image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿಶ್ವ ಹಿಂದೂ ಪರಿಷದ್ ಷಷ್ಠಿಪೂರ್ತಿ ಸಂಭ್ರಮ: ಪ್ರಖಂಡ ಕೇಂದ್ರಗಳಲ್ಲಿ ಸಮ್ಮೇಳನ – ಸಮಾವೇಶಗಳು

ವಿಶ್ವ ಹಿಂದೂ ಪರಿಷದ್ ಷಷ್ಠಿಪೂರ್ತಿ ಸಂಭ್ರಮ: ಪ್ರಖಂಡ ಕೇಂದ್ರಗಳಲ್ಲಿ ಸಮ್ಮೇಳನ – ಸಮಾವೇಶಗಳು

ಮಂಗಳೂರು: ಭಾರತೀಯ ಧರ್ಮ, ಸಂಸ್ಕೃತಿ ಹಿಂದೂ ಜೀವನ ಮೌಲ್ಯಗಳು, ನಂಬಿಕೆ ಮತ್ತು ಸ್ವಾಭಿಮಾನವನ್ನು ರಕ್ಷಿಸಲು ಪ್ರಾರಂಭಗೊಂಡ ವಿಶ್ವದ ಅತೀ ದೊಡ್ಡ ಸಂಘಟನೆ ವಿಶ್ವ ಹಿಂದೂ ಪರಿಷದ್. 1964 ಆಗಸ್ಟ್ 29 ರಂದು ಮುಂಬೈಯ ಸಾಂದೀಪಿನಿ ಆಶ್ರಮದಲ್ಲಿ ಪ್ರಾರಂಭಗೊಂಡ ವಿಶ್ವ ಹಿಂದೂ ಪರಿಷತ್ತಿಗೆ ಈ ವರ್ಷ ಷಷ್ಠಿಪೂರ್ತಿ ಸಂಭ್ರಮ. ಕಳೆದ 60 ವರ್ಷಗಳಲ್ಲಿ ಜಗತ್ತಿನ ಹಿಂದುಗಳನ್ನು ಸಂಘಟಿಸುವ ಕಾರ್ಯದೊಂದಿಗೆ ಹಿಂದೂ ಧರ್ಮದ ಆಚರಣೆ, ಪ್ರಚಾರ, ರಕ್ಷಣೆಯ ಉದ್ದೇಶವನ್ನು ಇಟ್ಟುಕೊಂಡು, ಕೆಲಸಕಾರ್ಯಗಳನ್ನು ಮಾಡುತ್ತಿದೆ. ಅಮೇರಿಕ, ಕೆನಡಾ, ಆಫ್ರಿಕಾ, ಇಂಗ್ಲೆಂಡ್, ಹಂಗೇರಿ, ಜರ್ಮನಿ, ಫ್ರಾನ್ಸ್, ಕಿನ್ಯ, ಫಿಜಿ, ಶ್ರೀಲಂಕಾ, ಇಂಡೋನೇಷ್ಯಾ, ಮಾರಿಷಸ್, ಥಾಯ್ಯಾಂಡ್, ಮಲೇಷಿಯಾ,  ಸೇರಿದಂತೆ 50 ಕ್ಕೂ ಹೆಚ್ಚು ದೇಶಗಳಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕಾರ್ಯ ನಡೆಯುತ್ತಿದೆ. ಈಗ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಷಷ್ಠಿ,ಪೂರ್ತಿ ಸಮಾರೋಪ ಸಮ್ಮೇಳನಗಳು ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ತಿಳಿಸಿದರು. ಅವರು ನಗರದ ವಿಶ್ವ ಹಿಂದೂ ಪರಿಷತ್ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 

ದೇಶಾದ್ಯಂತ ಯೋಜನೆಗೊಂಡ ಕಾರ್ಯಕ್ರಮದಂತೆ ದಕ್ಷಿಣ ಕನ್ನಡ ಜಿಲ್ಲೆಯ 21 ಪ್ರಖಂಡಗಳಲ್ಲಿ ಷಷ್ಠಿಪೂರ್ತಿ ಸಮಾರೋಪದ ಪ್ರಯುಕ್ತ ಬೃಹತ್ ಹಿಂದೂ ಸಮಾವೇಶಗಳು, ಸಮ್ಮೇಳನಗಳು, ಶೋಭಾಯಾತ್ರೆ ಮೆರವಣಿಗೆ ಬೇರೆ ಬೇರೆ ಕ್ರೀಡಾಕೂಟಗಳು. ಧಾರ್ಮಿಕ ಕಾರ್ಯಕ್ರಮಗಳು ಯೋಜನೆಗೊಂಡಿದೆ. ಮಂಗಳೂರು ನಗರದ ನಾಗುರಿ ಪ್ರಖಂಡ, ಬೋಳಾರ ಪ್ರಖಂಡ, ಮಣ್ಣಗುಡ್ಡೆ ಪ್ರಖಂಡ, ಕಾವೂರು ಪ್ರಖಂಡ, ಕೊಡಿಯಾಲಬೈಲ್ ಪ್ರಖಂಡ, ಉಳ್ಳಾಲ ತಾಲೂಕಿನ ಉಳ್ಳಾಲ ನಗರ ಮತ್ತು ಗ್ರಾಮಾಂತರ ಪ್ರಖಂಡ, ಗುರುಪುರ ಪ್ರಖಂಡ ಮೂಡಬಿದ್ರೆ ಪ್ರಖಂಡ, ಮೂಲ್ಕಿ ಪ್ರಖಂಡ, ಬಂಟ್ವಾಳ, ವಿಟ್ಲ, ಪುತ್ತೂರು ನಗರ ಮತ್ತು ಗ್ರಾಮಾಂತರ, ಬೆಳ್ತಂಗಡಿ, ಉಪ್ಪಿನಂಗಡಿ, ವೇಣೂರು, ಕಲ್ಲಡ್ಕ, ಕಡಬ, ಸುಳ್ಯ ಪ್ರುಖಂಡಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವ. ಈ ಕಾರ್ಯಕ್ರಮಗಳಲ್ಲಿ ಪೂಜ್ಯ ಸಾಧುಸಂತರು, ವಿವಿಧ ಕ್ಷೇತ್ರದ ಧಾರ್ಮಿಕ ಮುಖಂಡರು, ಜಾತಿ, ಮತ, ಪಂಥಗಳ ಪ್ರಮುಖರು, ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಹಿಂದೂ ಸಮಾಜದ ಬಂಧುಗಳು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸುವ ನೀರಿಕ್ಷೆ ಇದೆ‌ ಎಂದರು. ಈ ಸಂದರ್ಭದಲ್ಲಿ ಶಿವಾನಂದ ಮೆಂಡನ್, ಎಚ್ ಕೆ ಪುರುಷೋತ್ತಮ, ಮನೋಹರ್ ಸುವರ್ಣ ಮತ್ತು ರವಿ ಅಸೈಗೋಳಿ ಉಪಸ್ಥಿತರಿದ್ದರು.

 

ಅಭಯ್ ಆಗಿರಲಿ ಅಹಮದ್ ಆಗಿರಲಿ ವಿಶ್ವ ಹಿಂದೂ ಪರಿಷದ್ ಅದರ ವಿರುದ್ಧ ಹೋರಾಡುತ್ತದೆ:: ಮಾದಕ ವಸ್ತುಗಳ ಬಳಕೆ ಅಥವಾ ಸಾಗಾಟ ಇದರಲ್ಲಿ ಸಮಾಜಕ್ಕೆ ಆಗುವ ದುಷ್ಟಪರಿಣಾಮಕ್ಕೆ ಕಾರಣ ಅಭಯ್ ಆಗಿರಲಿ ಅಹಮದ್ ಆಗಿರಲಿ ವಿಶ್ವ ಹಿಂದೂ ಪರಿಷದ್ ಅದರ ವಿರುದ್ಧ ಹೋರಾಡುತ್ತದೆ. ಅಂಥ ಕಾರ್ಯ ಯಾವುದೇ ಕಾರ್ಯಕರ್ತರು ಮಾಡಿದರು ಅದು ತಪ್ಪು. ಹಾಗಾಗಿ ಸಂಘಟನೆ ಅವರ ವಿರುದ್ಧ ಹೋರಾಡುತ್ತದೆ. ಈ ಪ್ರಕರಣದಲ್ಲಿ ಯಾವುದೇ ಪಕ್ಷೇಪಾತವಿಲ್ಲದೆ ತನಿಖೆ ನಡೆಯಬೇಕು ಎಂಬುದು ವಿಶ್ವ ಹಿಂದೂ ಪರಿಷದ್ ಅಗ್ರಹಿಸುತ್ತದೆ  ಎಂದು ಶರಣ್ ಪಂಪ್ ವೆಲ್ ಹೇಳಿದರು.

Category
ಕರಾವಳಿ ತರಂಗಿಣಿ