image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆಯಲ್ಲಿ ಗೆದ್ದು ಬೀಗಿದ ಡಾ. ಎಮ್ ಎನ್ ಆರ್ ನೇತ್ರತ್ವದ ತಂಡ...

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆಯಲ್ಲಿ ಗೆದ್ದು ಬೀಗಿದ ಡಾ. ಎಮ್ ಎನ್ ಆರ್ ನೇತ್ರತ್ವದ ತಂಡ...

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಮುಂದಿನ 5 ವರ್ಷಗಳ ಅವಧಿಗೆ ಶನಿವಾರ ನಡೆದ ಆಡಳಿತ ಸಹ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಗೆ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ನೇತೃತ್ವದ ಬಳಗ ಭರ್ಜರಿ ದೆ ಗೆಲುವು ಲಭಿಸಿದ್ದು,ಹಾಲು ಒಕ್ಕೂಟದ ಆಡಳಿತ ಮಂಡಳಿಯ ಒಟ್ಟು 16 ಸ್ಥಾನಗಳಿಗೆ ನಡೆದ ಪೈಪೋಟಿಯ ಚುನಾವಣೆಯಲ್ಲಿ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಬಳಗದಲ್ಲಿ ಗುರುತಿಸಿಕೊಂಡ 13 ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ. ಅದರಲ್ಲೂ ಉಡುಪಿ ಜಿಲ್ಲೆ " ಯಿಂದ ಸ್ಪರ್ಧಿಸಿದ ಎಂಟಕ್ಕೆ ಎಂಟೂ ಮಂದಿಯೂ ಜಯ ಗಳಿಸಿದ್ದಾರೆ. ಇಲ್ಲಿಂದ ಬಿಜೆಪಿಯ  ಸಹಕಾರ ಭಾರತಿಯಿಂದ ಸ್ಪರ್ಧಿಸಿದ್ದ ಎಲ್ಲ ಸದಸ್ಯರೂ ಪರಾಭವಗೊಂಡಂತಾಗಿದೆ.

ಗೆದ್ದವರು:

ಕುಂದಾಪುರ ವಿಭಾಗ (ಉಡುಪಿ ಜಿಲ್ಲೆ)-ಬೆಳಪು ದೇವಿಪ್ರಸಾದ್ ಶೆಟ್ಟಿ (165), ಉದಯ (172), ಎಸ್.ಪ್ರಕಾಶ್ಚಂದ್ರ ಶೆಟ್ಟಿ (185), ಎನ್. ಮಂಜಯ್ಯ ಶೆಟ್ಟಿ ಸಬ್ಲಾಡಿ (145), ರವಿರಾಜ ಹೆಗ್ಡೆ ಕೊಡವೂರು (220), ಕೆ.ಶಿವಮೂರ್ತಿ ಉಪಾಧ್ಯ (124),ಮುಡಾರು ಸುಧಾಕರ್ ಶೆಟ್ಟಿ (162), ಉಡುಪಿ ಜಿಲ್ಲಾ ಮಹಿಳಾ ವಿಭಾಗ-ಹದ್ದೂರು ಮಮತಾ ಆರ್. ಶೆಟ್ಟಿ (190) 

ಮಂಗಳೂರು  ಉಪವಿಭಾಗ-ಕೆ.ಪಿ.ಸುಚರಿತ ಶೆಟ್ಟಿ (99), ನಂದರಾಮ್ ರೈ (97), ಬಿ.ಸುಧಾಕರ ರೈ (97), ಪುತ್ತೂರು ಉಪ ವಿಭಾಗ-ಕೆ.ಚಂದ್ರಶೇಖರ (169), ಎಸ್.ಬಿ.ಜಯರಾಮ ರೈ (190), ಎಚ್.ಪ್ರಭಾಕರ್ (157), ಭರತ್ ಎನ್. (173), ದಕ್ಷಿಣ ಕನ್ನಡ ಮಹಿಳಾ ಅಭ್ಯರ್ಥಿ ಸ್ಥಾನ- ಸವಿತಾ ಶೆಟ್ಟಿ (235). ವಿಜೇತರಿಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಅಭಿನಂದನೆ ಸಲ್ಲಿಸಿದ್ದಾರೆ.

ಬಿಜೆಪಿಗೆ ಮುಖಭಂಗ:

ದಕ ಹಾಲು ಉತ್ಪಾದಕರ ಒಕ್ಕೂಟವನ್ನು ತನ್ನ ತೆಕ್ಕೆಗೆ ತರಲು ಸಂಸದರು, ಶಾಸಕರು, ಸಂಘ ಪರಿವಾರದ ಮೂಲಕ ಮಾಡಿದ ಪ್ರಯತ್ನ ವಿಫಲವಾಗಿದ್ದು, ಈ ಹಿಂದೆ ಬಿಜೆಪಿ ಬೆಂಬಲಿತರೇ ಒಕ್ಕೂಟದ ಅಧ್ಯಕ್ಷರಾಗಿದ್ದರು. ಈ ಬಾರಿ ಸಹಕಾರಿ ಭಾರತಿ ಹೆಸರಿನಲ್ಲಿ ಬಹಿರಂಗ ಪ್ರಚಾರ ಮಾಡಲಾಗಿತ್ತು.  

ಒಕ್ಕೂಟದಲ್ಲಿ 2009ರವರೆಗಿನ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿದಿದ್ದರೆ, 2009 ಹಾಗೂ 2014ರಲ್ಲಿ ಅವಿರೋಧ ಆಯ್ಕೆ ನಡೆದು ಸಹಕಾರ ಭಾರತಿ ಬೆಂಬಲಿಗರು ಆಡಳಿತ ನಡೆಸಿದ್ದರು. ಈ ಬಾರಿ ಅವಿರೋಧ ಆಯ್ಕೆಗೆ ಭಾರಿ ಕಸರತ್ತು ನಡೆಸಿದರೂ, ಒಮ್ಮತದ ಆಯ್ಕೆ ಸಾಧ್ಯವಾಗದೆ ಚುನಾವಣೆ ನಡೆದಿದೆ.

ನಿಕಟಪೂರ್ವ ಅಧ್ಯಕ್ಷ ಸುಚರಿತ ಶೆಟ್ಟಿ ಅವರಿಗೆ ಈ ಬಾರಿ ಸಹಕಾರ ಭಾರತಿಯಿಂದ ಸ್ಪರ್ಧೆಗೆ ಅವಕಾಶ ನಿರಾಕರಿಸಲಾದ ಕಾರಣ ಇದನ್ನು ವಿರೋಧಿಸಿ ಸುಚರಿತ ಶೆಟ್ಟಿ ಡಾ.ಎಂಎನ್‌ಆರ್‌ ಬಳಗದ ಮೂಲಕ ಸವಾಲೊಡ್ಡಿ ಗೆದ್ದು ಬೀಗಿದ್ದಾರೆ. ಒಕ್ಕೂಟದ ಮಾಜಿ ಅಧ್ಯಕ್ಷ ರವಿರಾಜ ಎನ್‌. ಶೆಟ್ಟಿ ವಿಜಯ ಪತಾಕೆ ಹಾರಿಸಿದರೆ, ಕಾಪು ದಿವಾಕರ ಶೆಟ್ಟಿ ಪರಾಭವಗೊಂಡಿದ್ದಾರೆ.

Category
ಕರಾವಳಿ ತರಂಗಿಣಿ