image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬೋಳೂರು ಶ್ರೀ ಬಾಲ ಆಂಜನೇಯ ದೇವಸ್ಥಾನದಲ್ಲಿ ಬ್ರಹ್ಮ ಕಲಶೋತ್ಸವ ಸಲುವಾಗಿ ಕರಸೇವೆ

ಬೋಳೂರು ಶ್ರೀ ಬಾಲ ಆಂಜನೇಯ ದೇವಸ್ಥಾನದಲ್ಲಿ ಬ್ರಹ್ಮ ಕಲಶೋತ್ಸವ ಸಲುವಾಗಿ ಕರಸೇವೆ

ಮಂಗಳೂರು : ಇಲ್ಲಿನ ಬೋಳೂರು ಶ್ರೀ ಬಾಲ ಆಂಜನೇಯ ದೇವಸ್ಥಾನ ದ ಲ್ಲಿ ಪುನರ್ ಪ್ರತಿಷ್ಠೆ, ಬ್ರಹ್ಮ ಕಲಶೋತ್ಸವ ಹಾಗೂ ಅಮೃತ ಮಹೋತ್ಸವ ಕಾರ್ಯಕ್ರಮ ವು ಏಪ್ರಿಲ್ ತಾ. 3 ರಿಂದ ತಾ. 6 ರ ತನಕ ನಡೆಯಲಿದ್ದು, ಈ ಸಲುವಾಗಿ ಸಾನಿಧ್ಯ ಪರಿಸರದ ನಿರ್ಮಲೀಕರಣ ಬಗ್ಗೆ ಕರಸೇವೆ ಯು ಶನಿವಾರ ಜರಗಿತು.

ಬೋಳೂರು ಮೊಗವೀರ ಮಹಾಸಭಾದ ಸದಸ್ಯರು, ಬೋಳೂರು, ತಣ್ಣೀರುಬಾವಿ ಮತ್ತು ಬೊಕ್ಕಪಟ್ಟಣ ಬೆಂಗ್ರೆ ಮಹಿಳಾ ಸಭಾದ ಸದಸ್ಯೆಯರು, ಸ್ಥಳೀಯ ಯುನೈಟೆಡ್ ಕ್ಲಬ್, ಬತ್ತೆರಿ ಫ್ರೆಂಡ್ಸ್, ಮೊಗವೀರ ಫ್ರೆಂಡ್ಸ್, ಬಾಲ ಆಂಜನೇಯ ಮಂದಿರ, ಶೇಷಶಯನ ಭಜನಾ ಮಂದಿರ, ವಿಷ್ಣು ವಿಠೋ ಭ ಭಜನಾ ಮಂದಿರ, ಕಂಪ್ಯೂಟರ್ ಫ್ರೆಂಡ್ಸ್, ಜಯಲಕ್ಷ್ಮಿ ಫ್ರೆಂಡ್ಸ್ ಮುಂತಾದ ಸಂಘಟನೆಗಳ ಕಾರ್ಯಕರ್ತರು ಕಾರಸೇವೆಯಲ್ಲಿ ಭಾಗವಹಿಸಿದ್ದರು.

ಇದೇ ಸಂದರ್ಭ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮ ಗಳ ಪ್ರಚಾರ ರಥಕ್ಕೆ ಚಾಲನೆ ನೀಡಲಾಯಿತು.

ಮೊಗವೀರ ಗ್ರಾಮ ಸಭಾದ ಅಧ್ಯಕ್ಷ ಯಶವಂತ ಪಿ. ಮೆಂಡನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಲ್ಡರ್ ಬಾಬಾ ಅಲಂಕಾರ್ ಪ್ರಚಾರ ರಥಕ್ಕೆ ಚಾಲನೆ ನೀಡಿದರು. ಮಹಿಳಾ ಸಂಘಗಳಮುಂದಾಳುಗಳಾದ ಉಷಾರಾಣಿ, ಯೋಗಿನ ಬಂಗೇರ, ಭಾರತಿ ಸುವರ್ಣ, ಚಂಪಾ ಮಾಧವ ಪುತ್ರನ್, ಮೊದಲಾದವರು ಸದಸ್ಯೆಯವರೊಂದಿಗೆ ಉಪಸ್ಥಿತರಿದ್ದರು. ಕಾರ್ಯದರ್ಶಿ ಯಶವಂತ ಬೋಳೂರು ಸ್ವಾಗತಿಸಿದರು. ಸಂಚಾಲಕ ಜಗದೀಶ್ ಬಂಗೇರ ವಂದಿಸಿದರು.

Category
ಕರಾವಳಿ ತರಂಗಿಣಿ