image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಎಪ್ರಿಲ್ 13 ರಂದು ಕರಾವಳಿ ಸಂಗೀತ ಕಲಾವಿದರ ಒಕ್ಕೂಟದಿಂದ 'ಸಂಗೀತದೊಂದಿಗೆ ಸ್ವಚ್ಛತೆ'

ಎಪ್ರಿಲ್ 13 ರಂದು ಕರಾವಳಿ ಸಂಗೀತ ಕಲಾವಿದರ ಒಕ್ಕೂಟದಿಂದ 'ಸಂಗೀತದೊಂದಿಗೆ ಸ್ವಚ್ಛತೆ'

ಮಂಗಳೂರು: ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ರಿ. ದ.ಕ. ಉಡುಪಿ ಜಿಲ್ಲೆ 300ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡ ಸಂಘಟನೆ ಆಗಿರುತ್ತದ್ದು, ಕೇವಲ ಸಾಂಸ್ಕೃತಿಕವಾಗಿ ಸಂಸ್ಥೆಯನ್ನು ತೊಡಗಿಸಿಕೊಳ್ಳದೆ ಚಾರಿಟೇಬಲ್ ಆಗಿ ಸಾಮಾಜಿಕ ಕಳಕಳಿಯಿಂದ ಸಂಗೀತ ಕಲಾವಿದರ ಸಮಸ್ಯೆಗಳಿಗೆ ಸ್ಪಂದಿಸಿ ಆರ್ಥಿಕ ಸಹಾಯವನ್ನು ಒದಗಿಸುವ ಕೆಲಸ ಮಾಡುತ್ತಾ ಬಂದಿದೆ. ಇದೀಗ ಪರಿಸರ ನೈರ್ಮಲ್ಯಕ್ಕೆ ಸಂಬಂಧಿಸಿದ "ಸಂಗೀತದೊಂದಿಗೆ ಸ್ವಚ್ಛತೆ" ಎಂಬ ಕಾರ್ಯಕ್ರಮವನ್ನು ತಾ. 13.04.2025 ಆದಿತ್ಯವಾರ ಬೆಳಿಗ್ಗೆ 7.30 ರಿಂದ 12.00 ಗಂಟೆಯ ವರೆಗೆ ನಗರದ ಲಾಲ್ ಬಾಗ್ ನಿಂದ ಉರ್ವ ಮೈದಾನದ ತನಕ ಹಮ್ಮಿಕೊಳ್ಳಲಾಗಿದೆ ಎಂದು ಕರಾವಳಿ ಸಂಗೀತ ಕಲಾವಿದರ ಸಂಘದ ಅಧ್ಯಕ್ಷರಾದ ಕೇಶವ ಕನಿಲ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ನಂತರ ಮಾತನಾಡಿದ ಜಗದೀಶ್ ಶೆಟ್ಟಿ ಮಾತನಾಡಿ, ಅನಾಥಾಶ್ರಮ, ವೃದ್ಧಾಶ್ರಮ, ಕಾರಾಗೃಹ ಮತ್ತು ಶಾಲೆಗಳಲ್ಲಿ ಉಚಿತ ಸಂಗೀತ, ಊಟೋಪಚಾರ ಹಾಗೂ ಉಪಯುಕ್ತ ಸಲಕರಣೆಗಳನ್ನು ವಿತರಣೆ ಮಾಡಲಾಗಿದೆ. ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆಗೆ ಸ್ವರ ಕುಡ್ಲ ಸಂಗೀತ ಸ್ಪರ್ಧೆ, ಸಂಗೀತ ಕಾರ್ಯಾಗಾರಗಳು, ಅಲ್ಲದೆ ಸಾಧಕರಿಗೆ ಸನ್ಮಾನ, ಸೌಹಾರ್ದ ಸಂಗೀತ, ಬಹುಭಾಷಾ ಕವಿಗೋಷ್ಠಿ ಇತ್ಯಾದಿ ಕಳೆದ 15 ವರ್ಷಗಳಿಂದ ಪ್ರತಿವರ್ಷ ನಡೆಸುತ್ತಿರುವ ಚಟುವಟಿಕೆಗಳಾಗಿದೆ. ಸಂಗೀತ ಕಲಾವಿದರು ಯಾವುದೇ ಬಾಷೆ, ಧರ್ಮದ ಹಂಗಿಲ್ಲದೆ  ಕಲಾ ಸೇವೆ ಮಾಡುತ್ತಿದ್ದಾರೆ.  ಈಗ ಸ್ವಚ್ಚತಾ ಮನೋಭಾವವನ್ನು ಹುಟ್ಟಿಸುವ ಅಭಿಯಾನವನ್ನು ಮಾಡುತ್ತಿದ್ದೇವೆ. ಇದಕ್ಕೆ ಮುನ್ನೂರು ಜನ ಸೇರುವ ನಿರೀಕ್ಷೆಯಿದ್ದು, ಮಂಗಳೂರು ಮಹಾನಗರ ಪಾಲಿಕೆಯ ಮುಂದೆ ಕಾರ್ಯಕ್ರಮ ಪ್ರಾರಂಬಿಸಿ, ಉರ್ವ ಮೈದಾನದಲ್ಲಿ ಸಮಾಪನಗೊಳ್ಳಲಿದೆ. ಸ್ವಚ್ಛತಾ ಕಾರ್ಯದ ಆಯಾಸ ಮರೆಯಲು ದಾರಿಯುದ್ದಕ್ಕೂ ದೇಶಭಕ್ತಿಗೀತೆ, ಸಮೂಹಗಾನ, ಇತ್ಯಾದಿ ಸಂಗೀತದೊಂದಿಗೆ ನಡೆಯುವ ಈ ಪರಿಸರ ನೈರ್ಮಲ್ಯ ಕಾರ್ಯಕ್ರಮವನ್ನು ಸಂಗೀತ ಕಲಾವಿದರು ನಡೆಸುವ ಈ ಸ್ವಚ್ಛತಾ ಕಾರ್ಯಕ್ರಮವನ್ನು ರೋಹನ್ ಕಾರ್ಪೋರೇಷನ್‌ ಆಡಳಿತ ನಿರ್ದೇಶಕರಾದ ರೋಹನ್‌ ಮೊಂತೆರೋ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಸೀನ ಶೆಟ್ಟಿ ಭಾಗವಹಿಸಲಿದ್ದಾರೆ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ದನು ಕುಮಾರ್, ರಾಮ್ ಕುಮಾರ್, ಹರಿಣಿ, ಮಹಮ್ಮದ್ ಇಕ್ಬಾಲ್, ರಮೇಶ್ ಸಾಲಿಯಾನ್ ಮತ್ತು ತೋನ್ಸೆ ಪುಷ್ಕಳ ಕುಮಾರ್ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ