image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸ್ವಸಹಾಯ ಗುಂಪುಗಳ ರಜತ ಮಹೋತ್ಸವ ಸಂಭ್ರಮದಲ್ಲಿ ಸೈನಿಕರ ನಿಧಿಗೆ 3ಕೋಟಿ ರೂಪಾಯಿ ಕೊಡುವುದಾಗಿ ಘೋಷಣೆ ಮಾಡಿದ ಡಾ.ಎಂ.ಎನ್.ರಾಜೇಂದ್ರ

ಸ್ವಸಹಾಯ ಗುಂಪುಗಳ ರಜತ ಮಹೋತ್ಸವ ಸಂಭ್ರಮದಲ್ಲಿ ಸೈನಿಕರ ನಿಧಿಗೆ 3ಕೋಟಿ ರೂಪಾಯಿ ಕೊಡುವುದಾಗಿ ಘೋಷಣೆ ಮಾಡಿದ ಡಾ.ಎಂ.ಎನ್.ರಾಜೇಂದ್ರ

ಮಂಗಳೂರು: ಆಪರೇಷನ್ ಸಿಂಧೂರದ ಮೂಲಕ  ದೇಶ ಸೈನಿಕರ ನಿಧಿಗೆ 3ಕೋಟಿ ರೂ. ನೀಡುವುದಾಗಿ ನವೋದಯ ಗ್ರಾಮವಿಕಾಸ ಚ್ಯಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕ ಡಾ.ಎಂ.ಎನ್.ರಾಜೇಂದ್ರ ಕುಮಾರ್  ಅವರು ನಗರದ ಬಂಗ್ರಕೂಳೂರು ಗೋಲ್ಡ್ ಪಿಂಚ್‌ ಸಿಟಿಯಲ್ಲಿ ನಡೆದ ನವೋದಯ ಗ್ರಾಮವಿಕಾಸ ಚ್ಯಾರಿಟೇಬಲ್ ಟ್ರಸ್ಟ್‌ನ ಸ್ವಸಹಾಯ ಗುಂಪುಗಳ ರಜತ ಮಹೋತ್ಸವ ಸಂಭ್ರಮದಲ್ಲಿ ಘೋಷಿಸಿದ್ದಾರೆ. ನಂತರ ಮಾತಾಡಿದ ಅವರು, ಈ 25ವರ್ಷಗಳಲ್ಲಿ ಮಹಿಳೆಯರನ್ನು ಪುರುಷರಿಗೂ ಸಮಾನರಾಗಿ ತಯಾರಿಸಿದ್ದೇವೆ. ಈ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನ ಕಂಡಿದ್ದಾರೆ. ಈ ಸಮಾರಂಭಕ್ಕೆ ಬರುವವರು ಯಾವ ಜಾತಿ ಮತ, ಬಡವ ಶ್ರೀಮಂತರೆಂದು ತಾರತಮ್ಯ ಮಾಡಬಾರದು ಎಂದು ಎಲ್ಲಾ ಮಹಿಳೆಯರಿಗೆ ಒಂದೇ ತರದ ಸೀರೆಯ ಸಮವಸ್ತ್ರ ನೀಡಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ನನ್ನ ರಾಜಕೀಯ ಜೀವನ ಸಹಕಾರಿ ಆಗಿ ಆರಂಭಿಸಿದ್ದೆ. 25ವರ್ಷಗಳ ಹಿಂದೆ ಎಸ್.ಎಂ.ಕೃಷ್ಣರ ಸಂಪುಟದಲ್ಲಿದ್ದ ಸಂದರ್ಭ ಇಂತಹದ್ದೇ ಸಹಕಾರಿ ಜ್ಯೋತಿಯನ್ನು ಬೆಳಗಿಸಿದ್ದೆ. ಇದೀಗ 25 ವರ್ಷಗಳಿಂದ ಈ ಜ್ಯೋತಿ ಮಹಿಳೆಯರ ಬಾಳಿನಲ್ಲಿ ನಿರಂತರವಾಗಿ ಬೆಳಗುತ್ತಿದೆ. ನಾವು ಹೆಣ್ಣು ಮಕ್ಕಳಿಗೆ ಆರ್ಥಿಕ ಶಕ್ತಿತುಂಬಲು ಕಾರ್ಯಕ್ರಮ ಮಾಡಿದ್ದೇವೆ. ಕರಾವಳಿಯಲ್ಲಿ ಡಾ.ಎಂಎನ್.ರಾಜೇಂದ್ರ ಕಾರ್ ಅವರು ಸಹಕಾರಿ ಧುರೀಣರಾಗಿ ಮಹಿಳೆಯರ ಆರ್ಥಿಕ ಬಲ ತುಂಬಲು ನವೋದಯ ಚಾರಿಟೇಬಲ್ ಟ್ರಸ್ಟ್ ಆರಂಭಿಸಿದರು. ಇದೀಗ ಈ ಸ್ವಸಹಾಯ ಗುಂಪಿನಲ್ಲಿರುವ ಲಕ್ಷಾಂತರ ಮಂದಿ ತಾಯಂದಿರು ತಮ್ಮ ಕುಟುಂಬವನ್ನು ಸಾಕುತ್ತಿದ್ದಾರೆ. ಇಂದು ಇಷ್ಟೊಂದು ದೊಡ್ಡ ಮಹಿಳಾ ಸಾಗರವನ್ನು ಕಂಡು "ಇದು ಭಾಗ್ಯ"ವೆಂದು ಡಿ.ಕೆ.ಶಿವಕುಮಾರ್ ಹೇಳಿದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ, ದೇಶದ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿಯಿದೆ. ಈ ಸಂದರ್ಭ ಈ‌ ಸಮಾವೇಶದಲ್ಲಿ ಸೈನಿಕರ ನಿಧಿಗೆ 3 ಕೋಟಿ ರೂ. ಘೋಷಿಸಿರುವುದಕ್ಕೆ ಅಭಿನಂದನೆ. ಈ‌ ದೇಶ, ಸೇನೆ, ಕೇಂದ್ರ ಸರಕಾರದ ನಿರ್ಧಾರಗಳನ್ನು ಎಲ್ಲರೂ ಸಮರ್ಥಿಸಿ. ಈ ಪರಿಸ್ಥಿತಿಯಲ್ಲಿ ನಾವೆರಲ್ಲರೂ ಒಗ್ಗಟ್ಟಾಗಿ ದೇಶದೊಂದಿಗೆ ನಿಲ್ಲಬೇಕು ಎಂದರು.ಈ ಸಹಕಾರಿ ಸಮಾವೇಶ ದೇಶದಲ್ಲೇ ನಡೆದ ಐತಿಹಾಸಿಕ ಸಮಾವೇಶ. ಸಹಕಾರಿ ಕ್ಷೇತ್ರ ಸ್ವಾವಲಂಬನೆಯ ಪ್ರತೀಕ. ನವೋದಯ ಸ್ವಸಹಾಯ ಗುಂಪುಗಳ ಮೂಲಕ 'ಸಬ್‌ಕಾ ಸಹಕಾರ್ ಸಬ್‌ಕಾ‌ ಉದ್ದಾರ್' ಪರಿಕಲ್ಪನೆ ಸಾಕಾರಗೊಂಡಿದೆ. ಸಹಕಾರ ಸಂಘಗಳು ಸ್ವ ಉದ್ಯೋಗವನ್ನು ಉತ್ತೇಜಿಸುತ್ತದೆ‌. ಸ್ವ ಸಹಾಯ ಸಂಘಗಳು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಶಕ್ತಿ ನೀಡಿವೆ ಸಬಲೀಕರಣಗೊಳಿಸಿವೆ. ವೋಕಲ್ ಫಾರ್ ಲೋಕಲ್ ಉದ್ದೇಶ  ಸಹಕಾರ ಕ್ಷೇತ್ರದಿಂದ ಸಾಕಾರಗೊಳ್ಳುತ್ತಿದೆ‌. ಅಭಿವೃದ್ಧಿ ಪರ್ವ ಕೇವಲ ನಗರ ಪ್ರದೇಶದಿಂದ ಮಾತ್ರವಲ್ಲ ಗ್ರಾಮೀಣ ಪ್ರದೇಶದಿಂದಲೂ ಆಗುತ್ತದೆ ಎಂಬುದನ್ನು ಸಹಕಾರ ಕ್ಷೇತ್ರ ತೋರಿಸಿ ಕೊಟ್ಟಿದೆ. ದೇಶದ ಆರ್ಥಿಕತೆಗೆ ಸಹಕಾರ ಕ್ಷೇತ್ರ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ‌ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸಂತೃಪ್ತಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ರಜತ ಸಂಭ್ರಮದ ಹಿನ್ನೆಲೆಯಲ್ಲಿ ಡಾ.ಎಂ.ಎನ್.ರಾಜೇಂದ್ರ ಕುಮಾರ್ ದಂಪತಿಗಳನ್ನು ಅಭಿನಂದಿಸಲಾಯಿತು. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಸಹಕಾರಿ ಲಾಂಛನ ಅನಾವರಣವನ್ನು ಅನಾವರಣಗೊಳಿಸಿದರು. ಸುಮಾರು ಒಂದೂವರೆ ಲಕ್ಷದಷ್ಟು ಮಂದಿ ಮಹಿಳೆಯರು ನೀಲಿ ಸೀರೆಯ ಸಮವಸ್ತ್ರದಲ್ಲಿ ಕಾಣಿಸಿಕೊಂಡು ರಜತ ಸಂಭ್ರಮ ಐತಿಹಾಸಿಕ ಸಮಾವೇಶಕ್ಕೆ ಸಾಕ್ಷಿಯಾಯಿತು.

ಸ್ಪೀಕರ್ ಯು ಟಿ ಖಾದರ್, ಸಹಕಾರಿ ಸಚಿವ ಕೆ.ಎನ್.ರಾಜಣ್ಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಶಾಸಕ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ, ಅಶೋಕ್ ರೈ, ಯಶ್ ಪಾಲ್ ಸುವರ್ಣ ಗುರ್ಮೆ ಸುರೇಶ್ ಶೆಟ್ಟಿ ಸೇರಿದಂತೆ ಹಲವಾರು ರಾಜಕೀಯ ನಾಯಕರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ