image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಬ್ಬರ್ ಟ್ಯಾಪಿಂಗ್‌ಗೆ ತೆರಳಿದ್ದ ವೇಳೆ ಕಾಡಾನೆ ದಾಳಿ: ಮಹಿಳೆ ಮೃತ್ಯು... ಪರಿಹಾರಕ್ಕೆ ಶಾಸಕರ ಒತ್ತಾಯ

ರಬ್ಬರ್ ಟ್ಯಾಪಿಂಗ್‌ಗೆ ತೆರಳಿದ್ದ ವೇಳೆ ಕಾಡಾನೆ ದಾಳಿ: ಮಹಿಳೆ ಮೃತ್ಯು... ಪರಿಹಾರಕ್ಕೆ ಶಾಸಕರ ಒತ್ತಾಯ

ಪುತ್ತೂರು : ಇಲ್ಲಿನ ಕೊಳ್ತಿಗೆ ಗ್ರಾಮದ ಕಣಿಯಾರು ಮಲೆ ಅರ್ತಿಯಡ್ಕ ಸಿಆರ್‌ಸಿ ಕಾಲನಿ ಬಳಿ ಕಾಡಾನೆ ದಾಳಿಗೆ ತುತ್ತಾಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಪೆರ್ಲಂಪಾಡಿ ಸಮೀಪದ ಅರ್ತಿಯಡ್ಕ ಎಂಬಲ್ಲಿನ ನಿವಾಸಿ ಮೃತಪಟ್ಟ ಮಹಿಳೆಯಾಗಿದ್ದು, ಇಂದು ಮುಂಜಾನೆ ಮಹಿಳೆ ಸಹಿತ ಮೂವರು ರಬ್ಬ‌ರ್ ಟ್ಯಾಪಿಂಗ್‌ಗೆ ಮಾಡಲು ತೆರಳಿದ್ದರು.ಈ ಸಂದರ್ಭದಲ್ಲಿ ಕಣಿಯಾರು ಮಲೆ ಎಂಬಲ್ಲಿ ಅವರನ್ನು ಆನೆ ಅಟ್ಟಿಸಿಕೊಂಡುಬಂದಿದೆ. ಆಗ ಮೂವರು ಓಡಲು ಪ್ರಟರಂವಿದ್ದರೆ. ಉಳಿದ ಇಬ್ಬರು ಓಡಿ ತಪ್ಪಿಸಿಕೊಂಡರೆ, ಮಹಿಳೆಯೂ ಓಡುವ ಸಂದರ್ಭದಲ್ಲಿ ಬಿದ್ದಿದ್ದು, ಆಗ ಆನೆಯು ಅವರ ಮುಖ ಮತ್ತು ಹೊಟ್ಟೆಯ ಭಾಗಕ್ಕೆ ತುಳಿದಿದೆ, ಇದರಿಂದಾಗಿ ಮಹಿಳ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಅಗಮಿಸಿ ಪರಿಶೀಲನೆ ನಡೆಸಿದ್ದು, ಮೃತರ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 150000 ಪರಿಹಾರ ನೀಡಬೇಕೆಂದು ಶಾಸಕ ಅಶೋಕ್ ರೈ ಆದೇಶಿಸಿದ್ದಾರೆ.

Category
ಕರಾವಳಿ ತರಂಗಿಣಿ