಎಂದು ಸ್ಟಾನ್ಸಿ ಲೈಫ್‌ಸ್ಟೈಲ್ಸ್‌ ನ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಸುನೀಲ್ ಸುರೇಶ್ ರವರು  ತಿಳಿಸಿದ್ದಾರೆ. ಅವರು ತಮ್ಮ ಹೊಸ ಮಳಿಗೆಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶ್ರೀದೇವಿ ಎಜ್ಯುಕೇಶನ್ ಟ್ರಸ್ಟ್ ಚೇರ್‌ಮೆನ್ ಡಾ.ಎ. ಸದಾನಂದ ಶೆಟ್ಟಿ ಮಳಿಗೆಯನ್ನು ಉದ್ಘಾಟಿಸಲಿದ್ದು, ಗಣ್ಯರಾದ ಸುಪ್ರೀತ್ ಆಳ್ವ, ಸುರೇಶ್ ಪೈ, ಚೇತನ್ ಕಾಮತ್, ಗುಲ್ಕನ್ ರಾಯ್ ಪಾಲ್ಗೊಳಿದ್ದಾರೆ ಎಂದರು.

ಮುಂದಿನ ವರ್ಷ ನಮ್ಮ ಸಂಸ್ಥೆ 30 ವರ್ಷ ಪೂರೈಸಲಿದ್ದು, ದೇಶದಲ್ಲಿ 71 ಮಳಿಗೆಯನ್ನು ಹೊಂದಿದೆ. 23 ಮೆಟ್ರೋ ಸಿಟಿಗಳಲ್ಲಿ ನಮ್ಮ ಸಂಸ್ಥೆ ಇದ್ದು ಮಂಗಳೂರಿನಲ್ಲಿ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಲು ಸಜ್ಜಾಗಿದೇವೆಂದು ತಿಳಿಸಿದರು. ಬೆಂಗಳೂರಿನಲ್ಲಿ ನಮಗೆ ಉಡುಪಿ ಮಂಗಳೂರಿನ ಗ್ರಾಹಕರು ಹೆಚ್ಚಾಗಿರುವುದರಿಂದ ಗ್ರಾಹಕರ ಅನುಕೂಲಕ್ಕಾಗಿ ಮಂಗಳೂರಿನಲ್ಲಿಯೇ ಶೋರೂಮ್ ತೆರೆದಿದ್ದೇವೆ.  ನೂತನ ಮಳಿಗೆಯಲ್ಲಿ ಅತ್ಯಾಧುನಿಕ ದರ್ಜೆಯ ಸೋಫಾಗಳು,  ಹಾಸಿಗೆಗಳು, ಡೈನಿಂಗ್ ಟೇಬಲ್, ಆರ್ಮ್‌ಚೇರ್‌ಗಳು ಮುಂತಾದ ಉತ್ಪನ್ನಗಳನ್ನು ಹೊಂದಿದೆ. ಹೈಬ್ರಿಡ್ ಅಂಗಡಿ ಪರಿಕಲ್ಪನೆಯು ಸ್ಟಾನ್ಸಿ ಬೂಟೀಕ್ ಮತ್ತು ಸೋಫಾಗಳು ಒಂದೇ ಸೂರಿನಡಿ ಇಲ್ಲಿ ಲಭ್ಯವಿರಲಿದೆ. ನಮ್ಮ ಸಂಸ್ಥೆಯ ಎಲ್ಲಾ ಉತ್ಪನ್ನಗಳನ್ನು ಒಂದೇ ಫ್ಯಾಕ್ಟರಿಯಲ್ಲಿ ಉತ್ಪಾದನೆ ಮಾಡಲಾಗುತ್ತಿದ್ದು, ಇಲ್ಲಿ ಬಳಸುವ ಮರಗಳು ಮಾನ್ಯತೆ ಪಡೆದುಕೊಂಡಿದೆ. ಪೀಠೋಪಕರಣ, ಲೆದ‌ರ್ ಅನ್ನು ವಿದೇಶಗಳಿಂದ ತರಿಸಲಾಗುತ್ತಿದೆ. ಗ್ರಾಹಕರ ಅಪೇಕ್ಷೆಗೆ ಅನುಗುಣವಾಗಿ ವಿವಿಧ ಗಾತ್ರ, ಬಣ್ಣದ ಸೋಫಾ ಸೆಟ್ ಸಹಿತ ವಿವಿಧ ಉತ್ಪನ್ನಗಳನ್ನು 4-6 ವಾರದೊಳಗೆ ತಯಾರಿಸಿಕೊಡುತ್ತೇವೆ. ಸುಮಾರು ಒಂದು ಲಕ್ಷದಷ್ಟು ಸಂತುಷ್ಟ ಗ್ರಾಹಕರನ್ನು ಸಂಸ್ಥೆ ಹೊಂದಿದೆ ಎಂದು ವಿವರಿಸಿದರು.

ವಿ.ಕೆ.ಸಮೂಹ ಸಂಸ್ಥೆಯ ಮಾಲೀಕ ವಿಠಲ್ ಕುಲಾಲ್ ಮಾತನಾಡಿ, ಇದು ಮಂಗಳೂರಿನ ಜನತೆಗೆ ಶುಭ ಸಮಾಚಾರವಾಗಿದ್ದು,  ಸ್ಪ್ಯಾನ್ಸಿ ಲೈಫ್‌ಸ್ಟೈಲ್‌ನ ವಿಶ್ವದರ್ಜೆಯ ಪೀಠೋಪಕರಣಗಳನ್ನು ಆಯ್ಕೆ ಮಾಡಲು ಇದೊಂದು ಸದವಕಾಶ. ವಿಫುಲ ಆಯ್ಕೆ ಶ್ರೇಣಿಗಳಿದ್ದು, ಗುಣಮಟ್ಟದ ಸೋಫಾ, ಹಾಸಿಗೆ, ಡೈನಿಂಗ್ ಟೇಬಲ್ ಮೊದಲಾದ ಪೀಠೋಪಕರಣಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

Category
ಕರಾವಳಿ ತರಂಗಿಣಿ