image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಐಸಿವೈಎಂ ಮಂಗಳೂರು ಧರ್ಮಪ್ರಾಂತ್ಯದ 2024-2025ರ ಅವಧಿಗೆ ಅಧ್ಯಕ್ಷರಾಗಿ ವಿನ್‌ಸ್ಟನ್ ಸಿಕ್ವೇರಾ ಆಯ್ಕೆ

ಐಸಿವೈಎಂ ಮಂಗಳೂರು ಧರ್ಮಪ್ರಾಂತ್ಯದ 2024-2025ರ ಅವಧಿಗೆ ಅಧ್ಯಕ್ಷರಾಗಿ ವಿನ್‌ಸ್ಟನ್ ಸಿಕ್ವೇರಾ ಆಯ್ಕೆ

ಮಂಗಳೂರು: ಐಸಿವೈಎಂ ಮಂಗಳೂರು ಧರ್ಮಪ್ರಾಂತ್ಯದ 2024-2025 ರ ಪದಾಧಿಕಾರಿಗಳ ಚುನಾವಣೆಯು ಜುಲೈ 7 , 2024 ರಂದು ಮಂಗಳೂರಿನ ರೊಸಾರಿಯೊ ಕ್ಯಾಥೆಡ್ರಲ್ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷರಾಗಿ ವಿನ್‌ಸ್ಟನ್ ಸಿಕ್ವೇರಾ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ನಿಹಾನ್ ಸಿಕ್ವೇರಾ, ಮಹಿಳಾ ಉಪಾಧ್ಯಕ್ಷರಾಗಿ ರಿಯಾನಾ ಡಿ'ಕುನ್ಹಾ, ಪ್ರಧಾನ ಕಾರ್ಯದರ್ಶಿಯಾಗಿ ಆಶ್ಲಿನ್ ಅವಿತಾ ಡಿಸೋಜಾ, ಜಂಟಿ ಕಾರ್ಯದರ್ಶಿಯಾಗಿ ಡಾ. ಜಾಯ್ಸ್ಟನ್ ಡಿಸೋಜ ಮತ್ತು ವಿಲ್ಸನ್ ಪಿಂಟೋ ಸಾಮಾಜಿಕ ಕಾಳಜಿಯ ಪ್ರತಿನಿಧಿಯಾಗಿ ಆಯ್ಕೆಯಾದರು.

ಮಂಗಳೂರಿನ ರೊಸಾರಿಯೋ ಕೆಥೆಡ್ರಲ್‌ನಲ್ಲಿ ಬಲಿಪೂಜೆಯ ನಂತರ ವಾರ್ಷಿಕ ಸಾಮಾನ್ಯ ಸಭೆಯು ನಡೆಯಿತು. 2023-24 ಅಧ್ಯಕ್ಷ ಮಿಥೇಶ್ ಡಿಸೋಜ ಎಲ್ಲರನ್ನು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ವಿಲ್ಮಾ ಲೋಬೋ ವರ್ಷದ ವಾರ್ಷಿಕ ವರದಿಯನ್ನು ಸಮಗ್ರವಾಗಿ ಮಂಡಿಸಿದರು.

2024-25 ರ ಪದಾಧಿಕಾರಿಗಳ ಚುನಾವಣೆಯು ICYM ಮಂಗಳೂರು ಚುನಾವಣಾಧಿಕಾರಿ ಫಾ. ವಿಜಯ್ ವಿಕ್ಟರ್ ಲೋಬೋರವರು ನಡೆಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ಫಾ. ಮ್ಯಾಕ್ಸಿಮ್ ನೊರೊನ್ಹಾ, ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ರೋಶನ್ ಲೋಬೋ ಮತ್ತು ಫಾ. ಆಲ್ಫ್ರೆಡ್ ಜೆ ಪಿಂಟೋ ಮತ್ತು ಅತಿಥಿಗಳಾಗಿ ಮಂಗಳೂರು ಧರ್ಮಪ್ರಾಂತ್ಯದ ಚುನಾವಣಾಧಿಕಾರಿ ಫಾ. ವಿಜಯ್ ವಿಕ್ಟರ್ ಲೋಬೋ, ಐಸಿವೈಎಂ ಮಂಗಳೂರು ಧರ್ಮಪ್ರಾಂತ್ಯದ ನಿರ್ದೇಶಕ ಫಾ. ಅಶ್ವಿನ್ ಲೋಹಿತ್ ಕಾರ್ಡೋಜ ಉಪಸ್ಥಿತರಿದ್ದರು. 

ವಿಯೋಲಾ ಲೂಯಿಸ್ ಕಾರ್ಯಕ್ರಮ ನಿರೂಪಿಸಿದರು.

ಎಲ್ಲಾ DEXCO ಪದಾಧಿಕಾರಿಗಳು, ಕೇಂದ್ರ ಕೌನ್ಸಿಲ್ ಸದಸ್ಯರು ಮತ್ತು ಡೀನರಿಗಳು ಮತ್ತು ಘಟಕಗಳ ಪ್ರತಿನಿಧಿಗಳು ಭಾಗವಹಿಸಿದರು.

Category
ಕರಾವಳಿ ತರಂಗಿಣಿ