image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಕರ್ನಾಟಕ ಉಲಮಾ ಒಕ್ಕೂಟದ ನೇತೃತ್ವದಲ್ಲಿ ಕಣ್ಣೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ- ಅಬ್ದುಲ್ ನಾಸೀರ್ ಲಕ್ಕಿಸ್ಟಾರ್

ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಕರ್ನಾಟಕ ಉಲಮಾ ಒಕ್ಕೂಟದ ನೇತೃತ್ವದಲ್ಲಿ ಕಣ್ಣೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ- ಅಬ್ದುಲ್ ನಾಸೀರ್ ಲಕ್ಕಿಸ್ಟಾರ್

ಮಂಗಳೂರು: ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಕರ್ನಾಟಕ ಉಲಮಾ ಒಕ್ಕೂಟದ ನೇತೃತ್ವದಲ್ಲಿ ಕಣ್ಣೂರಿನಲ್ಲಿ  ನಡೆಯಲಿರುವ ಬೃಹತ್ ಪ್ರತಿಭಟನಾ ಸಮಾವೇಶಕ್ಕೆ ಬೇಕಾದ ಸಿದ್ಧತೆ ಅಂತಿಮ ಹಂತದಲ್ಲಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಖಾಝಿಗಳ ನೇತೃತ್ವದಲ್ಲಿ ನಡೆಯುವ ಪ್ರತಿಭಟನೆ ಪ್ರಯುಕ್ತ ಉಲಮಾಗಳು ಪೂರ್ವಬಾವಿ ಸಿದ್ಧತೆ ನಡೆಸಿದ್ದಾರೆ.  ಉಡುಪಿ, ಮಡಿಕೇರಿ, ಚಿಕ್ಕಮಗಳೂರು ಭಾಗದ ಜನ ಭಾಗಿಯಾಗಲಿದ್ದು ಎರಡು ಸಾವಿರ ಸ್ವಯಂ ಸೇವಕರು ಕಾರ್ಯ ನಿರ್ವಹಿಸಲಿದ್ದಾರೆ. ಮೂರು ಗಂಟೆಗೆ ಕಣ್ಣೂರು ದರ್ಗಾ ಝಿಯಾರತ್ ನಡೆಯಲಿದ್ದು ನಾಲ್ಕು ಗಂಟೆಗೆ ಸಭಾ ಕಾರ್ಯಕ್ರಮ ಆರಂಭಗೊಂಡು 6:30ಕ್ಕೆ ಕಾರ್ಯಕ್ರಮ ಮುಗಿಯಲಿದೆ ಎಂದು ವಕ್ಪ್ ಸಲಹಾ ಸಮಿತಿಯ ಜಿಲ್ಲಾಧ್ಯಕ್ಷರಾದ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್  ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಹಿಂದೆ ಉಲಮಾಗಳ ನಾಯಕತ್ವದ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು ವಕ್ಪ್ ತಿದ್ದುಪಡಿ ವಿರುದ್ಧದ ಹೋರಾಟ ಮುಸ್ಲಿಂ ಸಮುದಾಯಕ್ಕೆ ಬಲ ತುಂಬಿದ್ದು ಕಾರ್ಯಕ್ರಮದಲ್ಲಿ ಭಾಗಿಯಾಗುವುದು ನಮ್ಮ ಕರ್ತವ್ಯ ಎಂದು ಭಾವಿಸಿ ಜನ ಭಾಗವಹಿಸಲಿದ್ದಾರೆ. ಎಲ್ಲೆಡೆ ದೊಡ್ಡ ಮಟ್ಟದ ಪ್ರಚಾರ ನಡೆದಿದ್ದು ಉದ್ಯಮಿಗಳು ಉದ್ಯಮ ಸ್ಥಗಿತಗೊಳಿಸಿ ಭಾಗವಹಿಸಲಿದ್ದಾರೆ. 

ಪೊಲೀಸ್ ಇಲಾಖೆ ಸ್ಥಳ ಪರಿಶೀಲನೆ ನಡೆಸಿದ್ದು ಎರಡು ಸುತ್ತಿನ ಸಭೆ ನಡೆದಿದೆ.  ಸಮಾವೇಶದಲ್ಲಿ ಬೈಕ್ ರ್ಯಾಲಿ, ಸಂಘಟನೆಯ ಅಥವಾ ಹಸಿರು ಬಾವುಟ, ಘೋಷಣೆಗಳಿಗೆ ನಿಷೇಧವಿದೆ. ಪ್ರಚೋದನಕಾರಿ ಭಾಷಣಗಳಿಗೆ ಅವಕಾಶವಿಲ್ಲ.  ಎಂದು ನಾಸಿರ್ ಹೇಳಿದರು. 

ಡಾ.ಎಂಎಸ್ಎಂ ಝೈನಿ ಕಾಮಿಲ್ ಮಾತನಾಡಿ,  ಸ್ಥಳೀಯರು, ಪೊಲೀಸ್ ಇಲಾಖೆ, ಜಿಲ್ಲಾ ವಕ್ಫ್ ಸಮಿತಿಯ ಸಹಕಾರದಲ್ಲಿ ಸಿದ್ಧತೆ ನಡೆದಿದೆ.  ಮೂರು ಗಂಟೆಗೆ ಜನರು ಇಲ್ಲಿಗೆ ಬಂದು ತಲುಪಬೇಕು. ಭಾರತದ ರಾಷ್ಟ್ರಧ್ವಜ ಕಟ್ಟಿಕೊಂಡು ಬರುವ ವಾಹನಗಳಿಗೆ ಪ್ರವೇಶವಿದ್ದು, ಬಸ್ಸುಗಳಲ್ಲಿ ಬರುವವರಿಗೆ ಸಮಾವೇಶಕ್ಕೆ ಬರಲು ಪಂಪ್ ವೆಲ್ ಮತ್ತು ಬಿ.ಸಿ.ರೋಡ್ ನಿಂದ ವಾಹನದ ವ್ಯವಸ್ಥೆ ಮಾಡಲಾಗಿದೆ. ವಿಶಾಲ ಪಾರ್ಕಿಂಗ್, ಎರಡು ಬಾರಿ ನಮಾಝ್ ವ್ಯವಸ್ಥೆ ಮಾಡಲಾಗಿದೆ. ಕಣ್ಣೂರು ಮಸೀದಿಯ ಪದಾಧಿಕಾರಿಗಳು ವ್ಯವಸ್ಥೆಯನ್ನು ನೋಡಿಕೊಂಡಿದ್ದಾರೆ ಎಂದರು. 

ಪ್ರತಿಯೊಬ್ಬ ಪ್ರಜೆಯ ಹೋರಾಟ ವಕ್ಫ್ ಕಾಯ್ದೆ ತಿದ್ದುಪಡಿ ವಿರುದ್ಧ ಹೋರಾ  ಕೇವಲ ಮುಸಲ್ಮಾರದ್ದು ಮಾತ್ರವಲ್ಲ, ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.  ವಕ್ಫ್ ಬಗ್ಗೆ ಜನರಲ್ಲಿ ತಪ್ಪು ಭಾವನೆ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಯು.ಕೆ.ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಖೇದ ವ್ಯಕ್ತಪಡಿಸಿದರು. ಅಕ್ರಮವಾಗಿ ಒಂದಿಂಚೂ ಭೂಮಿ ವಕ್ಫ್ ಮಾಡಲು ಸಾಧ್ಯವಿಲ್ಲ‌. ಅಕ್ರಮ ಜಮೀನಿನಲ್ಲಿ ಕಟ್ಟಿದ ಮಸೀದಿ, ಅನಾಥಾಶ್ರಮ ಎಂದಿಗೂ ವಕ್ಫ್ ಆಗುವುದಿಲ್ಲ, ಅದನ್ನು ಅಲ್ಲಾಹನು ಸ್ವೀಕರಿಸುವುದಿಲ್ಲ. ಟಿಪ್ಪು ಸುಲ್ತಾನ್ ಮಠ, ಮಂದಿರಗಳಿಗೆ ಜಮೀನು ನೀಡಿದರೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಮಸೀದಿಗೆ ಜಮೀನು ಮಾತ್ರವಲ್ಲದೆ, ಮಸೀದಿಯನ್ನೂ ಕಟ್ಟಿ ಕೊಟ್ಟಿದ್ದಾರೆ. ಮಂದಿರ, ದೇವಸ್ಥಾನಗಳಿಗೆ ಆಂಧ್ರ ಮತ್ತು ತಮಿಳ್ನಾಡಿನಲ್ಲಿರುವಷ್ಟು ಜಮೀನು ವಕ್ಫ್ ನಲ್ಲಿಲ್ಲ. ಇರುವ ಕೆಲವು ಜಮೀನು ದೊಡ್ಡ ಶ್ರೀಮಂತರ ವಶದಲ್ಲಿದ್ದು, ಕೆಲವು ಭೂಮಸೂಧೆ ಸಂದರ್ಭ ಹೋಗಿದೆ. ಕೆಲವು ಚಿಕ್ಕಾಸಿಗೆ ಲೀಸ್ ನಲ್ಲಿ ಪಡೆದುಕೊಂಡಿದ್ದಾರೆ‌. ವಕ್ಫ್ ಭೂಮಿಯನ್ನು  ಉಳಿಸಿಕೊಳ್ಳುವ ಜವಾಬ್ದಾರಿ ಸರ್ಕಾರದ್ದಾಗಿದೆ.  

ಅನ್ಯಾಯವಾಗಿ ಮಠ, ಮಂದಿರದ ಭೂಮಿಯನ್ನು ಎಲ್ಲಾದರೂ ಕಬಳಿಸಿದ್ದರೆ ನಾವು ಅದರ ವಿರುದ್ಧ ಇದ್ದೇವೆ ಎಂದು ದಾರಿಮಿ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ  ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಖಾಸಿಂ ದಾರಿಮಿ ಕಿನ್ಯ, ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ, ಮೆಹಬೂಬ್ ಸಖಾಫಿ ಕಿನ್ಯ, ಅಶ್ರಫ್ ಕಿನಾರ ಇನ್ನಿತರರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ