image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮುಂಬೈನಿಂದ ಮದುವೆಗೆ ಬಂದು ಸುರತ್ಕಲ್ ಬೀಚ್ ನಲ್ಲಿ ನೀರುಪಾಲಾದ ಯುವಕರು

ಮುಂಬೈನಿಂದ ಮದುವೆಗೆ ಬಂದು ಸುರತ್ಕಲ್ ಬೀಚ್ ನಲ್ಲಿ ನೀರುಪಾಲಾದ ಯುವಕರು

ಮಂಗಳೂರು ; ಸುರತ್ಕಲ್‌ನ NITK ಬೀಚ್‌ನಲ್ಲಿ ಮುಂಬೈನಿಂದ ಮಂಗಳೂರಿಗೆ ಬಂದಿದ್ದ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ನಡೆದಿದೆ. ಮದುವೆಗೆಂದು ಬಂದಿದ್ದ ಕುಟುಂಬದಲ್ಲಿ 10 ಮಂದಿ ಬೀಚ್ ಗೆ ತೆರಳಿದ್ದು ಆ ಸಂದರ್ಭದಲ್ಲಿ ಇಬ್ಬರು ಯುವಕರು ನೀರಿನಲ್ಲಿ ಆಟವಾಡುವಾಗ  ಘಟನೆ ನಡೆದಿದ್ದು, ಯುವಕರು ಧ್ಯಾನ್ ಬಂಜನ್  ಹಾಗೂ ಹನೀಶ್ ಎಂದು ಕುಲಾಲ್ ತಿಳಿದುಬಂದಿದೆ. ಸೂರಿಂಜೆ ನಿವಾಸಿ ಶ್ರೀ ಪ್ರಖ್ಯಾತ್ ಎಂಬವರ ಕುಟುಂಬದ ಒಟ್ಟು 10 ಜನರು NITK ಬೀಚ್‌ಗೆ ಬಂದಿದ್ದು, ನೀರಿನಲ್ಲಿ ಈಜಾಡುತ್ತಿರುವಾಗ ಧ್ಯಾನ್ ಮತ್ತು ಅಪ್ರಾಪ್ತ ಬಾಲಕ ಅನೀಶ್ ಇಬ್ಬರೂ ಮುಳುಗಿದ್ದಾರೆ. ಸ್ಥಳದಲ್ಲಿದ್ದ ಜೀವರಕ್ಷಕರು ಧ್ಯಾನ್ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು ಮತ್ತು ವೈದ್ಯಕೀಯ ಸಹಾಯಕ್ಕಾಗಿ ತಕ್ಷಣ ಪದ್ಮಾವತಿ ಆಸ್ಪತ್ರೆಗೆ ದಾಖಲಿಸಿದ್ದರು ದುರದೃಷ್ಟವಶಾತ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ತಿಳಿಸಿದ್ದಾರೆ.

15 ವರ್ಷದ ಅಪ್ರಾಪ್ತ ಬಾಲಕ ಇನ್ನೂ ಸಮುದ್ರದಲ್ಲಿ ನಾಪತ್ತೆಯಾಗಿದ್ದು ಸ್ಥಳೀಯ ಪೊಲೀಸರು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ಜೀವರಕ್ಷಕರ ಸಹಾಯದಿಂದ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಪೊಲೀಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ