ಮಂಗಳೂರು: ಎಸ್‌ಜಿಇಸಿ ಎರೋ ಎಂಬುದು ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ಏರೋ ಮಾಡೆಲಿಂಗ್ ಕ್ಲಬ್ ಆಗಿದ್ದು, ಮಾನವರಹಿತ ವೈಮಾನಿಕ ವಾಹನಗಳಿಗೆ (ಆರ್.ಸಿ ವಿಮಾನಗಳು ಮತ್ತು ಡೋನ್‌ಗಳು) ಸಂಬಂಧಿಸಿದಂತೆ ವಾಯುಯಾನ ಕ್ಷೇತ್ರದಲ್ಲಿ ನಾವೀನ್ಯತೆಯನ್ನು ಸೃಷ್ಟಿಸುವ ಗುರಿಯೊಂದಿಗೆ ಸ್ಥಾಪಿಸಲಾಗಿದ್ದು, ಮಾರ್ಚ್ 28 ರಿಂದ 30 ರವರೆಗೆ ತಮಿಳುನಾಡಿನ ಕರ್ಪಗ ವಿನಾಯಕ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದಲ್ಲಿ ನಡೆದ ಎಸ್.ಎ.ಇ.ಐ.ಎಸ್.ಎಸ್ ಡೋನ್ ಡೆವಲಪ್‌ಮೆಂಟ್ ಚಾಲೆಂಜ್ 2025 ರಲ್ಲಿ ಎಸ್‌ಜಿಇಸಿ ಏರೋ ತಂಡವು 'ಮೈಕ್ರೋ ಏರ್‌ಕ್ರಾಫ್ಟ್' ವಿಭಾಗದಲ್ಲಿ ಭಾರತದಾದ್ಯಂತ ವಿವಿಧ ವಿಭಾಗದಲ್ಲಿ 80 ಕ್ಕೂ ಅಧಿಕ ತಂಡಗಳೊಂದಿಗೆ ಸ್ಪರ್ಧಿಸಿ, ಅಸಾಧಾರಣ ಏರೋನಾಟಿಕಲ್ ಎಂಜಿನಿಯರಿಂಗ್ ಕೌಶಲ್ಯಗಳನ್ನು ಪ್ರದರ್ಶಿಸಿ. ಪ್ರಥಮ ಸ್ಥಾನಗಳಿಸಿ ಚಾಂಪಿಯನ್‌ಗಳಾಗಿ ಹೊರಹೊಮ್ಮಿರುವುದು ಸಂತಸ ತಂದಿದೆ ಎಂದು ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ರಿಯೋ ಡಿ ಸೋಜಾ ತಿಳಿಸಿದರು.
ಕಾಲೇಜಿನ ಅವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ತಂಡವು ತಾಂತ್ರಿಕ ಪ್ರಸ್ತುತಿ ವಿಭಾಗದಲ್ಲಿ ಎರಡನೇ ಸ್ನಾನವನ್ನು ಪಡೆದು, ಡೋನ್ ತಂತ್ರಜ್ಞಾನ ಮತ್ತು ಸಿಸ್ಟಮ್ ವಿನ್ಯಾಸದಲ್ಲಿ ಅವರ ಪರಿಣತಿಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ.ಈ ಸ್ಪರ್ಧೆಯ ಯಶಸ್ಸಿಗೆ ತಂಡದ ನಾಯಕ-ಅಕ್ಷಯ್ ಬಂಗೇರಾ, ಪೈಲಟ್ - ಮನ್ನಿಶ್ ಎಂ ಕೆ.
ಸೈದ್ಧಾಂತಿಕ ತಂಡ - ಜೀವಿತ್ ಜಿ, ಆದಿತ್ಯ ಆರ್. ಗುರುಮಾಧವ ಎಚ್. ರಾಹುಲ್ ಟಿ ಪಿ. ವಿನ್ಯಾಸ ತಂಡ - ಜೀವಿತ್ ಜಿ. ಮನ್ನಿಸ್ ಎಂ ಕೆ. ಅಕ್ಷಯ್ ಬಂಗೇರಾ, ಲೇಖ್ಯಾ ಶೆಟ್ಟಿ, ಕಂಪ್ಯೂಟೇಶನಲ್ ತಂಡ -ರಿಜಿಶ್ ಎ ಜಿ, ರೇಣಿಕಾ ಯತೀಶ್, ಸ್ಟ್ಯಾಂಜಿಲ್ ಫ್ರೆಮಿನ್ ಮೆನೆಜಿಸ್, ಅಕ್ಷಯ್ ಬಂಗೇರಾ ಶ್ರಮಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರೆ. ಫಾ.ವಿಲ್ಫ್ರೆಡ್ ಪ್ರಕಾಶ್ ಡಿ ಸೋಜಾ, ಅಕ್ಷಯ್ ಬಂಗೇರ ಮತ್ತು ಡಾ. ಪುರುಷೋತ್ತಮ ಚಿಪ್ಪಾರ್ ಉಪಸ್ಥಿತರಿದ್ದರು.