ಮಂಗಳೂರು :ಭಾಷೆ, ಸಂಸ್ಕೃತಿ, ಕಲೆ ಯನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ತೆಲುಗು ಸಿನಿಮಾ ನಟ ಡಾ ರಾಜಶೇಖರ್ ಹೇಳಿದರು.ತೆಲುಗು ಕಲಾ ಸಮಿತಿ ವತಿಯಿಂದ ಪಣಂಬೂರು ನವ ಮಂಗಳೂರು ಬಂದರು ಪ್ರಾಧಿಕಾರ ಸಭಾಂಗಣ ದಲ್ಲಿ ಆಯೋಜಿಸಲಾದ ಯುಗಾದಿ ಸಂಭ್ರಮ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ತೆಲುಗು ಭಾಷೆ ಮಾತನಾಡುವವರು ಒಟ್ಟಾಗಿ ಸೇರಿ ಎಲ್ಲಾ ರೀತಿಯ ಹಬ್ಬಯನ್ನು ಕುಟುಂಬದ ಹಬ್ಬವಾಗಿ ಆಚರಣೆ ಮಾಡುವುದು ತುಂಬಾ ಖುಷಿಯ ವಿಚಾರವಾಗಿದೆ ಎಂದು ಹೇಳಿದರು.ಇದೇ ವೇಳೆ ಸ್ಪಂದನ ಮ್ಯಾಗಜಿನ್ ನನ್ನು ತೆಲುಗು ನಟಿ ಜೀವಿತಾ ರಾಜಶೇಖರ್ ಬಿಡುಗಡೆ ಗೊಳಿಸಿದರು.ನವ ಮಂಗಳೂರು ಬಂದರು ಪ್ರಾಧಿಕಾರ ಅಧ್ಯಕ್ಷ ಡಾ ವೆಂಕಟ ರಮಣ ಅಕ್ಕರಾಜು ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀಮತಿ ಸುಷ್ಮಾ ವೆಂಕಟ ರಮಣ ಅಕ್ಕರಾಜು, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮುಖ್ಯ ಅತಿಥಿಯಾಗಿದ್ದರು. ಸಮಿತಿ ಗೌರವಾಧ್ಯಕ್ಷ ಸಾಂಬಶಿವರಾವ್ ನಡೆಲ್ಲಾ,ಅಧ್ಯಕ್ಷ ರಾಮ ಚಂದರ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ರಾವ್,ಮಹಿಳಾ ವಿಭಾಗದ ಅಧ್ಯಕ್ಷೆ ನಳಿನಿ, ಉಪಸ್ಥಿತರಿದ್ದರು.